ಮೈಸೂರು ದಸರಾ ಜಂಬೂಸವಾರಿ ತಂಡದ ಕ್ಯಾಪ್ಟನ್ ಯಾರು: ಅಭಿಮನ್ಯುವೋ, ಮಹೇಂದ್ರನೋ?
ಬೆಂಗಳೂರು: ಮೈಸೂರು ದಸರಾ ಎಂದರೆ ಥಟ್ಟನೇ ನೆನಪಾಗೋದು ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿ ವಿಗ್ರಹ ಹಾಗೂ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳ ಪಡೆ. ಅದರಲ್ಲೂ ಅಂಬಾರಿ ಹೊರುವ ಕ್ಯಾಪ್ಟನ್ ಆನೆ ಮುಖ್ಯ ಆಕರ್ಷಣೆ. ದಸರೆಗೆ ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಈಗಾಗಲೇ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಅರಣ್ಯ ಇಲಾಖೆ ಆರಂಭಿಸಿದ್ದು, ಈ ಬಾರಿ ಅಂಬಾರಿ ಹೊರುವ

ಬೆಂಗಳೂರು: ಮೈಸೂರು ದಸರಾ ಎಂದರೆ ಥಟ್ಟನೇ ನೆನಪಾಗೋದು ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿ ವಿಗ್ರಹ ಹಾಗೂ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳ ಪಡೆ. ಅದರಲ್ಲೂ ಅಂಬಾರಿ ಹೊರುವ ಕ್ಯಾಪ್ಟನ್ ಆನೆ ಮುಖ್ಯ ಆಕರ್ಷಣೆ. ದಸರೆಗೆ ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಈಗಾಗಲೇ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಅರಣ್ಯ ಇಲಾಖೆ ಆರಂಭಿಸಿದ್ದು, ಈ ಬಾರಿ ಅಂಬಾರಿ ಹೊರುವವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.ಕಳೆದ ಆರು ವರ್ಷದಿಂದ ಅಂಬಾರಿ ಹೊರುತ್ತಿರುವ ಅಭಿಮನ್ಯು ಆನೆಗೆ ಈಗ 60 ವರ್ಷ. ಇದೊಂದು ವರ್ಷ ಅಭಿಮನ್ಯು ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಿ ಮುಂದಿನ ವರ್ಷ ಹೊಸ ಆನೆಗೆ ಉಸ್ತುವಾರಿ ವಹಿಸಬೇಕು ಎನ್ನುವ ಚರ್ಚೆಗಳು ಒಂದು ಕಡೆ ಇದೆ. ಇದರ ನಡುವೆ ಅಭಿಮನ್ಯು ಆನೆಗೆ ವಯಸ್ಸಾಗಿರುವುದರಿಂದ ಅದರ ಬದಲು ಆರೋಗ್ಯಪೂರ್ಣವಾಗಿರುವ ಯುವ ಆನೆಗೆ ಪಟ್ಟ ನೀಡಬೇಕು ಎನ್ನುವ ಪ್ರಸ್ತಾವಗಳೂ ಅರಣ್ಯ ಇಲಾಖೆ ಹಂತದಲ್ಲಿವೆ. ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕ ದಸರಾಕ್ಕೆ 60 ವರ್ಷ ಮೀರಿದ ಆನೆಗಳನ್ನು ತರುವುದನ್ನು ನಿಲ್ಲಿಸಲಾಗಿದೆ. ಕೆಲವೊಮ್ಮೆ ತಂದರೂ ಅಂಬಾರಿ ಹೊರುವ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗುತ್ತಿದೆ. ಹಿಂದೆ ಬಲರಾಮ, ಅರ್ಜುನ ಆನೆಗೂ ಇದೇ ನಿಯಮ ಅನ್ವಯಿಸಲಾಗಿದೆ.2026ನೇ ಸಾಲಿನ ಮೈಸೂರು ದಸರಾ ಅಕ್ಟೋಬರ್ 20 ರಂದು ಪ್ರಾರಂಭವಾಗಿ ಅಕ್ಟೋಬರ್ 31 ರಂದು ನಡೆಯುವ ಜಂಬೂಸವಾರಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ನಾಡಹಬ್ಬಕ್ಕೆಂದು ಆನೆಗಳನ್ನು ಸುಮಾರು ಎರಡು ತಿಂಗಳ ಮುಂಚೆಯೇ ಕರೆ ತರಲಾಗುತ್ತದೆ. ಆರರಿಂದ ಎಂಟು ಆನೆಗಳು ಮೊದಲ ತಂಡದಲ್ಲಿ ಬಂದರೆ, ಒಂದೂವರೆ ತಿಂಗಳು ಸಮಯ ಇದ್ಧಾಗ ಎರಡನೇ ತಂಡ ಆಗಮಿಸಲಿದೆ. ಈಗಾಗಲೇ ಆನೆಗಳ ಆಯ್ಕೆಗೆ ಕರ್ನಾಟಕ ಅರಣ್ಯ ಇಲಾಖೆಯ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭುಗೌಡ ಬಿರಾದಾರ್ ನೇತೃತ್ವದಲ್ಲಿ ಚಟುವಟಿಕೆ ಶುರುವಾಗಿದೆ. ಶಿಬಿರಗಳಲ್ಲಿ ಹೆಣ್ಣು ಆನೆಗಳ ಗರ್ಭಧಾರಣೆ ತಪಾಸಣೆ, ಇತರೆ ಆನೆಗಳಿಗೆ ಹೃದಯ ತಪಾಸಣೆ ಚಟುವಟಿಕೆಯನ್ನು ನಡೆಸಲಾಗುತ್ತಿದೆ. ಆನೆಗಳ ಆಯ್ಕೆ ಪ್ರಕ್ರಿಯೆಜುಲೈ 13ರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು, ವನ್ಯಜೀವಿ ಪಶುವೈದ್ಯಾಧಿಕಾರಿಗಳ ತಂಡ ಮೈಸೂರು ಭಾಗದಲ್ಲಿರುವ ಆನೆ ಶಿಬಿರಗಳಿಗೆ ಭೇಟಿ ನೀಡಲಿದೆ. ಮುಖ್ಯವಾಗಿ ಕೊಡಗಿನ ದುಬಾರೆ, ಮತ್ತಿಗೋಡು, ಮೈಸೂರಿನ ಭೀಮನಕಟ್ಟೆ ಹಾಗೂ ಬಳ್ಳೆ, ಬಂಡೀಪುರ ವ್ಯಾಪ್ತಿಯ ಅಯ್ನೋರ ಮಾರಿಗುಡಿ ವನ್ಯಜೀವಿ ವಲಯದ ರಾಮಪುರ ಆನೆ ಶಿಬಿರಗಳಿಗೆ ತಂಡ ಭೇಟಿ ನೀಡಿ ಸುಮಾರು 20 ಆನೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಿದೆ. ಇದರಲ್ಲಿ ಆರು ಹೆಣ್ಣಾನೆ, 14 ಗಂಡಾನೆಗಳು ಇರಲಿವೆ. ಆನಂತರ ಇವುಗಳನ್ನು ಅಂತಿಮಗೊಳಿಸಿ 14 ಆನೆಗಳ ಪಟ್ಟಿಯನ್ನು ದಸರಾಗೆ ಕರೆ ತರಲು ಅಂತಿಮಗೊಳಿಸಲಾಗುತ್ತದೆ. ಆಗಸ್ಟ್ ಮೂರನೇ ಇಲ್ಲವೇ ಕೊನೆ ವಾರದಲ್ಲಿ ಮೊದಲ ತಂಡದ ಆನೆಗಳನ್ನು ನಾಗರಹೊಳೆಯ ವೀರನಹೊಸಹಳ್ಳಿ ಬಳಿಯಿಂದ ಕರೆ ತರಲಾಗುತ್ತದೆ. ಸೆಪ್ಟಂಬರ್ 2ನೇ ವಾರದಲ್ಲಿ 2ನೇ ತಂಡದ ಆನೆಗಳು ಮೈಸೂರು ಅರಮನೆಗೆ ಆಗಮಿಸಲಿವೆ.ಬದಲಾವಣೆ ಸೂಕ್ತ: ಸಲಹೆಆನೆ, ಹುಲಿ ಸಹಿತ ವನ್ಯಜೀವಿಗಳ ಸೆರೆ ಆಪರೇಷನ್ನ ಕ್ಯಾಪ್ಟನ್ ಕೂಡ ಆಗಿರುವ ಅಭಿಮನ್ಯು ಮೇಲ್ನೋಟದಲ್ಲಿ ಈಗಲೂ ಗಟ್ಟಿಗನೇ. ಎಂತಹ ಪುಂಡಾನೆಯಿದ್ದರೂ ಅದರ ಹೆಡೆಮುರಿ ಕಟ್ಟಿ ಸೆರೆ ಹಿಡಿಯಲು ಸಹಕರಿಸುವ ಚಾಕಚಕ್ಯತೆ, ಧೈರ್ಯ ಅಭಿಮನ್ಯುವಿಗಿದೆ. ಕರ್ನಾಟಕ ಮಾತ್ರವಲ್ಲದೇ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ 150ಕ್ಕೂ ಹೆಚ್ಚು ಕಾಡಾನೆ, 40ಕ್ಕೂ ಅಧಿಕ ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅಭಿಮನ್ಯು ಭಾಗಿಯಾದ ಹಿರಿಮೆ ಹೊಂದಿದ್ದಾನೆಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ದಶಕಗಳಿಂದ ನೆಲೆ ಕಂಡುಕೊಂಡಿರುವ ಅಭಿಮನ್ಯು 2.672 ಮೀಟರ್ ಎತ್ತರ, 3.51 ಮೀಟರ್ ಉದ್ದ, ಸುಮಾರು 5 ಸಾವಿರ ಕೆ.ಜಿ.ತೂಕದ ಬಲಶಾಲಿ. ಅಭಿಮನ್ಯುವನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಯುವ ಅಭಿಮನ್ಯು ಆಗಿನಿಂದಲೇ ಮಾವುತ ಸಣ್ಣಪ್ಪ ಅವರ ಜತೆ ಪಳಗಿ ಆನಂತರ ಆತನ ಪುತ್ರ ವಸಂತ, ಕವಾಡಿ ಜೆ.ಕೆ.ರಾಜು ಅವರ ಗರಡಿಯಲ್ಲಿ ಶಿಸ್ತಿ ಸಿಪಾಯಿಯಾಗಿ ಬೆಳೆದಿದ್ದಾನೆ.ಎರಡೂವರೆ ದಶಕದಿಂದಲೂ ದಸರೆಯಲ್ಲಿ ಭಾಗವಹಿಸುತ್ತಿರುವ ಅಭಿಮನ್ಯು 2020ರಿಂದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದಾನೆ. ಒಂದಿನಿಂತೂ ತೊಂದರೆಯಿಲ್ಲದೇ ಜವಾಬ್ದಾರಿಯನ್ನು ನಿಭಾಯಿಸಿ ಛಾತಿ ತೋರಿಸಿದ್ದಾನೆ ಅಭಿಮನ್ಯು.21 ವರ್ಷ ಕಾಲ ದಸರಾ ಕರ್ತವ್ಯ ನಿಭಾಯಿಸಿದ ನಾನು ಈ ಹಿಂದೆ ಬಲರಾಮ, ಅರ್ಜುನನ ನಂತರ ಅಭಿಮನ್ಯು ನೇತೃತ್ವದಲ್ಲಿ ಅಂಬಾರಿ ಹೊರುವ ಆ ಕ್ಷಣವನ್ನು ಹತ್ತಿರ ಕಂಡಿದ್ದೇನೆ. ಅಭಿಮನ್ಯು ಸಮರ್ಥನಾಗಿದ್ದಾನೆ. ವಯಸ್ಸಾಗಿರುವುದರಿಂದ ಹೊಸ ಆನೆಗೆ ಜವಾಬ್ದಾರಿ ಕೊಡಬಹುದು. ಮಹೇಂದ್ರ ಆನೆ ಇದಕ್ಕೆ ಸೂಕ್ತ. ಇದರೊಟ್ಟಿಗೆ ಜೂನಿಯರ್ ಭೀಮನನ್ನು ಈಗಿನಿಂದಲೇ ಅಂಬಾರಿ ಹೊರುವುದಕ್ಕೆ ತಯಾರಿ ಮಾಡಬೇಕು. ಬದಲಾವಣೆ ಸೂಕ್ತ ಎಂದು ಪಶುಸೇವೆಗಳ ಇಲಾಖೆ ನಿವೃತ್ತ ಉಪನಿರ್ದೇಶಕ, ಆನೆ ತಜ್ಞ ಡಾ.ಡಿ.ಎನ್.ನಾಗರಾಜು ಹೇಳುತ್ತಾರೆ.ಯಾರು ಮಹೇಂದ್ರಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿ ನಿಭಾಯಿಸುತ್ತಿರುವ ಮಹೇಂದ್ರ ಭವಿಷ್ಯದ ಜಂಬೂಸವಾರಿ ಕ್ಯಾಪ್ಟನ್ ಎಂದೇ ಬಿಂಬಿಸಲಾಗುತ್ತಿದೆ. ಮಹೇಂದ್ರ ಕೂಡ ಅಭಿಮನ್ಯು ನಂತರ ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆಯ ಉಪನಾಯಕ. ಆತನ ಧೈರ್ಯ, ಮುನ್ನುಗ್ಗುವ ಛಾತಿ, ಎಂಥಹ ಸನ್ನಿವೇಶದಲ್ಲೂ ಧೃತಿಗೆಡದೇ ವನ್ಯಜೀವಿಗಳನ್ನು ಎದುರಿಸುವ ಗಟ್ಟಿತನ, ಜನ ಹತ್ತಿರ ಹೋದರೂ ಎಂದೂ ಸಿಟ್ಟಿಗೇಳದ ಕೂಲ್ ಗುಣ ಆತನನ್ನು ಮುಂಚೂಣಿಯಲ್ಲಿ ನಿಲ್ಲಿಸಿವೆ.ಮಹೇಂದ್ರ ಒಂದು ಕಾಲಕ್ಕೆ ಪುಂಡಾನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಚನ್ನಪಟ್ಟಣ ಭಾಗದಲ್ಲಿ ಪುಂಡಾನೆಯಾಗಿದ್ದವ. 2016ರಲ್ಲಿ ನಡೆದಿದ್ದ ಸೆರೆ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದು ಆನಂತರ ಮೂರು ವರ್ಷದಲ್ಲಿ ಪಳಗಿದವ. ತನ್ನ ನಡವಳಿಕೆ ಮೂಲಕ ಆತ ಈಗ ದಸರಾ ತಂಡದಲ್ಲಿ ಪ್ರಮುಖ ಸದಸ್ಯನಾಗಿ ರೂಪುಗೊಂಡಿದ್ದಾನೆ.2.75 ಮೀಟರ್ ಎತ್ತರ, 3.25 ಮೀಟರ್ ಉದ್ದ, ಸುಮಾರು 5 ಸಾವಿರ ತೂಕ ಹೊಂದಿದ್ದಾನೆ. ಸದ್ಯ ಮೈಸೂರು ಜಿಲ್ಲೆ ಎಚ್ಡಿಕೋಟೆ ತಾಲ್ಲೂಕಿನ ಬಳ್ಳೆ ಶಿಬಿರದ ನಿವಾಸಿ. ಮಾವುತ ರಾಜಣ್ಣ, ಕಾವಾಡಿ-ಮಲ್ಲಿಕಾರ್ಜುನ ಮಹೇಂದ್ರನ ಉಸ್ತುವಾರಿಗಳು. ಮಹೇಂದ್ರನ ಎತ್ತರ, ಆಕರ್ಷಕ ನೋಟ ಅಂಬಾರಿ ಕೂರಿಸಲು ಇರುವ ಚಪ್ಪಟೆ ಬೆನ್ನು ಎಲ್ಲವೂ ಚೆನ್ನಾಗಿವೆ. ಇದೇ ಕಾರಣದಿಂದಲೇ ಈಗಾಗಲೇ ಶ್ರೀರಂಗಪಟ್ಟಣ ದಸರಾದಲ್ಲಿ ಆತನಿಗೆ ಜವಾಬ್ದಾರಿ ವಹಿಸಿಕೊಂಡು ಬರಲಾಗುತ್ತಿದೆ. ಅಲ್ಲದೇ ದಸರಾ ವೇಳೆಯೂ ಅಂಬಾರಿ ಹೊರುವ ತಾಲೀಮಿನಲ್ಲಿ ಅಭಿಮನ್ಯು ಜತೆಗೆ ಮಹೇಂದ್ರ, ಧನಂಜಯ ಆನೆಯನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.ಆನೆಗಳ ಪ್ರಾಥಮಿಕ ಆಯ್ಕೆ ನಂತರ ದಸರಾದಲ್ಲಿ ಪಾಲ್ಗೊಳ್ಳುವ ಪಟ್ಟಿ, ಅಂಬಾರಿ ಹೊರುವ ಆನೆಯ ಅಂತಿಮ ನಿರ್ಧಾರವನ್ನು ಅರಣ್ಯ ಪಡೆಗಳ ಮುಖ್ಯಸ್ಥರು, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಆನೆ ಯೋಜನೆ ನಿರ್ದೇಶಕರ ಹಾಗೂ ತಜ್ಞರ ನೇತೃತ್ವದ ಸಮಿತಿ ಕೈಗೊಳ್ಳಲಿದೆ. ಬಹುತೇಕ ದಸರಾ ಆರಂಭಕ್ಕೂ ಕೆಲವು ದಿನಗಳ ಮೊದಲು ಯಾರು ಕ್ಯಾಪ್ಟನ್ ಅನ್ನುವುದನ್ನು ತೀರ್ಮಾನಿಸಬಹುದು ಎಂಬುದು ಅಧಿಕಾರಿಗಳ ವಿವರಣೆ.ಡಾ.ಐ.ಬಿ.ಪ್ರಭುಗೌಡ ಬಿರಾದಾರ್, ಡಿಸಿಎಫ್, ಮೈಸೂರು ವನ್ಯಜೀವಿಮೈಸೂರು ದಸರಾ 2026ಕ್ಕೆ ಆನೆಗಳ ಆಯ್ಕೆ ಪ್ರಕ್ರಿಯೆ ಜುಲೈ 13ರಿಂದ ಆರಂಭಗೊಳ್ಳಲಿದೆ. ದಸರಾಕ್ಕೆ ಯಾವ ಆನೆ ಬರಬೇಕು, ಅಂಬಾರಿ ಯಾವ ಹೊರಬೇಕು ಎನ್ನುವ ಕುರಿತು ಅರಣ್ಯ ಇಲಾಖೆಯ ಉನ್ನತ ಸಮಿತಿ ಹಾಗೂ ಸರ್ಕಾರದ ಹಂತದಲ್ಲಿ ತೀರ್ಮಾನ ಆಗಲಿದೆ.ಶ್ರೀರಂಗಪಟ್ಟಣ ದಸರಾ: ಜಂಬೂಸವಾರಿಗೆ ‘ಮಹೇಂದ್ರ’ ಆನೆ ಸಾರಥ್ಯ!