ದಾಂಪತ್ಯ ಜೀವನದ ಪಯಣಕ್ಕೆ ಮತ್ತೊಂದು ವರ್ಷದ ಸಂಭ್ರಮ:ರಮೇಶ್ ಅರವಿಂದ್ ವಿಶೇಷ ಪೋಸ್ಟ್
ಕನ್ನಡದ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಮತ್ತು ನಿರೂಪಕ ರಮೇಶ್ ಅರವಿಂದ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 1991ರ ಜುಲೈ 7ರಂದು ರಮೇಶ್ ಅರವಿಂದ್ ಅವರು ಅರ್ಚನಾ ಅವರನ್ನು ವಿವಾಹವಾದರು. ಈ ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದಾರೆ.ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ರಮೇಶ್ ಅರವಿಂದ್ ಅವರು, ಸಾಮಾಜಿಕ ಮಾಧ್ಯಮ

ಕನ್ನಡದ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಮತ್ತು ನಿರೂಪಕ ರಮೇಶ್ ಅರವಿಂದ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 1991ರ ಜುಲೈ 7ರಂದು ರಮೇಶ್ ಅರವಿಂದ್ ಅವರು ಅರ್ಚನಾ ಅವರನ್ನು ವಿವಾಹವಾದರು. ಈ ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದಾರೆ.ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ರಮೇಶ್ ಅರವಿಂದ್ ಅವರು, ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪತ್ನಿ ಜೊತೆಗೆ ಫೋಟೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ದೀರ್ಘಕಾಲದ ವೈವಾಹಿಕ ಜೀವನದ ಕುರಿತು ಬರೆದುಕೊಂಡಿದ್ದಾರೆ. View this post on Instagram ‘ಇಂದು ನಾವಿಬ್ಬರೂ ಹಂಚಿಕೊಂಡಿರುವ ಜೀವನದ ಮತ್ತೊಂದು ವರ್ಷವನ್ನು ಪ್ರವೇಶಿಸುತ್ತಿದ್ದೇವೆ. ಅವಳು ನನ್ನ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಾಳೆ. ನನ್ನ ಪ್ರತಿ ಹೆಜ್ಜೆಯಲ್ಲಿಯೂ ಜೊತೆಗಿರುತ್ತಾಳೆ. ವಿನೋದ, ಸಂತೋಷ ಹಾಗೂ ನಗುವಿನ ಜೊತೆಗೆ ವಿರಳವಾಗಿ ಕಣ್ಣೀರು, ಭಯ ಮತ್ತು ಸಣ್ಣ ಪ್ರಮಾಣದ ನಿರಾಶೆಗಳು ಉಂಟಾಗುತ್ತವೆ’ ಎಂದು ಬರೆದುಕೊಂಡಿದ್ದಾರೆ.‘ನಿರಾಶೆ ಉಂಟಾದಾಗ ಯಾವುದರಲ್ಲಿ ಸಮಸ್ಯೆ ಇದೆ, ಹೀಗೆ ಆಗಲು ಏನು ಕಾರಣ ಎಂಬುದನ್ನು ಪರಿಶೀಲಿಸಿ ದುರಸ್ತಿ ಮಾಡಿ, ಪ್ರೀತಿಯನ್ನು ಪುನಃ ಭರ್ತಿ ಮಾಡಿಕೊಳ್ಳುತ್ತೇವೆ. ಇಬ್ಬರೂ ಉತ್ತಮವಾದ ಸಮಯವನ್ನು ಕಳೆಯುತ್ತೇವೆ,’ ಎಂದು ಬರೆದುಕೊಂಡಿದ್ದಾರೆ.