KRS ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ 'ಚಾವಟಿ ಚಳವಳಿ'
ಶ್ರೀರಂಗಪಟ್ಟಣ: ಕೆಆರ್ಎಸ್ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಬುಧವಾರ ಪಟ್ಟಣದಲ್ಲಿ ಚಾವಟಿ ಚಳವಳಿ ನಡೆಸಿದರು. ಪಟ್ಟಣದ ಮಿನಿ ವಿಧಾನಸೌಧದ ಎದುರು ಚಾವಟಿ ಹಿಡಿದು ಪ್ರತಿಭಟಿಸಿದರು. 'ನೀರು ಬಿಡದಿದ್ದರೆ ಚಾವಟಿ ಏಟು' ಎಂದು ಘರ್ಜಿಸಿದರು. ರಾಜ್ಯ ಸರ್ಕಾರ, ನೀರಾವರಿ ಸಚಿವ
ಶ್ರೀರಂಗಪಟ್ಟಣ: ಕೆಆರ್ಎಸ್ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಬುಧವಾರ ಪಟ್ಟಣದಲ್ಲಿ ಚಾವಟಿ ಚಳವಳಿ ನಡೆಸಿದರು. ಪಟ್ಟಣದ ಮಿನಿ ವಿಧಾನಸೌಧದ ಎದುರು ಚಾವಟಿ ಹಿಡಿದು ಪ್ರತಿಭಟಿಸಿದರು. 'ನೀರು ಬಿಡದಿದ್ದರೆ ಚಾವಟಿ ಏಟು' ಎಂದು ಘರ್ಜಿಸಿದರು. ರಾಜ್ಯ ಸರ್ಕಾರ, ನೀರಾವರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಕೆಆರ್ಎಸ್ ಅಣೆಕಟ್ಟೆಗೆ ನೀರು ಬರುತ್ತಿದೆ. ಈ ಭಾಗದಲ್ಲಿ ಮಳೆ ಬೀಳದ ಕಾರಣ ಬೆಳೆ ಒಣಗುತ್ತಿದ್ದರೂ ನಾಲೆಗಳಿಗೆ ನೀರು ಬಿಡಲು ಮೀನ ಮೇಷ ಎಣಿಸುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡುವ ಭರವಸೆ ಸಿಗುವವರೆಗೆ ಅಹೋರಾತ್ರಿ ಚಳವಳಿ ನಡೆಯಲಿದೆ' ಎಂದು ರೈತ ನಾಯಕ ಕೆ.ಎಸ್. ನಂಜುಂಡೇಗೌಡ ತಿಳಿಸಿದರು.ಮಿನಿ ವಿಧಾನಸೌಧದ ಮುಂದೆ ಊಟ ಮಾಡಿ ಚಳವಳಿ ಮುಂದುವರೆಸಿದರು. ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
Read the complete story at Prajavani