ಜರ್ಮನಿಯಲ್ಲಿ ಬೆಚ್ಚಿಬೀಳಿಸಿದ ಟೆಲಿಗ್ರಾಂ ರೇಪ್ ನೆಟ್ವರ್ಕ್ – ಮಹಿಳೆಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರ
– ಡ್ರೈವಿಂಗ್ ಸ್ಕೂಲ್ ನೆಪದಲ್ಲಿ ಅತ್ಯಾಚಾರ ಎಸಗಲು ಸಲಹೆ ಬರ್ಲಿನ್: ಜರ್ಮನಿಯಲ್ಲಿ (Germany) ಮಹಿಳೆಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರ (Rape) ಎಸಗುತ್ತಿದ್ದ ಟೆಲಿಗ್ರಾಂ(Telegram) ಗುಂಪೊಂದು ಪೊಲೀಸರ ಬಲೆಗೆ ಬಿದ್ದಿದೆ. “ಜರ್ಮನ್ ಡ್ರೈವಿಂಗ್ ಸ್ಕೂಲ್ ಫಾರ್ ಎಕ್ಷ್ಪರ್ಟ್ಸ್” ಎಂಬ ಹೆಸರಿನ ಈ ಗುಂಪು ವಾಸ್ತವದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಸಲಹೆ

– ಡ್ರೈವಿಂಗ್ ಸ್ಕೂಲ್ ನೆಪದಲ್ಲಿ ಅತ್ಯಾಚಾರ ಎಸಗಲು ಸಲಹೆ ಬರ್ಲಿನ್: ಜರ್ಮನಿಯಲ್ಲಿ (Germany) ಮಹಿಳೆಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರ (Rape) ಎಸಗುತ್ತಿದ್ದ ಟೆಲಿಗ್ರಾಂ(Telegram) ಗುಂಪೊಂದು ಪೊಲೀಸರ ಬಲೆಗೆ ಬಿದ್ದಿದೆ. “ಜರ್ಮನ್ ಡ್ರೈವಿಂಗ್ ಸ್ಕೂಲ್ ಫಾರ್ ಎಕ್ಷ್ಪರ್ಟ್ಸ್” ಎಂಬ ಹೆಸರಿನ ಈ ಗುಂಪು ವಾಸ್ತವದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಸಲಹೆ ಹಂಚಿಕೊಳ್ಳುವ ಅಕ್ರಮ ಜಾಲವಾಗಿತ್ತು ಎಂದು ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ. ತನಿಖೆ ವೇಳೆ ಟೆಲಿಗ್ರಾಂನ ಹಲವು ಗ್ರೂಪ್ ಚಾಟ್ಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ಚಾಟ್ಗಳಲ್ಲಿ ಮಹಿಳೆಯರಿಗೆ ಮಾದಕ ವಸ್ತುಗಳನ್ನು ಹೇಗೆ ನೀಡಬೇಕು, ಅತ್ಯಾಚಾರವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆದಿರುವುದು ಪತ್ತೆಯಾಗಿದೆ. ಕೆಲ ಪೋಸ್ಟ್ಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯರ ಫೋಟೋ ಹಾಗೂ ವಿಡಿಯೋಗಳನ್ನೂ ಹಂಚಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಮಹಿಳೆಯರನ್ನು ʼಕಾರುಗಳುʼ ನಿದ್ರಾಜನಕ ಔಷಧಿಗಳನ್ನು ʼಇಂಧನʼ ಮತ್ತು ಅತ್ಯಾಚಾರವನ್ನು ʼಡ್ರೈವಿಂಗ್ʼ ಎಂಬ ಕೋಡ್ ವರ್ಡ್ಗಳಿಂದ ಉಲ್ಲೇಖಿಸುತ್ತಿದ್ದರು. ತಮ್ಮ ಬಲಿಪಶುಗಳನ್ನು ʼಡೆಡ್ ಪಿಗಸ್ (ಸತ್ತ ಹಂದಿಗಳು)ʼ ಎಂದು ಅವಮಾನಕರವಾಗಿ ಕರೆಯುತ್ತಿದ್ದರು ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ.ಇದನ್ನೂ ಓದಿ: ಕರಾಚಿ ಕರಾವಳಿ ಬಳಿ ಪಾಕಿಸ್ತಾನದ ಕಾರ್ಗೋ ವಿಮಾನ ನಾಪತ್ತೆ ಈ ಜಾಲದಲ್ಲಿ ಮುಖ್ಯವಾಗಿ ಚೀನೀ ಮೂಲದ ಪುರುಷರು ಇದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಜರ್ಮನಿಯಲ್ಲಿ ವಾಸಿಸುತ್ತಿದ್ದ ಚೀನೀ ಮಹಿಳೆಯರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ಈ ಕೃತ್ಯಗಳು ನಡೆದಿರುವ ಸಾಧ್ಯತೆ ಇದೆ. ಹಲವು ವರ್ಷಗಳಿಂದ ನಡೆದಿದ್ದ ಸುಮಾರು ಎರಡು ಡಜನ್ ಟೆಲಿಗ್ರಾಂ ಗ್ರೂಪ್ ಚಾಟ್ಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ಮೂವರು ಪ್ರಮುಖ ಆರೋಪಿಗಳಿಗೆ ಅತ್ಯಾಚಾರ ಸೇರಿದಂತೆ ವಿವಿಧ ಆರೋಪಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಮತ್ತೊಬ್ಬ ಆರೋಪಿಯ ವಿರುದ್ಧ ಬರ್ಲಿನ್ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ಪ್ರಕರಣದ ಬಗ್ಗೆ ಅಧಿಕಾರಿಗಳು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್ಸ್ಟ್ರೈಕ್