ಕೋಳಿ ಉದ್ಯಮದಲ್ಲಿ ಸೋತವರಿಗೆ ಆಸರೆಯಾದ ಅಣಬೆ: ಉದ್ಯೋಗದಾತರಾದ ಅಪ್ಪ–ಮಗನ ಯಶೋಗಾಥೆ
ಸೋಲೇ ಗೆಲುವಿನ ಸೋಪಾನ ಎನ್ನುವುದು ಹಲವರ ಬದುಕಿಗೆ ಅನ್ವಯಿಸುತ್ತದೆ. ಅದರಲ್ಲೂ ಕೃಷಿಯಲ್ಲಿ ತೊಡಗಿಸಿಕೊಂಡವರು, ಉದ್ಯಮದಲ್ಲಿ ಹಣ ಹೂಡಿದವರು ಏರಳಿತಗಳನ್ನು ಅನುಭವಿಯೇ ಇರುತ್ತಾರೆ. ನಿರಂತರ ಪ್ರಯತ್ನ, ಮಾರುಕಟ್ಟೆ ಆಧರಿತ ಉತ್ಪಾದನೆ, ಸರಬರಾಜು ಕೈ ಹಿಡಿಯುವುದೂ ಇದೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಶ್ರೀಕಾಂತ ಮುಧೋಳೆ ಹಲವು ಪ್ರಯೋಗಗಳನ್ನು ಮಾಡಿದರೂ ಯಶಸ್ಸು ಕಂಡಿರಲಿಲ್
ಸೋಲೇ ಗೆಲುವಿನ ಸೋಪಾನ ಎನ್ನುವುದು ಹಲವರ ಬದುಕಿಗೆ ಅನ್ವಯಿಸುತ್ತದೆ. ಅದರಲ್ಲೂ ಕೃಷಿಯಲ್ಲಿ ತೊಡಗಿಸಿಕೊಂಡವರು, ಉದ್ಯಮದಲ್ಲಿ ಹಣ ಹೂಡಿದವರು ಏರಳಿತಗಳನ್ನು ಅನುಭವಿಯೇ ಇರುತ್ತಾರೆ. ನಿರಂತರ ಪ್ರಯತ್ನ, ಮಾರುಕಟ್ಟೆ ಆಧರಿತ ಉತ್ಪಾದನೆ, ಸರಬರಾಜು ಕೈ ಹಿಡಿಯುವುದೂ ಇದೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಶ್ರೀಕಾಂತ ಮುಧೋಳೆ ಹಲವು ಪ್ರಯೋಗಗಳನ್ನು ಮಾಡಿದರೂ ಯಶಸ್ಸು ಕಂಡಿರಲಿಲ್ಲ. ರೇಷ್ಮೆ ಕೃಷಿ ಮಾಡಿದರೂ ಯಶಸ್ಸು ಸಿಗಲಿಲ್ಲ. ಕೋಳಿ ಮಾಂಸದ ಬೇಡಿಕೆಗೆ ಅನುಗುಣವಾಗಿ ದೊಡ್ಡ ಪೌಲ್ಟ್ರಿ ಉದ್ಯಮ ಆರಂಭಿಸಿದರೂ ಅದು ಲಾಭ ತರುವುದಕ್ಕಿಂತ ನಷ್ಟಕ್ಕೆ ದೂಡಿತು. ಆಗ ಶ್ರೀಕಾಂತ ಅವರ ಕೈ ಹಿಡಿದಿದ್ದು ಅಣಬೆ ಕೃಷಿ. ಶ್ರೀಕಾಂತ ಅವರು ಜಮಖಂಡಿ ನಗರದ ಮೈಗೂರು ರಸ್ತೆಯಲ್ಲಿರುವ ಸುಮಾರು ಅರ್ಧ ಎಕರೆ ಜಾಗದಲ್ಲಿ ಏನೆಲ್ಲಾ ಪ್ರಯೋಗ ಮಾಡಿದರೂ ಆಗಿರಲಿಲ್ಲ. ಸುಮಾರು 70 ಸಾವಿರ ಸಂಖ್ಯೆಯ ಕೋಳಿ ಇದ್ದ ಫಾರಂ ಆರಂಭಿಸಿದರೂ ಉಪಯೋಗವಾಗಲಿಲ್ಲ. ಬೇಡಿಕೆ ಕುಸಿದು ಮಾರಾಟ ಮಾಡಲು ಆಗಲಿಲ್ಲ.ಬದಲಾವಣೆ ಶುರುವಾಗಿದ್ದು ಹೀಗೆಹೊಸದನ್ನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಪರಿಚಯಸ್ಥರೊಬ್ಬರು ಅಣಬೆ ಬೇಸಾಯದ ಸಲಹೆ ನೀಡಿದರು. ಇದಕ್ಕಾಗಿ ಹೈದ್ರಾಬಾದ್ಗೆ ಹೋಗಿ ತರಬೇತಿಯನ್ನೂ ತೆಗೆದುಕೊಂಡು ಬಂದರು. ಹಲವು ರೀತಿಯ ಅಣಬೆ ಬೆಳೆಯಲು ಅವಕಾಶವಿದ್ದರೂ ಹಾಲು ಅಣಬೆಯ ಬೆಳೆಯುವ ಆಯ್ಕೆ ಮಾಡಿಕೊಂಡರು. ಅಣಬೆ ಬೆಳೆಯಲು ಪ್ರತ್ಯೇಕ ಶೆಡ್, ಹೀಟರ್ಗಳು, ಕೆಲವು ಉಪಕರಣಗಳು, ಸಾವಯವ ಗೊಬ್ಬರ ತಯಾರಿ ಸಹಿತ ಎಲ್ಲ ಸಿದ್ದತೆ ಮಾಡಿಕೊಂಡರು. ಶ್ರೀಕಾಂತ ಅವರು ಆರಂಭಿಸಿದಾಗ ಮೂರ್ನಾಲ್ಕು ಕೆಜಿ ಮಾತ್ರ ಬೆಳೆಯಲು ಸಾಧ್ಯವಾಯಿತು. ನಿಧಾನವಾಗಿ ವಿಸ್ತರಿಸುತ್ತಾ ಹೋದಾಗ ಬೆಂಬಲವೂ ಬೇಕಾಯಿತು. ಆಗ ಅವರ ಮಗ, ಸದ್ಯ ಕಾನೂನು ಪದವಿ ವಿದ್ಯಾರ್ಥಿಯಾದ ಪ್ರಮೋದ್ ಕೈ ಜೋಡಿಸಿದರು. ಅಣಬೆ ಬೆಳೆಯುವಾಗ ಅಪ್ಪ ಮಾಡುತ್ತಿದ್ದ ಪ್ರಯೋಗಗಳನ್ನು ನೋಡಿಕೊಂಡರು. ಮಗನೂ ಸೇರಿಕೊಂಡಿದ್ದರಿಂದ ಜೋಡಿಯಾಗಿ ಉತ್ಪಾದನೆ ಪ್ರಮಾಣವನ್ನೂ ಏರಿಸಿದರು. ಈಗ ನಿತ್ಯ 30 ಕೆಜಿವರೆಗೂ ಅಣಬೆಯನ್ನು ಬೆಳೆಯುತ್ತಾರೆ. ಅದನ್ನು ಬೆಂಗಳೂರು, ಮುಂಬೈ, ಇಚಲಕರಂಜಿ ಸಹಿತ ಹಲವು ಕಡೆಗಳಿಗೆ ಕಳುಹಿಸುತ್ತಾರೆ. ಒಂದು ಕೆಜಿ ಅಣಬೆ ಬೆಳೆಯಲು ಅಂದಾಜು ₹70 ಖರ್ಚು ಬರುತ್ತದೆ. ಆದರೆ, ಒಂದು ಕೆಜಿ ಅಣಬೆ ₹200 ರಿಂದ ₹250ಗೆ ಮಾರಾಟವಾಗುತ್ತದೆ. ಲಾಭವೂ ಸಿಗುತ್ತಿದೆ. ಅಣಬೆಯಲ್ಲಿ ಕೆಜಿಗೆ ₹10 ಲಕ್ಷ , ₹20 ಸಾವಿರವರೆಗೂ ಇವೆ. ಶ್ರೀಕಾಂತ ಹಾಗೂ ಪ್ರಮೋದ ಅವರ ಪ್ರಯತ್ನ ಇಲ್ಲಿಗೆ ನಿಲ್ಲಲಿಲ್ಲ. ನಿತ್ಯ 500 ಕೆಜಿವರೆಗೂ ಅಣಬೆ ಬೇಡಿಕೆ ಬರತೊಡಗಿದ್ದರಿಂದ ತಾವಷ್ಟೇ ಮಾಡಿದರೆ ಆಗುವುದಿಲ್ಲ ಎಂದು ತಿಳಿದು ಸುತ್ತಮುತ್ತಲಿನ ಆಸಕ್ತರಿಗೆ ತರಬೇತಿಯನ್ನೂ ಆರಂಭಿಸಿದರು. ನಿಯಮಿತವಾಗಿ ಆದಾಯವನ್ನು ಗಳಿಸಬಹುದು ಎನ್ನುವ ಕಾರಣಕ್ಕೆ ಹಲವರು ₹5000 ತುಂಬಿ ತರಬೇತಿಯನ್ನು ಪಡೆದುಕೊಂಡರು. ಈಗ 60ರಿಂದ 70 ಮಂದಿ ತರಬೇತಿ ಪಡೆದು ಅವರೂ ಅಣಬೆ ಉತ್ಪಾದನೆ ಮಾಡಿ ಆದಾಯ ಗಳಿಸುತ್ತಿದ್ದಾರೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಕಾಲೇಜಿಗೆ ಪ್ರಮೋದ್ ಹೋಗಿ ಬರುತ್ತಾರೆ. ಆನಂತರ ತರಬೇತಿ ಹಾಗೂ ಉತ್ಪಾದನೆ ಎರಡರಲ್ಲೂ ತೊಡಗುತ್ತಾರೆ. ಅಣಬೆ ಬೇಸಾಯದ ಪ್ರದೇಶವನ್ನು ವಿಸ್ತರಿಸಿ ಇನ್ನಷ್ಟು ಉತ್ಪಾದಿಸುವುದು ಹಾಗೂ ತರಬೇತಿ ನೀಡುವ ಉದ್ದೇಶವನ್ನು ಮುಧೋಳೆ ಅವರು ಹೊಂದಿದ್ದಾರೆ.ಹಾಲು ಅಣಬೆ ಬೆಳೆಯಲು ಕನಿಷ್ಠ 30 ದಿನವಾದರೂ ಬೇಕು. ಬೀಜವನ್ನು ಹಾಕಿ ಆನಂತರ ಅದು ಚೆನ್ನಾಗಿ ಬೆಳೆಯಲು ಕೊಟ್ಟಿಗೆ ಗೊಬ್ಬರವನ್ನು ಬಳಸುತ್ತಾರೆ. ನಿತ್ಯ ಅಣಬೆ ಶುಶ್ರೂಷೆಗೆ ನೀರಿನ ಸಿಂಪಡಣೆ, ಗೊಬ್ಬರ ನಿರ್ವಹಣೆ ಮುಖ್ಯ. ರಾಸಾಯನಿಕ ಮುಕ್ತವಾದ ಈ ಅಣಬೆ ಒಂದು ಸುಮಾರು 70 ರಿಂದ 80 ಗ್ರಾಂವರೆಗೂ ತೂಗುತ್ತದೆ. ದುಬೈಗೂ ಬೇಡಿಕೆಕರ್ನಾಟಕ ಮಾತ್ರವಲ್ಲದೇ ಮುಂಬೈ ಸಹಿತ ಪ್ರಮುಖ ನಗರಗಳಿಗೆ ಅಣಬೆ ಬೇಡಿಕೆ ಹೆಚ್ಚಿದೆ. ಅಷ್ಟೇ ಅಲ್ಲದೇ ದುಬೈನಿಂದಲೂ ನಿರಂತರ ಬೇಡಿಕೆ ಬರುತ್ತಿದೆ. ದುಬೈಗೆ ಪ್ರತಿ ನಿತ್ಯ 5 ಕ್ವಿಂಟಲ್ ಅಣಬೆಯನ್ನು ಕಳುಹಿಸಬೇಕಾಗುತ್ತದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಯೋಜನೆ ಹಾಕಿಕೊಂಡು ತಂಡವಾಗಿ ಕೆಲಸ ಮಾಡಿದರೆ ಈ ಬೇಡಿಕೆಯನ್ನು ಪೂರೈಸುವುದು ಕಷ್ಟ ಅಲ್ಲ. ದುಬೈನಲ್ಲೂ ನಾಲ್ಕೈದು ತಿಂಗಳಿನಿಂದ ಯುದ್ದದ ವಾತಾವರಣವಿದೆ. ಅಲ್ಲಿಗೆ ಆಹಾರ ಉತ್ಪನ್ನಗಳು ಸರಿಯಾಗಿ ಸರಬರಾಜು ಆಗದೇ ಇರುವುದರಿಂದ ಭಾರತದಿಂದ ಬೇಡಿಕೆ ಹೆಚ್ಚಿದೆ. ಅಣಬೆಯನ್ನು ಕಳುಹಿಸುವಂತೆ ಕೋರಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಿಂದ ಅರಿಶಿಣ ಸಹಿತ ಪ್ರಮುಖ ಆಹಾರ ಬೆಳೆಗಳು ಕಾರ್ಗೊ ಮೂಲಕ ದುಬೈಗೆ ರಫ್ತು ಆಗುತ್ತಿವೆ. ಅದರೊಂದಿಗೆ ಅಣಬೆಯನ್ನೂ ಕಳುಹಿಸುವಂತೆ ಮುಧೋಳೆ ಕುಟುಂಬದವರನ್ನು ಕೇಳಿಕೊಳ್ಳಲಾಗಿದೆ. ಇನ್ನೂ ಉತ್ಪಾದನೆ ವಿಸ್ತರಣೆಯಾಗದೇ ಇರುವುದರಿಂದ ಅಲ್ಲಿಗೆ ಕಳುಹಿಸಲು ಅವರಿನ್ನೂ ನಿರ್ಧಾರ ಮಾಡಿಲ್ಲ. ಸ್ಥಳೀಯವಾಗಿ ಇನ್ನಷ್ಟು ಮಂದಿ ತೊಡಗಿಸಲು ಪ್ರೇರಣೆ ನೀಡುವುದು ಅವರ ಉದ್ದೇಶ. ಅಣಬೆ ಅನಾದಿ ಕಾಲದಿಂದಲೂ ನಮ್ಮ ಪ್ರಮುಖ ಆಹಾರ. ಅಣಬೆಯನ್ನು ಆಹಾರದ ಜತೆಗೆ ಆರೋಗ್ಯದ ರೂಪದಲ್ಲೂ ಬಳಸಲಾಗುತ್ತದೆ. ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಮಾತ್ರವಲ್ಲದೇ ಹಲವು ರೋಗಗಳಿಗೆ ಒಳ್ಳೆಯ ಮದ್ದು ಕೂಡ. ಇದರಿಂದ ಹಲವರು ಇದನ್ನು ನಿರಂತರವಾಗಿ ಬಳಕೆ ಮಾಡುತ್ತಾರೆ. ಸಹಸ್ರಾರು ತಳಿಯ ಅಣಬೆಗಳು ನಮ್ಮಲ್ಲಿವೆ. ಆದರೆ, ಕೆಲವೇ ಮಾತ್ರ ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಹಾಲು ಅಣಬೆ ಉತ್ತರ ಕರ್ನಾಟಕದ ಉಷ್ಣಾಂಶ ಹಾಗೂ ಹವಾಮಾನದ ಕಾರಣಕ್ಕೆ ಚೆನ್ನಾಗಿಯೇ ಬೆಳೆಯುತ್ತದೆ. ಒಂದು ವಾರದವರೆಗೂ ಇದು ಬಳಕೆಯಲ್ಲಿರುವವುದರಿಂದ ದೂರದ ಊರುಗಳಿಗೆ ಸರಬರಾಜು ಮಾಡಲು ಸಹಕಾರಿಯಾಗಲಿದೆ ಎಂದು ಇದಕ್ಕೆ ಒತ್ತು ನೀಡಿದ್ದಾರೆ. ಹಾಲು ಅಣಬೆಗಳು ಬೇಸಿಗೆಯ ಅಧಿಕ ತಾಪಮಾನ ತಡೆದುಕೊಳ್ಳಬಲ್ಲ ಪ್ರಭೇದ. ಕರ್ನಾಟಕದ ಬಯಲು ಸೀಮೆ ಪ್ರದೇಶಗಳಲ್ಲಿ ಇವು ಹೆಚ್ಚು ಬೆಳೆಯುತ್ತವೆ. ಪೌಷ್ಠಿಕಾಂಶ ಭರಿತ ಆಹಾರವೂ ಹೌದು. ಅಣಬೆ ಆಹಾರ ಜನಪ್ರಿಯಅಣಬೆ ಉತ್ಪಾದನೆಪ್ರಮೋದ್ ಮುಧೋಳೆ, ಅಣಬೆ ಕೃಷಿಕಎರಡು ವರ್ಷದಿಂದ ಅಣಬೆ ಕೃಷಿ ಮಾಡುತ್ತಿದ್ದೇವೆ. ನಾವಷ್ಟೇ ಅಲ್ಲದೇ ಹಲವರಿಗೆ ಇದರ ತರಬೇತಿ ನೀಡಿ ಅವರೂ ಆದಾಯ ಗಳಿಸುತ್ತಿದ್ದಾರೆ. ಅಣಬೆಗೆ ಬೇಡಿಕೆ ಇರುವುದರಿಂದ ಕೃಷಿಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯೂ ಇದೆ.