ಕ್ರಿಶ್ಚಿಯನ್ ಮಿಷನರಿ ‘ಟಿಟಿಐ’ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
ಬೆಂಗಳೂರು: ‘ಉಗ್ರವಾದವನ್ನು ಪ್ರೋತ್ಸಾಹಿಸುವ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಯದಿದ್ದರೆ ಉಗ್ರಗಾಮಿ ಚಳವಳಿಗಳು ಬದುಕುಳಿಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತೆಯನ್ನು ರಕ್ಷಣೆ ಮಾಡಬೇಕಿರುವುದು ಸಾಮೂಹಿಕವಾದ ಸಾಂವಿಧಾನಿಕ ಬಾಧ್ಯತೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಎಡಪಂಥೀಯ ಸಂಘಟನೆಗಳಿಗೆ ಹಣಕಾಸಿನ ನೆರ
ಬೆಂಗಳೂರು: ‘ಉಗ್ರವಾದವನ್ನು ಪ್ರೋತ್ಸಾಹಿಸುವ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಯದಿದ್ದರೆ ಉಗ್ರಗಾಮಿ ಚಳವಳಿಗಳು ಬದುಕುಳಿಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತೆಯನ್ನು ರಕ್ಷಣೆ ಮಾಡಬೇಕಿರುವುದು ಸಾಮೂಹಿಕವಾದ ಸಾಂವಿಧಾನಿಕ ಬಾಧ್ಯತೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಎಡಪಂಥೀಯ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದಡಿ ಅಮೆರಿಕದ, ‘ದಿ ತಿಮೋತಿ ಇನಿಷಿಯೇಟಿವ್’ (ಟಿಟಿಐ) ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯ ಆರು ಮಂದಿ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರಾಕರಿಸಿದೆ.‘ಪ್ರಸಕ್ತ ದಿನಗಳಲ್ಲಿ ಉಗ್ರವಾದಕ್ಕೆ ನೀರೆರೆಯಲು ರಹಸ್ಯ ಹಣಕಾಸಿನ ಮೂಲಗಳು ಕೆಲಸ ಮಾಡುತ್ತಿವೆ. ಇಂತಹ ನಿಧಿಯು ಸೈದ್ಧಾಂತಿಕ ಉಗ್ರವಾದವನ್ನು ಸಂಘಟಿತ ಹಿಂಸಾಚಾರವಾಗಿ ಪರಿವರ್ತಿಸಬಹುದು ಮತ್ತು ರಾಷ್ಟ್ರೀಯ ಏಕತೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ ತಂದೊಡ್ಡಬಲ್ಲದು’ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.‘ಅಕ್ರಮ ಮಾರ್ಗಗಳಲ್ಲಿ ಹರಿದಾಡುವ ಹಣಕಾಸು ಚಟುವಟಿಕೆಗಳನ್ನು ನಿಗ್ರಹಿಸಲು ಪರಿಣಾಮಕಾರಿಯಾದ ಗುಪ್ತಚರ ನಿಗಾ ವ್ಯವಸ್ಥೆ, ಕಟ್ಟುನಿಟ್ಟಾದ ನಿಯಂತ್ರಣಾ ಮೇಲ್ವಿಚಾರಣೆ, ಹಣ ವರ್ಗಾವಣೆ ವಿರೋಧಿ ಕಾಯ್ದೆಯ ಅಡಿಯಲ್ಲಿ ಬಿಗಿಯಾದ ಕಾನೂನು ಕ್ರಮಗಳು ಜಾರಿಯಾಗಬೇಕು. ಇದಕ್ಕಾಗಿ ತನಿಖಾ ಸಂಸ್ಥೆಗಳು ಹಣಕಾಸು ಮೇಲ್ವಿಚಾರಣೆ ಮತ್ತು ಭದ್ರತಾ ಜಾರಿ ನಿರ್ದೇಶನಾಲಯಗಳ ಜೊತೆ ಸಮನ್ವಯ ಕಾಯ್ದುಕೊಂಡು ಮುನ್ನಡೆಯಬೇಕು’ ಎಂದು ನ್ಯಾಯಪೀಠ ಹೇಳಿದೆ.ರಾಜ್ಯ ಪ್ರಾಸಿಕ್ಯೂಷನ್ ಪರ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಹಾಗೂ ಇ.ಡಿ ಪರ ಮಧು ಎನ್.ರಾವ್ ವಾದ ಮಂಡಿಸಿದ್ದರು.– ನ್ಯಾ.ಎಂ.ನಾಗಪ್ರಸನ್ನರಾಷ್ಟ್ರೀಯ ಭದ್ರತೆ ಎನ್ನುವುದು ಒಂದು ರಾಷ್ಟ್ರದ ಸಾರ್ವಭೌಮತ್ವ, ಸ್ಥಿರತೆ ಮತ್ತು ಸಾಂವಿಧಾನಿಕ ಕ್ರಮದ ಮೇಲೆ ನಿಂತಿರುವ ಅಗೋಚರವಾದ ಸುಂದರ ವಾಸ್ತುಶಿಲ್ಪ. ಇದಕ್ಕೆ ಧಕ್ಕೆ ತರುವ ಹಣಕಾಸು ಮಾರ್ಗಗಳ ವಿರುದ್ಧ ಕಣ್ಣಿಡುವುದು ಅಗತ್ಯ.ನಕ್ಸಲ್ ಚಟುವಟಿಕೆಗಳಿಗೆ ಹಣ ಆರೋಪ‘ಪ್ರಕರಣದ ಎರಡನೇ ಆರೋಪಿಯಾಗಿರುವ ಮತ್ತು ಅರ್ಜಿದಾರರೂ ಆದ ಮಿಕಾ ಮಾರ್ಕ್, ವಿದೇಶ ಪ್ರವಾಸದಿಂದ ಹಿಂದಿರುಗುವ ವೇಳೆಯಲ್ಲಿ ಹಲವು ವಿದೇಶಿ ಡೆಬಿಟ್ ಕಾರ್ಡ್ ಹೊಂದಿದ್ದಾರೆ’ ಎಂಬ ಶಂಕೆಯಡಿ ಇ.ಡಿ ಅಧಿಕಾರಿಗಳು ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.ವಿಚಾರಣೆ ವೇಳೆ ಅವರ ಬಳಿ 24 ಅಂತರರಾಷ್ಟ್ರೀಯ ವಹಿವಾಟಿನ ವಿದೇಶಿ ಡೆಬಿಟ್ ಕಾರ್ಡ್ಗಳು ದೊರೆತಿದ್ದವು. ಈ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ‘ದಿ ತಿಮೋತಿ ಇನಿಷಿಯೇಟಿವ್ ಸಂಸ್ಥೆ’ ಹಾಗೂ ಇದರ ಮುಖ್ಯಸ್ಥರಾದ ಬೆಂಗಳೂರಿನ ಜೊನಾಥನ್ ಎಸ್.ರಾಜನ್, ಮಿಕಾ ಮಾರ್ಕ್, ಅಜಿತ್ ವರ್ಗಿಸ್ ಮಥಾಯಿ, ವರ್ಗಿ ಚಾಕೊ, ಬಲ್ಲು ಕುರ್ಮಿ ಮತ್ತು ಸುಪ್ರೀಂ ಜಾಯ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.‘ಆರೋಪಿಗಳು ವಿದೇಶಿ ಡೆಬಿಟ್ ಕಾರ್ಡ್ಗಳನ್ನು ಬಳಸಿ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅನುಮಾನಸ್ಪದ ನಗದು ವಹಿವಾಟು ನಡೆಸಿದ್ದಾರೆ. 2025ರ ನವೆಂಬರ್ನಿಂದ 2026ರ ಏಪ್ರಿಲ್ ನಡುವೆ ₹92.55 ಕೋಟಿ ಹಾಗೂ 2024ರ ಜನವರಿಯಿಂದ 2026ರ ಮಾರ್ಚ್ ನಡುವಿನ ಅವಧಿಯಲ್ಲಿ ಕರ್ನಾಟಕ, ಛತ್ತೀಸ್ಗಡ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ₹44 ಕೋಟಿಗೂ ಅಧಿಕ ಹಣವನ್ನು ಎಟಿಎಂ ಮೂಲಕ ಡ್ರಾ ಮಾಡಿಕೊಂಡಿದ್ದಾರೆ’ ಎಂದು ಆಪಾದಿಸಲಾಗಿದೆ.