ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ನ್ಯೂಸ್
ಬೆಂಗಳೂರು: ಬಾಡಿಗೆದಾರರಾಗಿರುವ ಗೃಹಜ್ಯೋತಿ (Gruhajyoti) ಫಲಾನುಭವಿಗಳಿಗೆ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಅಗ್ರಿಮೆಂಟ್ ಕಾಪಿ ಇಲ್ಲದಿದ್ದರೂ ಬಾಡಿಗೆದಾರರು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬಹುದು ಅಂತ ಇಂಧನ ಇಲಾಖೆ ಹೇಳಿದೆ. ಬಾಡಿಗೆ ಅಗ್ರಿಮೆಂಟ್ ಪ್ರತಿ ಇಲ್ಲದಿದ್ದರೆ ಬೆಸ್ಕಾಂ (BESCOM) ಅಧಿಕಾರಿಗಳು ಕೊಡುವ ಒಂದು ಫಾರಂಗೆ ಬಾಡಿಗೆದಾರರು ಮತ್ತು ಮಾಲೀಕರು ಸಹಿ ಹಾಕ

ಬೆಂಗಳೂರು: ಬಾಡಿಗೆದಾರರಾಗಿರುವ ಗೃಹಜ್ಯೋತಿ (Gruhajyoti) ಫಲಾನುಭವಿಗಳಿಗೆ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಅಗ್ರಿಮೆಂಟ್ ಕಾಪಿ ಇಲ್ಲದಿದ್ದರೂ ಬಾಡಿಗೆದಾರರು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬಹುದು ಅಂತ ಇಂಧನ ಇಲಾಖೆ ಹೇಳಿದೆ. ಬಾಡಿಗೆ ಅಗ್ರಿಮೆಂಟ್ ಪ್ರತಿ ಇಲ್ಲದಿದ್ದರೆ ಬೆಸ್ಕಾಂ (BESCOM) ಅಧಿಕಾರಿಗಳು ಕೊಡುವ ಒಂದು ಫಾರಂಗೆ ಬಾಡಿಗೆದಾರರು ಮತ್ತು ಮಾಲೀಕರು ಸಹಿ ಹಾಕಿ ಕೊಡಬೇಕು. ಇದಕ್ಕಾಗಿ ಇಂಧನ ಇಲಾಖೆ ಹೊಸ ಫಾರಂ ಸಿದ್ಧಪಡಿಸಿದೆ. ಗ್ರಾಮಾಂತರ ಭಾಗಗಳಲ್ಲಿ ಅಗ್ರಿಮೆಂಟ್ ಕಾಪಿ ಇಲ್ಲದೇ ಅರ್ಜಿ ಸಲ್ಲಿಕೆ ಕಷ್ಟ ಆಗಿ ಇದೀಗ ಹೊಸ ಫಾರಂ ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ 8 ನಿರ್ಣಯ; ರಾಮ ಮಂದಿರ ಟ್ರಸ್ಟ್ನಿಂದ ನೀಟ್ವರೆಗೆ ಕಾಂಗ್ರೆಸ್ ವಾಗ್ದಾಳಿ ಈ ಮಧ್ಯೆ, ಗೃಹಜ್ಯೋತಿ ಪರಿಷ್ಕರಣೆಗಾಗಿ ಬಿಲ್ ರೀಡರ್ಗಳನ್ನು ಬಳಸಿಕೊಳ್ಳುತ್ತಿರುವ ಕಾರಣ ಜುಲೈ ತಿಂಗಳಿನಲ್ಲಿ ಮೀಟರ್ ರೀಡಿಂಗ್ ಇರಲ್ಲ. ಬದಲಿಗೆ ಕಳೆದ 3 ತಿಂಗಳಲ್ಲಿ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಜುಲೈ ತಿಂಗಳ ಸರಾಸರಿ ಬಿಲ್ ಬರಲಿದೆ ಅಂತ ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
Read the complete story at Public TV Kannada