ಹನಿಮೂನ್ ಹತ್ಯೆ ಕೇಸಲ್ಲಿ ಸೋನಮ್ ಎಡವಿದ್ದೆಲ್ಲಿ? – ಇಂಚಿಂಚು ಮಾಹಿತಿ ಕಲೆ ಹಾಕಿದ್ದ ಸಿಯಾ!
ಮುಂಬೈ: ಭಾವಿ ಪತಿ ಕೇತನ್ ಹತ್ಯೆ ಕೇಸಲ್ಲಿ ಬಂಧನಕ್ಕೊಳಗಾಗಿರುವ ಸಿಯಾ (Siya) ಗೋಯಲ್, ಮೇಘಾಲಯದ ಹನಿಮೂನ್ ಹತ್ಯೆ ಪ್ರಕರಣದಲ್ಲಿ (Honeymoon Murder Case) ಸೋನಮ್ (Sonam Raghuvanshi) ಸಿಕ್ಕಿಬಿದ್ದಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿದ್ದಳು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಮೂಲಕ ಕೇತನ್ ಹತ್ಯೆಯನ್ನು ಹೇಗೆ ಸುಳಿವಿಲ್ಲದಂತೆ ಮಾಡಬಹುದೆ

ಮುಂಬೈ: ಭಾವಿ ಪತಿ ಕೇತನ್ ಹತ್ಯೆ ಕೇಸಲ್ಲಿ ಬಂಧನಕ್ಕೊಳಗಾಗಿರುವ ಸಿಯಾ (Siya) ಗೋಯಲ್, ಮೇಘಾಲಯದ ಹನಿಮೂನ್ ಹತ್ಯೆ ಪ್ರಕರಣದಲ್ಲಿ (Honeymoon Murder Case) ಸೋನಮ್ (Sonam Raghuvanshi) ಸಿಕ್ಕಿಬಿದ್ದಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿದ್ದಳು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಮೂಲಕ ಕೇತನ್ ಹತ್ಯೆಯನ್ನು ಹೇಗೆ ಸುಳಿವಿಲ್ಲದಂತೆ ಮಾಡಬಹುದೆಂಬ ಸಂಚು ರೂಪಿಸಿದ್ದಳು ಎಂದು ಶಂಕಿಸಲಾಗಿದೆ. ಸಿಯಾ ಮೊಬೈಲ್ ಫೋನ್ನ ಬ್ರೌಸಿಂಗ್ ಹಿಸ್ಟರಿಯಲ್ಲಿ ರಾಜ ರಘುವಂಶಿಯ ಹತ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಆಕೆ ಸರ್ಚ್ ಮಾಡಿದ್ದಳು ಎಂದು ತಿಳಿದುಬಂದಿದೆ. ಇದರಿಂದ ಆರೋಪಿ ಸಿಯಾ, ಹೈ ಪ್ರೊಫೈಲ್ ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣವನ್ನು ಅನುಸರಿಸಿರಬಹುದು ಎಂದು ಶಂಕಿಸಿದ್ದಾರೆ. ಇದನ್ನೂ ಓದಿ: ಕೇತನ್ ಜೊತೆ ಎಂಗೇಜ್ಮೆಂಟ್, ಲವ್ವರ್ ಜೊತೆ ರಹಸ್ಯ ಮದುವೆ – ಬಗೆದಷ್ಟು ಬಯಲಾಗ್ತಿದೆ ಕ್ರಿಮಿನಲ್ ಬ್ಯೂಟಿ ಸಿಯಾ ಪುರಾಣ ಕೇತನ್ ಅಗರ್ವಾಲ್ ಮತ್ತು ರಾಜ ರಘುವಂಶಿಯ ಕೊಲೆ ನಡುವೆ ಗಮನಾರ್ಹ ಹೋಲಿಕೆಗಳನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಎರಡೂ ಪ್ರಕರಣಗಳಲ್ಲಿ, ಬಂಡೆಯಿಂದ ತಳ್ಳಿ ಕೊಲೆ ಮಾಡಲಾಗಿದೆ. ಇನ್ನೂ ಮೇಘಾಲಯ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರಿಂದ ಸಿಯಾ ಮತ್ತು ಚೇತನ್ ಚೌಧರಿ ಬಹಳ ಎಚ್ಚರಿಕೆಯಿಂದ ಈ ಕೃತ್ಯ ಎಸಗಿರಬಹುದು. ಸಿಯಾ ಯೋಜಿಸಿದಂತೆಯೇ ಕೊಲೆ ಬಹುತೇಕ ನಿಖರವಾಗಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಗೋಯಲ್ ಅಥವಾ ಚೌಧರಿ ಇಬ್ಬರೂ ಕೇತನ್ ಅಗರ್ವಾಲ್ ಹತ್ಯೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜೂನ್ 18 ರಂದು ಲೋಹಗಡ (Lohagad Fort) ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ. ಗೋಯಲ್ ಮತ್ತು ಚೌಧರಿ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇ 23, 2025 ರಂದು, ನವವಿವಾಹಿತರಾಗಿದ್ದ ರಾಜಾ ರಘುವಂಶಿ ಮತ್ತು ಇಂದೋರ್ನ ಸೋನಮ್ ರಘುವಂಶಿ ಮೇಘಾಲಯದಲ್ಲಿ ಹನಿಮೂನ್ಗೆ ತೆರಳಿದ್ದಾಗ ನಾಪತ್ತೆಯಾದರು. ಈ ದಂಪತಿಗಳು ಕೊನೆಯ ಬಾರಿಗೆ ನೊಂಗ್ರಿಯಾತ್ ಹಳ್ಳಿಯ ಹೋಂಸ್ಟೇಯಿಂದ ಹೊರಗೆ ಹೋಗಿದ್ದರು. ಜೂನ್ 2 ರಂದು, ರಾಜಾ ಅವರ ಕೊಳೆತ ಮೃತದೇಹವು ವೀ ಸಾವ್ಡಾಂಗ್ ಜಲಪಾತದ ಕೆಳಗಿನ ಆಳವಾದ ಕಮರಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಆರೋಪಿ ಸೋನಮ್ ಹಾಗೂ ಇನ್ನಿತರರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈಗ ಸೋನಮ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ. ಇದನ್ನೂ ಓದಿ: ಕೇತನ್ ಹತ್ಯೆ ಕೇಸ್ | ಬಾಯ್ಫ್ರೆಂಡ್ ಜೊತೆ ಕೋಡ್ ವರ್ಡ್ ಬಳಸಿ ಚಾಟ್ ಮಾಡಿದ್ದ ಸಿಯಾ!