ಆಸ್ತಿ ವಾಪಸ್ ಕೊಡುವಂತೆ ಪತಿ ಒತ್ತಾಯ – ಕರುಣಾಜನಕ ಕಥೆ ಬಿಚ್ಚಿಟ್ಟ ಉಪೇಂದ್ರ `ಶ್ರೀಮತಿ’ ಚಿತ್ರನಟಿ
ಕನ್ನಡದಲ್ಲಿ ಉಪೇಂದ್ರ ಜೊತೆ `ಶ್ರೀಮತಿ’ ಚಿತ್ರ ಸೇರಿದಂತೆ ಬಾಲಿವುಡ್ (Bollywood) ಹಾಗೂ ಟಾಲಿವುಡ್ (Tollywood) ಸಿನಿಮಾಗಳಲ್ಲಿ ನಟಿಸಿದ್ದ ಸೆಲೀನಾ ಜೇಟ್ಲಿ (Celina Jaitly) ಮದುವೆ ಬಳಿಕ ಅಭಿನಯಕ್ಕೆ ಗುಡ್ಬೈ ಹೇಳಿದ್ದರು. ಜರ್ಮನಿಯ ಪೀಟರ್ ಹಾಗ್ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದ ಸೆಲೀನಾಗೆ ಮೂವರು ಮಕ್ಕಳಿದ್ದಾರೆ. ಈ ನಡುವೆ ಪತಿ ವಿರುದ್ಧ ಗಂಭೀರ ಆರೋಪಗಳ

ಕನ್ನಡದಲ್ಲಿ ಉಪೇಂದ್ರ ಜೊತೆ `ಶ್ರೀಮತಿ’ ಚಿತ್ರ ಸೇರಿದಂತೆ ಬಾಲಿವುಡ್ (Bollywood) ಹಾಗೂ ಟಾಲಿವುಡ್ (Tollywood) ಸಿನಿಮಾಗಳಲ್ಲಿ ನಟಿಸಿದ್ದ ಸೆಲೀನಾ ಜೇಟ್ಲಿ (Celina Jaitly) ಮದುವೆ ಬಳಿಕ ಅಭಿನಯಕ್ಕೆ ಗುಡ್ಬೈ ಹೇಳಿದ್ದರು. ಜರ್ಮನಿಯ ಪೀಟರ್ ಹಾಗ್ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದ ಸೆಲೀನಾಗೆ ಮೂವರು ಮಕ್ಕಳಿದ್ದಾರೆ. ಈ ನಡುವೆ ಪತಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ವಿಚ್ಛೇದನವನ್ನೂ ಕೋರಿದ್ದಾರೆ ಎಂದು ಹೇಳಿಕೊಂಡಿದ್ದರು. ಇದೀಗ ದಾಂಪತ್ಯ ಕಲಹದ ಇನ್ನಷ್ಟು ವಿಚಾರಗಳನ್ನ ನಟಿ ಬಿಚ್ಚಿಟ್ಟಿದ್ದಾರೆ. ನಟಿ ಸೆಲೀನಾ ಜೇಟ್ಲಿ ಇದೀಗ, ಪತಿ ಜೊತೆ ವಿಚ್ಛೇದನ ಹೋರಾಟದ ಕಠಿಣ ಪತಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಜೊತೆಗಿನ ಸಂದರ್ಶನದಲ್ಲಿ ಒಂದಷ್ಟು ಗಂಭೀರ ವಿಚಾರಗಳನ್ನು ಹೇಳಿಕೊಂಡ ನಟಿ, ಪತಿ ತಮ್ಮ ಎಲ್ಲಾ ಆಸ್ತಿಯನ್ನು ವರ್ಗಾಯಿಸಲು ಒತ್ತಾಯಿಸಿದ್ದಾರೆ. ಹೀಗಾಗಿ ಜೀವನಾಂಶವೇ ಸಿಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಹುಕಾಲದ ಮುನಿಸು ಅನ್ಶುಲಾ ಮದುವೆಯಲ್ಲಿ ಅಂತ್ಯ.. ಕಪೂರ್ ಕುಟುಂಬದಲ್ಲಿ ಸಂತಸ ಇದೇ ವೇಳೆ ಮಹಿಳೆಯರಿಗೆ ಸಲಹೆ ನೀಡಿರುವ ನಟಿ, ಮದುವೆಯಾಗುವ ಹುಡುಗನ ಜೊತೆ ವಿವಾಹಪೂರ್ವ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಬೇಕು. ತಮ್ಮದೇನಾದರೂ ಆಸ್ತಿಯನ್ನು ಹೊಂದಿದ್ದರೆ ಅದರ ಸಂಪೂರ್ಣ ಹಕ್ಕು, ಅಧಿಕಾರ ಸ್ವಂತವಾಗಿರಬೇಕು. ಇದುವೇ ಸುರಕ್ಷಿತ ಮಾರ್ಗ ಎಂದು ತಿಳಿಸಿದ್ದಾರೆ. ತಮ್ಮದೇ ಜೀವನವನ್ನ ಮುಂದಿಟ್ಟು ಉದಾಹರಣೆ ಕೊಟ್ಟ ಸೆಲೀನಾ 20 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತಿ ವರ್ಗಾಯಿಸುವಂತೆ ಕೇಳುತ್ತಿದ್ದಾರೆ. ಹೀಗಾಗಿ ಪತಿಯೊಂದಿಗೆ ವಿಭಿನ್ನ ಕಾನೂನು ಹೋರಾಟ ನಡೆಸುತ್ತಿದ್ದೇನೆ. ಇದೀಗ ಅನೇಕ ವರ್ಷಗಳ ಗ್ಯಾಪ್ ಬಳಿಕ ನಟನೆಗೆ ಮರಳಿರುವ ಸೆಲೀನಾ ಜೇಟ್ಲಿ, ಸಿಸ್ಟರ್ ನಿವೇದಿತಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.ಇದನ್ನೂ ಓದಿ: ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ- ತನ್ನನ್ನು ತಾನೇ ಸಂತೈಸಿಕೊಂಡ ಕೃಷಿ