ಹಸುಗಳಿಗೆ ಬಿಯರ್, ಮಕಾಡಮಿಯಾ ಬೀಜಗಳೇ ಆಹಾರ: ಮಾರ್ಕ್ ಜುಕರ್ಬರ್ಗ್ ಹೊಸ ಪ್ರಯೋಗ
ಕ್ಯಾಲಿಫೋರ್ನಿಯಾ: ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ ಆ್ಯಪ್ ಒಡೆತನದ ‘ಮೆಟಾ’ ಸಾಮ್ರಾಜ್ಯದ ಮೂಲಕ ಜಾಗತಿಕ ತಂತ್ರಜ್ಞಾನ ಲೋಕವನ್ನೇ ಆಳುತ್ತಿರುವ ಮಾರ್ಕ್ ಜುಕರ್ಬರ್ಗ್ ಇದೀಗ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಜಗತ್ತಿನಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವ ಮಹತ್ವಾಕಾಂಕ್ಷೆಯೊಂದಿಗೆ ಅವರು ತಮ್ಮ ಫಾರ್ಮ್ಹೌಸ್ನಲ್ಲಿರುವ ಹಸುಗಳಿಗೆ ಹುರ

ಕ್ಯಾಲಿಫೋರ್ನಿಯಾ: ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ ಆ್ಯಪ್ ಒಡೆತನದ ‘ಮೆಟಾ’ ಸಾಮ್ರಾಜ್ಯದ ಮೂಲಕ ಜಾಗತಿಕ ತಂತ್ರಜ್ಞಾನ ಲೋಕವನ್ನೇ ಆಳುತ್ತಿರುವ ಮಾರ್ಕ್ ಜುಕರ್ಬರ್ಗ್ ಇದೀಗ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಜಗತ್ತಿನಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವ ಮಹತ್ವಾಕಾಂಕ್ಷೆಯೊಂದಿಗೆ ಅವರು ತಮ್ಮ ಫಾರ್ಮ್ಹೌಸ್ನಲ್ಲಿರುವ ಹಸುಗಳಿಗೆ ಹುರಿದ ಮಕಾಡಮಿಯಾ ಬೀಜಗಳು ಹಾಗೂ ಸ್ವತಃ ತಾವೇ ತಯಾರಿಸಿದ ಬಿಯರ್ ಅನ್ನು ಆಹಾರವಾಗಿ ನೀಡುತ್ತಿದ್ದಾರೆ.ಹವಾಯಿಯ ಕೌಆಯ್ ದ್ವೀಪದಲ್ಲಿರುವ ತಮ್ಮ ಬೃಹತ್ ಕೂಲೌ ರಾಂಚ್ನಲ್ಲಿ ಜುಕರ್ಬರ್ಗ್ ಈ ಪ್ರಯೋಗ ನಡೆಸುತ್ತಿದ್ದಾರೆ. 2024ರಿಂದಲೇ ಜಗತ್ತಿನ ಪ್ರಸಿದ್ಧ ತಳಿಯಾದ ವಾಗ್ಯು (Wagyu) ಮತ್ತು ಅಂಗಸ್ ತಳಿಯ ದನಗಳನ್ನು ಸಾಕುತ್ತಿದ್ದಾರೆ. ಹಸುಗಳ ಈ ವಿಭಿನ್ನ ಆಹಾರ ಪದ್ಧತಿ ಜಾಗತಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರೂ, ಜುಕರ್ಬರ್ಗ್ ಪ್ರಕಾರ, ‘ಇದು ಯಾವುದೇ ವಾಣಿಜ್ಯ ಲಾಭಕ್ಕಲ್ಲದೇ, ಬದಲಿಗೆ ಹಸುಗಳ ತಳಿಶಾಸ್ತ್ರದ ಮೇಲಿನ ತಮ್ಮ ಕುತೂಹಲಕ್ಕಾಗಿ ಮಾಡುತ್ತಿರುವ ವೈಯಕ್ತಿಕ ಪ್ರಯೋಗವಷ್ಟೇ ಆಗಿದೆ’ ಎಂದಿದ್ದಾರೆ.ಲಾಭಕ್ಕಾಗಿ ಅಲ್ಲ, ತಳಿಶಾಸ್ತ್ರದ ಮೇಲಿನ ಆಸಕ್ತಿಇತ್ತೀಚೆಗೆ ಐಡಿಯಾ ಜನರೇಷನ್ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ಮೆಟಾ ಮುಖ್ಯಸ್ಥ, ತಂತ್ರಜ್ಞಾನ ಪ್ರಪಂಚದ ಹೊರತಾಗಿ ತಮಗೆ ಹೈನುಗಾರಿಕೆ ಅತ್ಯಂತ ಪ್ರಿಯವಾದ ಹವ್ಯಾಸ ಎಂದಿದ್ದಾರೆ.‘ನನ್ನ ಫಾರ್ಮ್ನಲ್ಲಿ ನಾನು ಕೈಗೆತ್ತಿಕೊಂಡಿರುವ ಯೋಜನೆಗಳಲ್ಲಿ ಇದೂ ಒಂದು. ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಮಾಂಸವನ್ನು ಸಿದ್ಧಪಡಿಸುವುದು ನನ್ನ ಗುರಿ. ಇದರಲ್ಲಿ ಯಾವುದೇ ವಾಣಿಜ್ಯ ವ್ಯವಹಾರ ಅಥವಾ ತೊಂದರೆ ಇಲ್ಲ. ನಾನು ಇದನ್ನು ಮಾರಾಟ ಮಾಡುತ್ತಿಲ್ಲ, ಬದಲಿಗೆ ದನಗಳ ಜೀನ್ಸ್ ಮತ್ತು ತಳಿ ಅಭಿವೃದ್ಧಿಯ ಬಗ್ಗೆ ನನಗೆ ಅಪಾರ ಆಸಕ್ತಿಯಿದೆ’ ಎಂದು ಜುಕರ್ಬರ್ಗ್ ಹೇಳಿಕೊಂಡಿದ್ದಾರೆ.ಹಸುಗಳಿಗೆ ಬಿಯರ್ ಮತ್ತು ಒಣಫಲಗಳನ್ನು ನೀಡುತ್ತಿರುವುದೇಕೆ?ಕೂಲೌ ರಾಂಚ್ನಲ್ಲಿ ಹಸುಗಳಿಗಾಗಿಯೇ ಪ್ರತ್ಯೇಕವಾಗಿ ಮಕಾಡಮಿಯಾ ತೋಟವನ್ನು ನಿರ್ಮಿಸಲಾಗಿದೆ. ಈ ಒಣಫಲಗಳಲ್ಲಿ ಹೆಚ್ಚಿನ ಕ್ಯಾಲೊರಿ ಮತ್ತು ಶಕ್ತಿ ಇರುವುದರಿಂದ, ಅವುಗಳನ್ನು ಹುರಿದು ಹಸುಗಳಿಗೆ ತಿನ್ನಿಸಲಾಗುತ್ತದೆ. ಇದು ಹಸುಗಳ ತೂಕ ಮತ್ತು ಮಾಂಸದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.ಇನ್ನು, ಹಸುಗಳಿಗೆ ಬಿಯರ್ ನೀಡುವ ಹಿಂದೆಯೂ ಒಂದು ರೋಚಕ ಕಾರಣವಿದೆ. ಜುಕರ್ಬರ್ಗ್ ತಾವೇ ಖುದ್ದಾಗಿ ಬಿಯರ್ ತಯಾರಿಸಿ ಹಸುಗಳ ಮುಂದೆ ಇಡುತ್ತಾರೆ. ಹಸುಗಳಿಗೆ ಸಾಮಾನ್ಯ ತಾಪಮಾನದ ನೀರು ಹಾಗೂ ತಣ್ಣನೆಯ ಬಿಯರ್ ಎರಡರ ಆಯ್ಕೆ ನೀಡಲಾಗುತ್ತದೆ. ಬಿಯರ್ ಕುಡಿಯುವುದರಿಂದ ಹಸುಗಳಿಗೆ ಹಸಿವು ಹೆಚ್ಚಾಗುತ್ತದೆ ಮತ್ತು ಅವು ಹೆಚ್ಚು ಆಹಾರವನ್ನು ತಿನ್ನುತ್ತವೆ’ ಎನ್ನುತ್ತಾರೆ ಜುಕರ್ಬರ್ಗ್.2,300 ಎಕರೆ ವಿಸ್ತೀರ್ಣದ ಬೃಹತ್ ಫಾರ್ಮ್ಹೌಸ್ಹವಾಯಿಯ ಸುಂದರ ದ್ವೀಪದಲ್ಲಿರುವ ಜುಕರ್ಬರ್ಗ್ ಅವರ ಈ ಕೋಲೋವ್ ರಾಂಚ್ ಬರೋಬ್ಬರಿ 2,300 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿದೆ. 2014ರಿಂದಲೇ ಅವರು ಇಲ್ಲಿ ಭೂಮಿ ಖರೀದಿಸಲು ಆರಂಭಿಸಿದ್ದರು. ಈ ಬೃಹತ್ ಎಸ್ಟೇಟ್ನಲ್ಲಿ ದನಗಳ ಹುಲ್ಲುಗಾವಲು ಮಾತ್ರವಲ್ಲದೆ ಹಣ್ಣಿನ ತೋಟಗಳು ಮತ್ತು ವಸತಿ ಗೃಹಗಳಿವೆ. ಈ ಹಿಂದೆ ಸ್ಥಳೀಯ ಹವಾಯ್ ಬುಡಕಟ್ಟು ಜನರ ಸಾಂಸ್ಕೃತಿಕ ಮತ್ತು ಸ್ಮಶಾನ ಭೂಮಿಯ ಬಳಿ ಜುಕರ್ಬರ್ಗ್ ಭೂಮಿ ಖರೀದಿಸಿದ್ದು ಭಾರಿ ವಿವಾದಕ್ಕೂ ಕಾರಣವಾಗಿತ್ತು.‘ನಾನು ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆದರೆ, ಕಚೇರಿಯ ಒತ್ತಡದಿಂದ ದೂರವಿರಲು ಇಂತಹ ಸಣ್ಣಪುಟ್ಟ ವೈಯಕ್ತಿಕ ಹವ್ಯಾಸಗಳು ನನ್ನ ಸೃಜನಶೀಲತೆಗೆ ಶಕ್ತಿ ತುಂಬಲು ಸಹಾಯ ಮಾಡುತ್ತವೆ’ ಎಂದು ಹೇಳಿದ್ದಾರೆ. ತೋಟದಲ್ಲಿ ಮರಗಳನ್ನು ನೆಡಲು ಮತ್ತು ಪ್ರಾಣಿಗಳನ್ನು ಆರೈಕೆ ಮಾಡಲು ತಮ್ಮ ಮಕ್ಕಳು ಸಹ ಉತ್ಸಾಹದಿಂದ ಸಹಾಯ ಮಾಡುತ್ತಾರೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.ಮಾಹಿತಿ: ಟೈಮ್ಸ್ ಆಫ್ ಇಂಡಿಯಾ (timesofindia)