ಸರ್ಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ
ಶಿಗ್ಗಾವಿ: ‘ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ.ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅವಶ್ಯವಾಗಿದೆ’ ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ ಹೇಳಿದರು.ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಎಲ್.ಕೆ.ಜಿ ತರಗತಿ ಚಾ

ಶಿಗ್ಗಾವಿ: ‘ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ.ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅವಶ್ಯವಾಗಿದೆ’ ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ ಹೇಳಿದರು.ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಎಲ್.ಕೆ.ಜಿ ತರಗತಿ ಚಾಲನೆ, ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಿಸಿ ಮಾತನಾಡಿದರು.ನಿವೃತ್ತ ಶಿಕ್ಷಕ ವಿ.ಎಸ್. ಭದ್ರಶೆಟ್ಟಿ, ಚಂದ್ರು ದುಂಡಪ್ಪನವರ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರು ಬಡಿಗೇರ, ಉಳವಪ್ಪ ಅಮಾತ್ಯೆಣ್ಣನವರ, ವಿ.ಜಿ. ದುಂಡಪ್ಪನವರ, ಈಶ್ವರಗೌಡ ಪಾಟೀಲ ಮಾತನಾಡಿದರು. ಈ ವೇಳೆ ಎಸ್.ಎಸ್.ಎಲ್.ಸಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು.ಮುಖಂಡರಾದ ಎಚ್.ಡಿ. ಕುಂಕೂರ, ಎಸ್.ಎ. ಸಯ್ಯದ್, ಡಿ.ಆರ್. ಕಮದೋಡ, ಗೂಳಪ್ಪ ಅರಳಿಕಟ್ಟಿ, ಬಸಪ್ಪ ಭದ್ರಶೆಟ್ಟಿ, ಟಿ.ಕೆ.ಪಾಟೀಲ, ಶಿವಣ್ಣ ಅರಳಿಕಟ್ಟಿ, ಹವಳೆಪ್ಪ ಪೂಜಾರ, ಮಹಾದೇವಪ್ಪ ಕಾಮನಹಳ್ಳಿ, ಅಶೋಕ ಬೆಂಗೇರಿ, ಬಸವರಾಜ ಗೊಬ್ಬಿ, ಸೋಮಣ್ಣ ಸಕ್ರಿ, ಮಹಾದೇವಪ್ಪ ತಳವಾರ, ಮಂಜುನಾಥ ಬಿಶೆಟ್ಟಿ, ಮೀರಾಬಾಯಿ, ಶಾಂತಪ್ಪ ಮೂಡಲದವರ ಇದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260708-22-1926635271