ಬುರ್ಜ್ ಖಲೀಫಾದಲ್ಲಿ ಕಚೇರಿ; 14ನೇ ವಯಸ್ಸಿನಲ್ಲಿ AI ಉದ್ಯಮ ಆರಂಭಿಸಿದ ಪುಣೆ ಬಾಲಕ
ಸಾಮಾನ್ಯವಾಗಿ 14 ವರ್ಷದ ಮಕ್ಕಳು ಆಟ, ಓದು, ಶಾಲೆ ಎಂದು ತೊಡಗಿಸಿಕೊಂಡಿರುತ್ತಾರೆ. ಆದರೆ ಪುಣೆ ಮೂಲದ 14 ವರ್ಷದ ಬಾಲಕ ಯುಎಇಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸ್ಟಾರ್ಟ್ ಅಪ್ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ ಎಂದರೆ ನಂಬುತ್ತೀರಾ? ಅರೇ 14ನೇ ವಯಸ್ಸಿನಲ್ಲಿ ಕಂಪನಿಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಈ ಬಾಲ

ಸಾಮಾನ್ಯವಾಗಿ 14 ವರ್ಷದ ಮಕ್ಕಳು ಆಟ, ಓದು, ಶಾಲೆ ಎಂದು ತೊಡಗಿಸಿಕೊಂಡಿರುತ್ತಾರೆ. ಆದರೆ ಪುಣೆ ಮೂಲದ 14 ವರ್ಷದ ಬಾಲಕ ಯುಎಇಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸ್ಟಾರ್ಟ್ ಅಪ್ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ ಎಂದರೆ ನಂಬುತ್ತೀರಾ? ಅರೇ 14ನೇ ವಯಸ್ಸಿನಲ್ಲಿ ಕಂಪನಿಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಈ ಬಾಲಕನ ಕಚೇರಿ ಇರುವುದು ಜಗತ್ತಿನ ಅತಿ ಎತ್ತರದ ಕಟ್ಟಡ ಎನಿಸಿರುವ ಬುರ್ಜ್ ಖಲೀಫಾದಲ್ಲಿ.ಹೌದು, ಜೈನಮ್ ಜೈನ್ ಎನ್ನುವ ಬಾಲಕ ತನ್ನ ಐದನೇ ವಯಸ್ಸಿನಲ್ಲಿ ದುಬೈಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಸದ್ಯ ‘ಮೆಂಗೊ ಎಂಜಿನ್’ ಎನ್ನುವ ಕಂಪನಿಯನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಇದು ಮಾರ್ಕೆಟಿಂಗ್, ಗ್ರಾಹಕರೊಂದಿಗೆ ಸಂವಹನ, ಮಾರುಕಟ್ಟೆ ಬೆಂಬಲ ಮತ್ತು ವಿಷಯ ರಚನೆಯಂತಹ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಎಐ ವೇದಿಕೆ. ದುಬೈನಲ್ಲಿ ಎಐ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿದ ಅತ್ಯಂತ ಕಿರಿಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಜೈನಮ್ ಗುರುತಿಸಿಕೊಂಡಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.6ನೇ ವಯಸ್ಸಿನಲ್ಲೇ ಉದ್ಯಮಿಯಾಗುವ ಕನಸು‘ಆರನೇ ವರ್ಷದಲ್ಲಿದ್ದಾಗಲೇ ಉದ್ಯಮಿಯಾಗಬೇಕೆನ್ನುವ ಪಯಣ ಆರಂಭವಾಗಿತ್ತು. ತಂದೆಯೊಂದಿಗೆ ಸಭೆಗಳಲ್ಲಿ ಭಾಗಿಯಾಗುತ್ತಿದ್ದೆ. ಇದರಿಂದ ಉದ್ಯೋಗ ಆರಂಭಿಸಬೇಕೆಂಬ ಕನಸು ಹುಟ್ಟಿತ್ತು. ಅಲ್ಲಿಂದ ಓದಿನ ಮೇಲೆ ಮಾತ್ರವಲ್ಲದೆ, ಉದ್ಯಮಕ್ಕೆ ಸಂಬಂಧಿಸಿದ ಇವೆಂಟ್ಗಳಲ್ಲಿ ಭಾಗವಹಿಸುತ್ತಿದ್ದೆ, ಉದ್ಯಮ ನಡೆಸುತ್ತಿರುವವರನ್ನು ಭೇಟಿಯಾಗುತ್ತಿದ್ದೆ, ಜತೆಗೆ ಉದ್ಯಮ ಜಗತ್ತಿನ ಅಸಲಿ ವಿಚಾರಗಳನ್ನು ಕಲಿಯುತ್ತಿದ್ದೆ’ ಎಂದು ಜೈನಮ್ ಹೇಳಿಕೊಂಡಿದ್ದಾರೆ.105 ದಿನದಲ್ಲಿ 10ನೇ ತರಗತಿ ಮುಗಿಸಿದ್ದ13ನೇ ವಯಸ್ಸಿನಲ್ಲಿ ಜೈನಮ್ ಐಜಿಸಿಎಸ್ಇಯಲ್ಲಿ (ಅಂತರರಾಷ್ಟ್ರೀಯ ಪ್ರೌಢ ಶಿಕ್ಷಣ) 10 ನೇ ತರಗತಿಯನ್ನು ಮುಗಿಸಿದ್ದರು. ಅದೂ 105 ದಿನಗಳಲ್ಲಿ. ಕಂಪನಿಯನ್ನು ನಿರ್ಮಿಸಲು ಮತ್ತು ಹೊಸ ಆಲೋಚನೆಗಳನ್ನು ಮಾಡಲು ಹೆಚ್ಚಿನ ಸಮಯವನ್ನು ವಿನಿಯೋಗಿಸಲು ವೇಗದ ಕಲಿಕಾ ವಿಧಾನವನ್ನು ಅಳವಡಿಸಿಕೊಂಡೆ ಎನ್ನುವ ಜೈನಮ್, ಪ್ರಾಯೋಗಿಕ ಅನುಭವವು ತರಗತಿಯ ಶಿಕ್ಷಣದಷ್ಟೇ ಮುಖ್ಯವಾಗಿದೆ ಎನ್ನುತ್ತಾರೆ.ತಂದೆ, ತಾಯಿ ಇಬ್ಬರೂ ಉದ್ಯಮಿಗಳುಜೈನಮ್ ಅವರ ತಂದೆ ಧೀರಜ್ ಜೈನ್. ತಾಯಿ ಮಮತಾ ಜೈನ್ ಇವರೂ ಉದ್ಯಮಿಗಳಾಗಿದ್ದಾರೆ. ಜೈನಮ್ ಅವರ ತಂಗಿ ಜೀವಿಕಾ ಕೂಡ ತಂದೆ ಮತ್ತು ಅಣ್ಣನ ಉದ್ಯಮಕ್ಕೆ ಸಾಥ್ ನೀಡುತ್ತಿದ್ದಾರೆ.ಅಲ್ಲದೆ, ಜೈನಮ್ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನೂ ತಂದೆ, ತಾಯಿಯೇ ನಿರ್ವಹಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. View this post on Instagram TEDxನಲ್ಲಿ ಮಾತು, ಲೇಖಕ ಕೂಡಕೇವಲ 14ನೇ ವಯಸ್ಸಿನಲ್ಲಿ ಸ್ಟಾರ್ಟ್ಅಪ್ ಕಂಪನಿಯನ್ನು ಮುನ್ನಡೆಸುವುದಲ್ಲದೆ, ಜೈನಮ್ TEDxನಲ್ಲೂ ತಮ್ಮ ಸಾಧನೆಯ ಬಗ್ಗೆ ಮಾತನಾಡಿದ್ದಾರೆ. ಇವರು ಬರೆದ 2 ಪುಸ್ತಕಗಳಿಗೆ ಪೇಟೆಂಟ್ಗಳನ್ನೂ ಹೊಂದಿದ್ದಾರೆ. ಇವರ ಯುಟ್ಯೂಬ್ ಚಾನೆಲ್ಗೆ 1,45,000ಕ್ಕೂ ಹೆಚ್ಚು ಚಂದಾದಾರರಿದ್ದಾರೆ. 10ನೇ ವಯಸ್ಸಿನಲ್ಲಿ 50 ದಿನಗಳ ಸವಾಲು ಎದುರಿಸಿದ್ದ ಜೈನಮ್, 50 ದಿನದಲ್ಲಿ 50 ಪುಸ್ತಕಗಳನ್ನು ಓದಿ ಮುಗಿಸಿದ್ದರು, 50 ಬ್ಯುಸಿನೆಸ್ ಇವೆಂಟ್ಗಳಲ್ಲಿ ಭಾಗಹಿಸಿದ್ದರು. ಜತೆಗೆ ಭಾರತದಾದ್ಯಂತ ಸುಮಾರು 6 ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯಮಿಗಳು ಮತ್ತು ವೃತ್ತಿಪರರನ್ನು ಭೇಟಿಯಾಗಿ ಮಾಹಿತಿ, ಅನುಭವ ಪಡೆದುಕೊಂಡಿದ್ದರು.ದುಬೈನಲ್ಲಿ ಉದ್ಯಮಿಯೊಬ್ಬರನ್ನು ಭೇಟಿಯಾಗಿದ್ದ ಜೈನಮ್ ಕುಟುಂಬಭವಿಷ್ಯದ ಹತ್ತಾರು ಯೋಜನೆಗಳುಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬೇಕೆನ್ನುವ ಯೋಜನೆಗಳನ್ನೂ ರೂಪಿಸಿಕೊಂಡಿರುವ ಜೈನಮ್, ಜಾಗತಿಕವಾಗಿ ಗುರುತಿಸಲ್ಪಡುವ ಕಂಪನಿಯನ್ನು ನಿರ್ಮಿಸುವುದು ತನ್ನ ಗುರಿ ಎನ್ನುತ್ತಾರೆ. ಯಶಸ್ಸು ಎನ್ನುವುದು ವಯಸ್ಸಿನ ಮೇಲಲ್ಲ, ಆಲೋಚನೆ, ಸತತ ಪ್ರಯತ್ನ ಮತ್ತು ಶಿಸ್ತಿನ ಮೇಲೆ ಹೆಚ್ಚು ಅವಲಂಬಿತವಾಗಿದೆ ಎನ್ನುವುದು ಜೈನಮ್ ಮಾತು.ಸದ್ಯ ಜೈನಮ್ ಅವರ ಯಶಸ್ಸಿನ ಪಯಣ ಯುವ ಉದ್ಯಮಿಗಳನ್ನು ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜೈನಮ್ ತಮ್ಮ ಕೆಲಸದ ಬಗೆಗಿನ ಮಾಹಿತಿಯನ್ನೂ ಹಂಚಿಕೊಳ್ಳುತ್ತಾರೆ. ಹೀಗಾಗಿ ವ್ಯಾಪಾರ ವಲಯದಲ್ಲಿಯೂ ಗಮನ ಸೆಳೆದಿದ್ದಾರೆ.Took the stage at AstroLabs, JLT.Talking about how I'm building with AI, not just watching it.Just the real story. pic.twitter.com/BzYkUSLiar— Jainam Jain (@Jainamjain_1xl) July 6, 2026