ಕೃಷಿ ಇಲಾಖೆಯಿಂದ ಹತ್ತಿ ಬೆಳೆ ಉತ್ಪಾದಕತೆ ಅಭಿಯಾನ ಗುರ್ಲಕಟ್ಟಿಯಲ್ಲಿ
ನರಗುಂದ: ಕೃಷಿ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಗುರ್ಲಕಟ್ಟಿಯಲ್ಲಿ ಹತ್ತಿ ಬೆಳೆಯಲ್ಲಿ ಉತ್ಪಾದಕತೆ ಅಭಿಯಾನ ಸೋಮವಾರ ನಡೆಯಿತು. ಸಸ್ಯ ಕೀಟಶಾಸ್ತ್ರ ವಿಜ್ಞಾನಿ ಶಾನವಾಡ ಮಾತನಾಡಿ, ಹತ್ತಿ ಬೆಳೆಯಲ್ಲಿ ಆವರಿಸಿಕೊಳ್ಳಬಹುದಾದ ಬೇಸಾಯ ಕ್ರಮಗಳ ಬಗ್ಗೆ ಮತ್ತು ಹತ್ತಿ ಉತ್ಪಾದಕತೆ ಅಭಿಯಾನದಲ್ಲಿ ಅಳವಡಿಸಿಕೊಂಡಿರುವ ತಾಂತ್ರಿಕತೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.ಪೂರ್ಣಿಮಾ

ನರಗುಂದ: ಕೃಷಿ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಗುರ್ಲಕಟ್ಟಿಯಲ್ಲಿ ಹತ್ತಿ ಬೆಳೆಯಲ್ಲಿ ಉತ್ಪಾದಕತೆ ಅಭಿಯಾನ ಸೋಮವಾರ ನಡೆಯಿತು. ಸಸ್ಯ ಕೀಟಶಾಸ್ತ್ರ ವಿಜ್ಞಾನಿ ಶಾನವಾಡ ಮಾತನಾಡಿ, ಹತ್ತಿ ಬೆಳೆಯಲ್ಲಿ ಆವರಿಸಿಕೊಳ್ಳಬಹುದಾದ ಬೇಸಾಯ ಕ್ರಮಗಳ ಬಗ್ಗೆ ಮತ್ತು ಹತ್ತಿ ಉತ್ಪಾದಕತೆ ಅಭಿಯಾನದಲ್ಲಿ ಅಳವಡಿಸಿಕೊಂಡಿರುವ ತಾಂತ್ರಿಕತೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.ಪೂರ್ಣಿಮಾ ಮಟ್ಟಿ ಮಾತನಾಡಿ, ಹತ್ತಿ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಭಾದೆ ಅವುಗಳ ಲಕ್ಷಣಗಳು ಮತ್ತು ನಿಯಂತ್ರಣದ ಬಗ್ಗೆ ರೈತರಿಗೆ ಸಲಹೆ ನೀಡಿದರು.ಎ.ಆರ್ ಕರಿಕಟ್ಟಿ ಮಾತನಾಡಿ, ಹತ್ತಿ ಉತ್ಪಾದನೆ ಮತ್ತು ಉತ್ಪಾದಕತೆಯ ಅವಶ್ಯಕತೆ ಮತ್ತು ಈ ಸಂಬಂಧ ಹತ್ತಿ ಉತ್ಪಾದಕತೆ ಅಭಿಯಾನದ ಮಹತ್ವದ ಬಗ್ಗೆ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ರೋಣ ಕೃಷಿ ಉಪ ನಿರ್ದೇಶಕ ಜಯಪ್ರಕಾಶ್ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ಗುರ್ಲಕಟ್ಟಿ ಮತ್ತು ಭೈರನಹಟ್ಟಿ ಗ್ರಾಮಗಳನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಹತ್ತಿ ಬೆಳೆಯುವ ರೈತರಿಗೆ ಅಗತ್ಯವಿರುವ ತಾಂತ್ರಿಕ ತರಬೇತಿಗಳನ್ನು ನೀಡಿ ಹತ್ತಿ ಬೆಳೆಯುವ ಉತ್ಪಾದಕತೆಯನ್ನು ಹೆಚ್ಚಿಸುವುದು. ಉಳಿದ ಗ್ರಾಮಗಳ ರೈತರಿಗೂ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಿವಾಜಿ ಸಾಠೆ ನಿರೂಪಿಸಿದರು. ತಾಲ್ಲೂಕು ವ್ಯವಸ್ಥಾಪಕ ಪ್ರವೀಣ್ ಪಾಟೀಲ ವಂದಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260707-23-513777567