ಬಹುಕಾಲದ ಮುನಿಸು ಅನ್ಶುಲಾ ಮದುವೆಯಲ್ಲಿ ಅಂತ್ಯ.. ಕಪೂರ್ ಕುಟುಂಬದಲ್ಲಿ ಸಂತಸ
ಕೆಲವೊಮ್ಮೆ ಒಂದು ಮದುವೆ ಎರಡು ಮನಸ್ಸುಗಳನ್ನು ಮಾತ್ರವಲ್ಲ, ಹಲವು ವರ್ಷಗಳಿಂದ ದೂರವಾಗಿದ್ದ ಸಂಬಂಧಗಳನ್ನೂ ಮತ್ತೆ ಒಂದು ಮಾಡುತ್ತದೆ. ಬಾಲಿವುಡ್ನ (Bollywood)ಕಪೂರ್ ಖಾಂದಾನ್ನಲ್ಲಿ ಇದೀಗ ಅಂತಹದ್ದೇ ಭಾವನಾತ್ಮಕ ಕ್ಷಣಕ್ಕೆ ಅನ್ಶುಲಾ ಕಪೂರ್ ಮದುವೆ ಸಾಕ್ಷಿಯಾಗಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ (Bony Kapoor) ಅವರ ಪುತ್ರಿ ಅನ್ಶುಲಾ ಕಪೂರ್, ಸ್ಕ್ರಿಪ್ಟ್ ರ

ಕೆಲವೊಮ್ಮೆ ಒಂದು ಮದುವೆ ಎರಡು ಮನಸ್ಸುಗಳನ್ನು ಮಾತ್ರವಲ್ಲ, ಹಲವು ವರ್ಷಗಳಿಂದ ದೂರವಾಗಿದ್ದ ಸಂಬಂಧಗಳನ್ನೂ ಮತ್ತೆ ಒಂದು ಮಾಡುತ್ತದೆ. ಬಾಲಿವುಡ್ನ (Bollywood)ಕಪೂರ್ ಖಾಂದಾನ್ನಲ್ಲಿ ಇದೀಗ ಅಂತಹದ್ದೇ ಭಾವನಾತ್ಮಕ ಕ್ಷಣಕ್ಕೆ ಅನ್ಶುಲಾ ಕಪೂರ್ ಮದುವೆ ಸಾಕ್ಷಿಯಾಗಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ (Bony Kapoor) ಅವರ ಪುತ್ರಿ ಅನ್ಶುಲಾ ಕಪೂರ್, ಸ್ಕ್ರಿಪ್ಟ್ ರೈಟರ್ ರೋಹನ್ ಥಕ್ಕರ್ ಅವರನ್ನು ಜುಲೈ 6ರಂದು ಮುಂಬೈನಲ್ಲಿ ವಿವಾಹವಾಗಿದ್ದಾರೆ. ಮದುವೆಯಲ್ಲಿ ಇಡೀ ಕಪೂರ್ ಕುಟುಂಬ ಒಂದಾಗಿ ಕಾಣಿಸಿಕೊಂಡಿದ್ದು, ಹಲವು ವರ್ಷಗಳ ಬಳಿಕ ಕುಟುಂಬದ ಸಂತಸದ ಕ್ಷಣ ಅಭಿಮಾನಿಗಳ ಗಮನ ಸೆಳೆದಿದೆ. ಬೋನಿ ಕಪೂರ್ ಮೊದಲ ಪತ್ನಿ ಮೋನಾ ಶೌರಿ ಅವರ ಮಕ್ಕಳಾದ ಅರ್ಜುನ್ ಕಪೂರ್ ಮತ್ತು ಅನ್ಶುಲಾ ಕಪೂರ್, ಶ್ರೀದೇವಿಯನ್ನು ಬೋನಿ ಕಪೂರ್ ಮದುವೆಯಾದ ಬಳಿಕ ತಂದೆಯಿಂದ ದೂರವಾಗಿದ್ದರು. ತಾಯಿಗೆ ಅನ್ಯಾಯವಾಗಿದೆ ಎಂಬ ನೋವಿನಿಂದ ಇಬ್ಬರೂ ತಂದೆಯ ಜೊತೆ ಅಂತರ ಕಾಯ್ದುಕೊಂಡಿದ್ದರು. ಈ ವಿಚಾರವನ್ನು ಅರ್ಜುನ್ ಕಪೂರ್ ಹಲವು ಸಂದರ್ಶನಗಳಲ್ಲೂ ಹೇಳಿಕೊಂಡಿದ್ದರು. 2012ರಲ್ಲೇ ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಶೌರಿ ನಿಧನರಾಗಿದ್ದರು. ಅದರ ಬಳಿಕವೂ ಅರ್ಜುನ್ ಕಪೂರ್ ಹಾಗೂ ಅನ್ಶುಲಾ ಕಪೂರ್ ತಂದೆಯ ಜೊತೆ ವಾಸಿಸುತ್ತಿರಲಿಲ್ಲ. ಆದರೆ, ಶ್ರೀದೇವಿ ನಿಧನದ ಬಳಿಕ ಕಾಲಕ್ರಮೇಣ ಅರ್ಜುನ್, ಅನ್ಶುಲಾ, ಜಾಹ್ನವಿ ಹಾಗೂ ಖುಷಿ ನಡುವೆ ಆಪ್ತ ಸಂಬಂಧ ಬೆಳೆಯಿತು.ಇದನ್ನೂ ಓದಿ: ಭಾರೀ ಮಳೆ ನಡುವೆಯೂ ಬಚ್ಚನ್ ಮನೆ ಬಳಿ ಜಮಾಯಿಸಿದ ಫ್ಯಾನ್ಸ್ – ಬಿಗ್ಬಿ ಹೇಳಿದ್ದೇನು? ಬೋನಿ ಕಪೂರ್ ಅವರ ಪುತ್ರಿ ಅನ್ಶುಲಾ, ಸ್ಕ್ರಿಪ್ಟ್ ರೈಟರ್ ರೋಹನ್ ಥಕ್ಕರ್ ಅವರನ್ನು ವಿವಾಹವಾಗಿದ್ದಾರೆ. ಜುಲೈ 6ರಂದು ಮುಂಬೈನಲ್ಲಿ ಮದುವೆ ನಡೆದಿದೆ. ಮದುವೆಯ ಫೋಟೋಗಳನ್ನು ಅನ್ಶುಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫ್ಯಾಮಿಲಿ ಫೋಟೋ ಕೂಡ ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಅಣ್ಣ ಅರ್ಜುನ್, ತಂಗಿಯರಾದ ಜಾಹ್ನವಿ, ಖುಷಿ ಹಾಗೂ ತಂದೆ ಬೋನಿ ಕಪೂರ್ ಜೊತೆ ಯಾವುದೇ ಬಿಗುಮಾನವಿಲ್ಲದೆ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. ಅನ್ಶುಲಾ ಅವರ ಮದುವೆಯಲ್ಲಿ ಬೋನಿ ಕಪೂರ್ ಅವರ ಇಬ್ಬರು ಪತ್ನಿಯರ ಮಕ್ಕಳು ಒಂದಾಗಿ ಮಿಂಚಿರುವುದು ಎಲ್ಲರ ಗಮನ ಸೆಳೆದಿದೆ.ಇದನ್ನೂ ಓದಿ: ಸ್ಪೆಷಲ್ ಚಿತ್ರಗಳ ಮೂಲಕ ಯೋಗೀಶ್ವರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ