ಮಠ ಬೆಳೆಯಲು ಭಕ್ತರ ಕೊಡುಗೆ ಅಪಾರ ಎಂದ ಶಾಂತಲಿಂಗ ಶ್ರೀ
ನರಗುಂದ: ‘ಭೈರನಹಟ್ಟಿ ಭಕ್ತರು ಶ್ರೀಮಠ ಹಾಗೂ ನನ್ನ ಮೇಲೆ ಇಟ್ಟಿರುವ ಭಕ್ತಿ ಅಭಿಮಾನ ಬಹುದೊಡ್ಡದು. ಘಟದಿಂದ ಮಠ ಬೆಳಗಬೇಕು ಎನ್ನುವಂತೆ ಮಠ ಬೆಳೆಯಲು ಭಕ್ತರ ಕೊಡುಗೆ ಅಪಾರ’ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಹೇಳಿದರು.ಕಲ್ಲೂರು ಸಿದ್ದೇಶ್ವರ ದೇವಸ್ಥಾನದಲ್ಲಿ 17ನೇ ವರ್ಷದ ಮೌನಲಿಂಗ ಅನುಷ್ಠಾನ ಪೂರೈಸಿ ಮರಳಿ ತಾಲ್ಲೂಕಿನ ಭೈರನಹಟ್ಟಿ ಗ್ರಾಮಕ್ಕೆ ಆಗಮಿಸಿದ

ನರಗುಂದ: ‘ಭೈರನಹಟ್ಟಿ ಭಕ್ತರು ಶ್ರೀಮಠ ಹಾಗೂ ನನ್ನ ಮೇಲೆ ಇಟ್ಟಿರುವ ಭಕ್ತಿ ಅಭಿಮಾನ ಬಹುದೊಡ್ಡದು. ಘಟದಿಂದ ಮಠ ಬೆಳಗಬೇಕು ಎನ್ನುವಂತೆ ಮಠ ಬೆಳೆಯಲು ಭಕ್ತರ ಕೊಡುಗೆ ಅಪಾರ’ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಹೇಳಿದರು.ಕಲ್ಲೂರು ಸಿದ್ದೇಶ್ವರ ದೇವಸ್ಥಾನದಲ್ಲಿ 17ನೇ ವರ್ಷದ ಮೌನಲಿಂಗ ಅನುಷ್ಠಾನ ಪೂರೈಸಿ ಮರಳಿ ತಾಲ್ಲೂಕಿನ ಭೈರನಹಟ್ಟಿ ಗ್ರಾಮಕ್ಕೆ ಆಗಮಿಸಿದ ಅಂಗವಾಗಿ ಈಚೆಗೆ ನಡೆದ ಪುರಪ್ರವೇಶ ಸಮಾರಂಭದಲ್ಲಿ ಅವರು ಮಾತನಾಡಿದರು.‘ಸುಸಂಸ್ಕೃತ ಪರಂಪರೆ ಹೊಂದಿದ ಭೈರನಹಟ್ಟಿ ಗ್ರಾಮ, ಗುರು ಲಿಂಗ ಜಂಗಮರ ಮೇಲೆ ಅಪಾರ ಭಕ್ತಿ ಶ್ರದ್ಧೆಯನ್ನು ಹೊಂದಿದೆ. ಹಲವಾರು ಸಾಧು ಸತ್ಪುರುಷರು ನಡೆದಾಡಿದ ಪುಣ್ಯಭೂಮಿ ಇದಾಗಿದೆ. ಬ್ರಹ್ಮಾನಂದರು, ದೊರೆಸ್ವಾಮಿಗಳು ಹಾಗೂ ಅಜ್ಜೇಶ್ವರ ಶಿವಯೋಗಿಗಳು ಸೇರಿದಂತೆ ಅನೇಕ ಮಹಾತ್ಮರ ನಡೆದಾಡಿದ ಕ್ಷೇತ್ರವಾಗಿದೆ’ ಎಂದರು.ಇದೇ ಸಂದರ್ಭದಲ್ಲಿ ಶಾಂತಲಿಂಗ ಶ್ರೀ ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿದರು. ಗ್ರಾಮದ ಗಣ್ಯರು, ನೂರಾರು ಭಕ್ತರು ಭಾಗವಹಿಸಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260707-23-115090230