ನಿಮಗೆ ನೀವು ನೀಡುವ ಉತ್ತಮ ಉಡುಗೊರೆ: ಅಂಡಾಣು ಸಂರಕ್ಷಣೆ ಮಾಡಿರುವ ನಟಿ ಕೃತಿ ಮಾತು
ಬಾಲಿವುಡ್ ನಟಿ ಕೃತಿ ಸನೂನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಜೀವನದ ಬಗೆಗಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅಂಡಾಣು ಸಂರಕ್ಷಣೆ ಮಾಡಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. 35 ವರ್ಷದ ಕೃತಿ ಸನೂನ್, ‘ಮಿಮಿ ಚಿತ್ರದ ಪಾತ್ರಕ್ಕಾಗಿ ದೈಹಿಕವಾಗಿ ದೊಡ್ಡ ಮಟ್ಟದ ಬದಲಾವಣೆಗೆ ಒಳಗಾಗುತ್ತಿದ್ದೆ, ಆ ಸಮಯವೇ ಸೂಕ್ತವೆಂದು ಚಿತ್ರದ ಸಿದ್ಧತ

ಬಾಲಿವುಡ್ ನಟಿ ಕೃತಿ ಸನೂನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಜೀವನದ ಬಗೆಗಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅಂಡಾಣು ಸಂರಕ್ಷಣೆ ಮಾಡಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. 35 ವರ್ಷದ ಕೃತಿ ಸನೂನ್, ‘ಮಿಮಿ ಚಿತ್ರದ ಪಾತ್ರಕ್ಕಾಗಿ ದೈಹಿಕವಾಗಿ ದೊಡ್ಡ ಮಟ್ಟದ ಬದಲಾವಣೆಗೆ ಒಳಗಾಗುತ್ತಿದ್ದೆ, ಆ ಸಮಯವೇ ಸೂಕ್ತವೆಂದು ಚಿತ್ರದ ಸಿದ್ಧತೆಯಲ್ಲಿದ್ದಾಗಲೇ ಅಂಡಾಣುಗಳನ್ನು ಸಂರಕ್ಷಿಸಿಟ್ಟುಕೊಂಡಿದ್ದೇನೆ’ ಎಂದು ಬಹಿರಂಗಪಡಿಸಿದ್ದಾರೆ.‘ಹ್ಯುಮನ್ ಆಫ್ ಬಾಂಬೆ’ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ವ್ಯಕ್ತಿಯೊಬ್ಬರೊಂದಿಗೆ ಮಾತನಾಡುವಾಗ ಅಂಡಾಣು ಸಂರಕ್ಷಣೆ ಎನ್ನುವುದು ಒಂದು ಹೆಣ್ಣು ಆಕೆಗಾಗಿ ನೀಡುವ ಒಂದು ಅತ್ಯುತ್ತಮ ಉಡುಗೊರೆಯಾಗಿದೆ ಎಂದು ಹೇಳಿದ್ದರು. ಅದು ತಲೆಯಲ್ಲಿ ಇತ್ತು. ಹೀಗಾಗಿ ಪಾತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಳ್ಳಬೇಕಾದಾಗ, ಅಂಡಾಣು ಸಂರಕ್ಷಿಸಿಡಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ್ದೆ. ಏಕೆಂದರೆ ಈ ಪಯಣದಲ್ಲಿ ದೇಹದಲ್ಲಿ ಸಾಕಷ್ಟು ಹಾರ್ಮೋನು ಬದಲಾವಣೆಯಾಗಲಿದೆ ಎನ್ನುವುದು ತಿಳಿದಿತ್ತು’ ಎಂದಿದ್ದಾರೆ. Kriti Sanon revealed for the first time that she has frozen her eggs She did it coz she doesn't want to marry soon but wanted to preserve her biological clock. She did it cleverly during the period when she had to gain weight for Mimi, while her hormones were disruptive pic.twitter.com/KY9W6pxGiU— Chota Don (@choga_don) July 7, 2026 ‘ಇದೇ ಸಮಯಕ್ಕೆ ಮದುವೆಯಾಗಬೇಕು, ಮಕ್ಕಳನ್ನು ಪಡೆಯಬೇಕು ಎನ್ನುವುದಿಲ್ಲ. ನಾವು ಯಾವಾಗ ಎಲ್ಲದಕ್ಕೂ ತಯಾರಾಗುತ್ತೇವೋ ಆಗ ನಿರ್ಧರಿಸುವುದು ಒಳ್ಳೆಯದು. ಅದು ಮದುವೆಯಾದರೂ ಸರಿ, ಮಕ್ಕಳನ್ನು ಮಾಡಿಕೊಳ್ಳುವುದಾದರೂ ಸರಿ. ನಮ್ಮೊಳಗಿನಿಂದ ನಾವು ಎಲ್ಲದಕ್ಕೂ ತಯಾರಿಗಿದ್ದೇವೆ ಎನ್ನುವ ಭಾವನೆ ಬರಬೇಕು’ ಎಂದಿದ್ದಾರೆ.ಕೃತಿ ಸನೂನ್ ಶಾಹಿದ್ ಕಪೂರ್ ಜೊತೆಗೆ ಕಾಕ್ಟೇಲ್ 2ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ಇದ್ದರು. ಜಗತ್ತಿನಾದ್ಯಂತ ಈ ಸಿನಿಮಾ ₹130 ಕೋಟಿ ಗಳಿಸಿರುವುದಾಗಿ ಚಿತ್ರತಂಡ ಹೇಳಿದೆ. ಏನಿದು ಅಂಡಾಣು ಸಂರಕ್ಷಣೆ?ಅಂಡಾಣು ಸಂರಕ್ಷಣೆ ಎಂದರೆ ಮಹಿಳೆಯ ಅಂಡಾಣುವನ್ನು ಹೊರತೆಗೆಯುವ ಪ್ರಕ್ರಿಯೆಯಾಗಿದ್ದು, ಅವುಗಳನ್ನು ವಿಟ್ರಿಫಿಕೇಶನ್ ವಿಧಾನದ ಮೂಲಕ ಫ್ರೀಜ್ ಮಾಡಿ ಇಡಲಾಗುತ್ತದೆ. ತಡವಾಗಿ ತಾಯ್ತನವನ್ನು ಪಡೆಯಬೇಕು ಎನ್ನುವವರಿಗೆ ಇದು ಉಪಯೋಗವಾಗುತ್ತದೆ.ಅಂಡಾಣು ಸಂರಕ್ಷಣೆ ಸುರಕ್ಷಿತ ಹೇಗೆ? ಡಾ. ಸಂಧ್ಯಾ ಮಿಶ್ರಾ ಲೇಖನ