ಉತ್ತಮ ರಸ್ತೆ ಜಾಗೃತಿಗಾಗಿ ಸಿನಿಮಾ ನಿರ್ಮಿಸಿದ ಮೈಸೂರಿನ ಆಟೊಮೊಬೈಲ್ ಎಂಜಿನಿಯರ್
ಉತ್ತಮ ರಸ್ತೆಯಿಂದ ಸಮಾಜಕ್ಕೆ ಹೇಗೆ ಅನುಕೂಲ? ಉತ್ತಮ ರಸ್ತೆ ರೂಪಿಸುವಲ್ಲಿ ಸಾರ್ವಜನಿಕರ ಪಾತ್ರವೇನು? ಏನಿರಬೇಕು? ಎಂಬ ವಿಷಯ ಇಟ್ಟುಕೊಂಡು ಮೈಸೂರಿನ ಆಟೊಮೊಬೈಲ್ ಎಂಜಿನಿಯರ್ ನಹೇಶ್ ಪೊಳ್ ಅವರು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ‘ಟ್ರೈಯಿಂಗ್ ಟು ಸೇವ್ ದ ವರ್ಲ್ಡ್’ ಎಂಬುದು ಚಿತ್ರದ ಶೀರ್ಷಿಕೆ.ಇದು ನಹೇಶ್ ಅವರ ಮೂರನೇ ಸಿನಿಮಾ. ಕಥೆ, ಚಿತ್ರಕಥೆ ಜೊತೆಗೆ ನಿರ್ದ

ಉತ್ತಮ ರಸ್ತೆಯಿಂದ ಸಮಾಜಕ್ಕೆ ಹೇಗೆ ಅನುಕೂಲ? ಉತ್ತಮ ರಸ್ತೆ ರೂಪಿಸುವಲ್ಲಿ ಸಾರ್ವಜನಿಕರ ಪಾತ್ರವೇನು? ಏನಿರಬೇಕು? ಎಂಬ ವಿಷಯ ಇಟ್ಟುಕೊಂಡು ಮೈಸೂರಿನ ಆಟೊಮೊಬೈಲ್ ಎಂಜಿನಿಯರ್ ನಹೇಶ್ ಪೊಳ್ ಅವರು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ‘ಟ್ರೈಯಿಂಗ್ ಟು ಸೇವ್ ದ ವರ್ಲ್ಡ್’ ಎಂಬುದು ಚಿತ್ರದ ಶೀರ್ಷಿಕೆ.ಇದು ನಹೇಶ್ ಅವರ ಮೂರನೇ ಸಿನಿಮಾ. ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ರ್ಯಾಡಿಕಲ್ ಕಾನ್ಸೆಪ್ಟ್ ಸ್ಟುಡಿಯೊ ಬ್ಯಾನರ್ನಡಿ ಅವರೇ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ.‘ಸತ್ಯಯುಗದಲ್ಲಿ ರಸ್ತೆ’ ಕುರಿತು ಎಂಜಿನಿಯರ್ಗಳಿಗೆ ಏರ್ಪಡುವ ಸ್ಪರ್ಧೆಯ ಸುತ್ತ ಚಿತ್ರ ಅನಾವರಣಗೊಳ್ಳಲಿದೆ. ಇಂದಿನ ಹದಗೆಟ್ಟ ರಸ್ತೆಗಳು, ಪೆಟ್ರೊಲ್, ಡೀಸೆಲ್ ತೆರಿಗೆ, ಟೋಲ್ ಹೀಗೆ ಹಲವು ಅಂಶಗಳ ಜೊತೆಗೆ ಉತ್ತಮ ರಸ್ತೆಯ ಅಗತ್ಯ ಏನು ಎಂಬ ಅಂಶವನ್ನು ಚಿತ್ರವು ಒಳಗೊಂಡಿದೆ. ನಿರ್ದೇಶಕರು ಒಂದು ಪಾತ್ರದಲ್ಲಿ ಇದ್ದಾರೆ.ಉತ್ತಮ ರಸ್ತೆ ಕುರಿತ ಚಿತ್ರದ ಪರಿಕಲ್ಪನೆ ಬಿಂಬಿಸುವ ಮಾದರಿಯನ್ನು ಈಚೆಗೆ ಎಸ್.ಇ.ಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡ ಪ್ರದರ್ಶಿಸಿತು.ಉತ್ತಮ ರಸ್ತೆ ಅಭಿವೃದ್ಧಿಯಲ್ಲಿ ಎಂಜಿನಿಯರ್ಗಳ ಪಾತ್ರ, ಪ್ರತಿಭೆ ಮತ್ತು ಆಸಕ್ತಿಗೆ ಉತ್ತೇಜನ ನೀಡುವ ಅಗತ್ಯ ಕುರಿತ ಆಶಯಗಳನ್ನು ಚಿತ್ರದಲ್ಲಿ ಪ್ರದರ್ಶಿಸಲಾಗುವುದು ಎಂದು ನಹೇಶ್ ಪೊಳ್ ಅವರು ತಿಳಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260708-51-345509528