ಬ್ರಹ್ಮೋಸ್, ಅಸ್ತ್ರ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾ ಸಹಿ
ಜಕಾರ್ತ/ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಪರಾಕ್ರಮ ಮೆರೆದಿದ್ದ ಸ್ವದೇಶಿ ನಿರ್ಮಿತ ಸೂಪರ್ಸಾನಿಕ್ ಬ್ರಹ್ಮೋಸ್(BrahMos), ಅಸ್ತ್ರ ಕ್ಷಿಪಣಿ(Astra Missiles) ಖರೀದಿ ಒಪ್ಪಂದಕ್ಕೆ ಇಂಡೋನೇಷ್ಯಾ(Indonesia) ಸಹಿ ಹಾಕಿದೆ. ಫಿಲಿಪೈನ್ಸ್ ಬೆನ್ನಲ್ಲೇ, ಇದೀಗ ಮತ್ತೊಂದು ಪ್ರಮುಖ ಆಗ್ನೇಯ ಏಷ್ಯಾ ರಾಷ್ಟ್ರವಾದ ಇಂಡೋನೇಷ್ಯಾಕ್ಕೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಪೂರೈಸಲು

ಜಕಾರ್ತ/ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಪರಾಕ್ರಮ ಮೆರೆದಿದ್ದ ಸ್ವದೇಶಿ ನಿರ್ಮಿತ ಸೂಪರ್ಸಾನಿಕ್ ಬ್ರಹ್ಮೋಸ್(BrahMos), ಅಸ್ತ್ರ ಕ್ಷಿಪಣಿ(Astra Missiles) ಖರೀದಿ ಒಪ್ಪಂದಕ್ಕೆ ಇಂಡೋನೇಷ್ಯಾ(Indonesia) ಸಹಿ ಹಾಕಿದೆ. ಫಿಲಿಪೈನ್ಸ್ ಬೆನ್ನಲ್ಲೇ, ಇದೀಗ ಮತ್ತೊಂದು ಪ್ರಮುಖ ಆಗ್ನೇಯ ಏಷ್ಯಾ ರಾಷ್ಟ್ರವಾದ ಇಂಡೋನೇಷ್ಯಾಕ್ಕೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಪೂರೈಸಲು ಭಾರತ ಸಜ್ಜಾಗಿದ್ದು ಪ್ರಧಾನಿ ಮೋದಿ (PM Narendra Modi) ಜೊತೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ(Prabowo Subianto) ಸಮ್ಮುಖದಲ್ಲಿ ನಿರ್ಣಾಯಕ ರಕ್ಷಣಾ ಮತ್ತು ಪೂರೈಕೆ ಸರಪಳಿ (Critical Supply Chain) ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದ ರಕ್ಷಣಾ ಸಚಿವಾಲಯ ಹಾಗೂ ಭಾರತ-ರಷ್ಯಾ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್ (BrahMos Aerospace) ಅಧಿಕಾರಿಗಳು ಮತ್ತು ಇಂಡೋನೇಷ್ಯಾದ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳು ಅಧಿಕೃತ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಇಂಡೋನೇಷ್ಯಾದ ಅಗತ್ಯಗಳಿಗೆ ತಕ್ಕಂತೆ ಇವಿಎಂ ಅಭಿವೃದ್ಧಿಪಡಿಸಲು ಭಾರತ ನೆರವು ನೀಡಲಿದೆ. ಇದರ ಜೊತೆಗೆ, ಮಲಕ್ಕಾ ಜಲಸಂಧಿ ಸಮೀಪದಲ್ಲಿರುವ ಹಾಗೂ ಭಾರತದ ಗ್ರೇಟ್ ನಿಕೋಬಾರ್ ಬಂದರು ಯೋಜನೆಯಿಂದ ಸುಮಾರು 100 ಮೈಲುಗಳ ದೂರದಲ್ಲಿರುವ ಸಬಾಂಗ್ ಬಂದರನ್ನು ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ. ಪ್ರಮುಖ ಖನಿಜಗಳ ಪೂರೈಕೆ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ, ಇಂಡೋನೇಷ್ಯಾದಲ್ಲಿ ಉಕ್ಕು, ನಿಕಲ್ ಹಾಗೂ ಅಪರೂಪದ ಆಯಸ್ಕಾಂತಗಳ ತಯಾರಿಕೆಯಲ್ಲಿ ಭಾರತ ಹೂಡಿಕೆ ಮಾಡಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ `ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ಪ್ರದಾನ ಒಪ್ಪಂದದ ಪ್ರಮುಖ ಅಂಶಗಳು ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ‘ಬ್ರಹ್ಮೋಸ್’ ಅನ್ನು ಇಂಡೋನೇಷ್ಯಾಕ್ಕೆ ರಫ್ತು ಮಾಡಲು ಭಾರತ ಒಪ್ಪಿಗೆ ನೀಡಿದೆ. ಇದು ಇಂಡೋನೇಷ್ಯಾದ ನೌಕಾಪಡೆ ಮತ್ತು ಕರಾವಳಿ ರಕ್ಷಣೆಯನ್ನು ಬಲಪಡಿಸಲಿದೆ. ಇದೇ ಮೊದಲ ಬಾರಿಗೆ ಭಾರತವು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ, ಕಣ್ಣಿಗೆ ಕಾಣದ ದೂರದ ಗುರಿಯನ್ನು ಹೊಡೆದುರುಳಿಸುವ ಅಸ್ತ್ರ (Astra – Beyond Visual Range Air-to-Air Missile) ಕ್ಷಿಪಣಿಯನ್ನು ಇಂಡೋನೇಷ್ಯಾದ ಯುದ್ಧವಿಮಾನಗಳಿಗಾಗಿ ಪೂರೈಸುತ್ತಿದೆ.ಅಸ್ತ್ರ ಕ್ಷಿಪಣಿಗಳನ್ನು ಇಂಡೋನೇಷ್ಯಾ ವಾಯುಪಡೆಯ ಸುಖೋಯ್ (Su-30) ಯುದ್ಧವಿಮಾನಗಳಲ್ಲಿ ಬಳಸಲು ತಾಂತ್ರಿಕ ಹೊಂದಾಣಿಕೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಕೇವಲ ಕ್ಷಿಪಣಿ ಮಾರಾಟ ಮಾತ್ರವಲ್ಲದೆ, ರಕ್ಷಣಾ ಸಾಮಗ್ರಿಗಳ ಬಿಡಿಭಾಗಗಳು ಮತ್ತು ತಾಂತ್ರಿಕ ನೆರವನ್ನು ನಿರಂತರವಾಗಿ ಒದಗಿಸಲು ಉಭಯ ದೇಶಗಳು ‘ಕ್ರಿಟಿಕಲ್ ಸಪ್ಲೈ ಚೈನ್’ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಭವಿಷ್ಯದಲ್ಲಿ ಕ್ಷಿಪಣಿಗಳ ಬಿಡಿಭಾಗಗಳು (Spare parts), ನಿರ್ವಹಣೆ (Maintenance) ಮತ್ತು ತಾಂತ್ರಿಕ ದೋಷಗಳು ಎದುರಾದರೆ ಭಾರತವು ಯಾವುದೇ ತಡೆ ಇಲ್ಲದೆ ತಕ್ಷಣವೇ ಇಂಡೋನೇಷ್ಯಾಕ್ಕೆ ಸಾಮಗ್ರಿಗಳನ್ನು ಪೂರೈಸಬೇಕಾಗುತ್ತದೆ. Melihat ke depan, kami sepakat bahwa kedua bangsa kita harus bekerja sama secara erat di berbagai bidang seperti antariksa, telekomunikasi, kecerdasan buatan, Infrastruktur Publik Digital, serta teknologi digital terbarukan lainnya. pic.twitter.com/r7DXJQxnBw — Narendra Modi (@narendramodi) July 7, 2026 ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಇಂಡೋನೇಷ್ಯಾ ದೇಶವು ಚೀನಾದ ತೀವ್ರ ವಿರೋಧದ ನಡುವೆಯೂ ರಕ್ಷಣಾ ರಕ್ಷಣೆಗಾಗಿ ಭಾರತವನ್ನು ತನ್ನ ಅತ್ಯಂತ ‘ವಿಶ್ವಾಸಾರ್ಹ ಪಾಲುದಾರ’ ಎಂದು ಜಾಗತಿಕ ಮಟ್ಟದಲ್ಲಿ ಒಪ್ಪಿಕೊಂಡಂತಾಗಿದೆ. ಫಿಲಿಪೈನ್ಸ್ ನಂತರ ಇಂಡೋನೇಷ್ಯಾ ಕೂಡ ಭಾರತದೊಂದಿಗೆ ಇಂತಹ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ, ಆಸಿಯಾನ್ (ASEAN) ವಲಯದಲ್ಲಿ ಭಾರತದ ಪ್ರಭಾವ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನೂ ಓದಿ: 26 ವರ್ಷಗಳಲ್ಲಿ ಫಸ್ಟ್ ಟೈಮ್ – ಕಚ್ಚಾ ತೈಲ ಬೆಲೆ ಭಾರೀ ಕಡಿತಗೊಳಿಸಿದ ಸೌದಿ, ಭಾರತಕ್ಕೆ ಬಂಪರ್ ಚೀನಾಕ್ಕೆ ಕೌಂಟರ್ ಭಾರತ ಮತ್ತು ಇಂಡೋನೇಷ್ಯಾ ನಡುವಿನ ಈ ರಕ್ಷಣಾ ಒಪ್ಪಂದವು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಗೆ ಬ್ರೇಕ್ ಹಾಕಲು ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ತನ್ನ ಮಿತ್ರ ರಾಷ್ಟ್ರಗಳ ಸೈನ್ಯವನ್ನು ಬಲಪಡಿಸಲು ಭಾರತ ಕೈಗೊಂಡಿರುವ ಅತ್ಯಂತ ಕಾರ್ಯತಂತ್ರದ ಹೆಜ್ಜೆ ಇದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.