ಎದೆಮಟ್ಟಕ್ಕೆ ನಿಂತಿದ್ದ ನೀರು: ಗರ್ಭಿಣಿ ಸಾಗಿಸಲು ಮರದ ಬಾಗಿಲೇ ಸ್ಟ್ರೆಚರ್
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾರಿ ಮಳೆ ಸೃಷ್ಟಿಸಿರುವ ಪ್ರವಾಹ ಭೀಕರವಾಗಿದೆ. ಜಲಾವೃತಗೊಂಡ ಗ್ರಾಮವೊಂದರಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಜನರು ಮನೆಯ ಬಾಗಿಲನ್ನೇ ಸ್ಟ್ರೆಚರ್ನಂತೆ ಬಳಸಿದ್ದಾರೆ. ಸೂಕ್ತ ಸಮಯಕ್ಕೆ ಕರೆ ತಂದಿದ್ದರಿಂದ ಯಾವುದೇ ತೊಂದರೆ ಇಲ್ಲದೆ ಹೆರಿಗೆಯಾಗಿದೆ. ತಾಯಿ ಮತ್ತು ಗಂಡು ಮಗು

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾರಿ ಮಳೆ ಸೃಷ್ಟಿಸಿರುವ ಪ್ರವಾಹ ಭೀಕರವಾಗಿದೆ. ಜಲಾವೃತಗೊಂಡ ಗ್ರಾಮವೊಂದರಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಜನರು ಮನೆಯ ಬಾಗಿಲನ್ನೇ ಸ್ಟ್ರೆಚರ್ನಂತೆ ಬಳಸಿದ್ದಾರೆ. ಸೂಕ್ತ ಸಮಯಕ್ಕೆ ಕರೆ ತಂದಿದ್ದರಿಂದ ಯಾವುದೇ ತೊಂದರೆ ಇಲ್ಲದೆ ಹೆರಿಗೆಯಾಗಿದೆ. ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದಾರೆ ಎಂದು ಸಫಾಲೆ ಗ್ರಾಮೀಣ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶುಭಾಂಗಿ ಸನಪ್ ಬುಧವಾರ ತಿಳಿಸಿದ್ದಾರೆ.ಹನುಮಾನ್ಪಾಡ ನಿವಾಸಿ ಪ್ರಿಯಾಂಕ ರವಿ ಯಾದವ್ ಅವರು ಮಂಗಳವಾರ ಕೂಲಿ ಕೆಲಸಕ್ಕೆ ತೆರಳಿದ್ದರು. ಆಗ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗ್ರಾಮದ ಮನೆಗಳು ಮತ್ತು ಸಂಪರ್ಕ ರಸ್ತೆ ಜಲಾವೃತವಾಗಿದ್ದವು. ಆಂಬುಲೆನ್ಸ್ ಬರಲೂ ಸಾಧ್ಯವಿರಲಿಲ್ಲ.ಗ್ರಾಮದ ಆಶಾ ಕಾರ್ಯಕರ್ತೆ ದಿವ್ಯಾ ಘಾರತ್ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಗಾವಡ್ ಎಂಬವರು ಆಕೆಗೆ ನೆರವಾದರು. ನೀರಿನ ಮಟ್ಟ ಏರುತ್ತಿದ್ದರೂ ಜೀವಲೆಕ್ಕಿಸದೇ ಸ್ಥಳೀಯರ ಸಹಕಾರ ಪಡೆದು ಮರದ ಬಾಗಿಲಿನ ಮೇಲೆ ಮಲಗಿಸಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ.ಎದೆಮಟ್ಟಕ್ಕೆ ನಿಂತಿದ್ದ ನೀರಿನಲ್ಲಿ ಮಹಿಳೆಯನ್ನು ಮರದ ಬಾಗಿಲನ್ನೇ ಸ್ಟ್ರೆಚರ್ ಮಾಡಿಕೊಂಡು ಗ್ರಾಮಸ್ಥರು ಹೆಗಲ ಮೇಲೆ ಹೊತ್ತುಕೊಂಡು ಸಾಗಿಸಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.Palghar - In a heartwarming display of community spirit, residents of Kelve in Palghar rescued a pregnant woman by carrying her on wooden planks after her house was surrounded by floodwaters.The woman went into labour pains as heavy rainfall caused severe water logging in the… pic.twitter.com/ng3XKaxmGH— NextMinute News (@nextminutenews7) July 8, 2026