ಎತ್ತರವಾಗಲೆಂದು ಮಗನನ್ನು ಬಾಗಿಲಿಗೆ ನೇತಾಡಿಸಿದ ಪೋಷಕರು: ನೆಟ್ಟಿಗರ ಆಕ್ರೋಶ
ನವದೆಹಲಿ: ಮಗನ ಎತ್ತರವನ್ನು ಹೆಚ್ಚಿಸುವ ನೆಪದಲ್ಲಿ ಪೋಷಕರೇ ದೈಹಿಕ ಹಿಂಸೆ ನೀಡಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಗ ನೋವಿನಿಂದ ನರಳಾಡುತ್ತಿದ್ದರು ಪೋಷಕರು ಕಿಂಚಿತ್ತೂ ಕರುಣೆ ತೋರದೆ ಕ್ರೌರ್ಯ ಮೆರೆದಿದ್ದು, ತಕ್ಷಣವೇ ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ
ನವದೆಹಲಿ: ಮಗನ ಎತ್ತರವನ್ನು ಹೆಚ್ಚಿಸುವ ನೆಪದಲ್ಲಿ ಪೋಷಕರೇ ದೈಹಿಕ ಹಿಂಸೆ ನೀಡಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಗ ನೋವಿನಿಂದ ನರಳಾಡುತ್ತಿದ್ದರು ಪೋಷಕರು ಕಿಂಚಿತ್ತೂ ಕರುಣೆ ತೋರದೆ ಕ್ರೌರ್ಯ ಮೆರೆದಿದ್ದು, ತಕ್ಷಣವೇ ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಬಾಲಕನ ತಂದೆ ಮತ್ತು ತಾಯಿ ಮಗನ ಕೈಗಳನ್ನು ಬಾಗಿಲಿನ ಮೇಲ್ಭಾಕ್ಕೆ ದಾರದಿಂದ ಕಟ್ಟಿ ಹಾಕಿದ್ದು ವಿಡಿಯೊದಲ್ಲಿ ಸೆರೆಯಾಗಿದೆ. ಈ ಕೃತ್ಯವನ್ನು ಗಮನಿಸಿದ ನೆರೆಹೊರೆಯ ಮಹಿಳೆಯೊಬ್ಬರು ಪೋಷಕರನ್ನು ಪ್ರಶ್ನಿಸಿದ್ದಾರೆ.ಘಟನೆಯನ್ನು ವಿಡಿಯೊ ಮಾಡಿರುವ ನೆರೆಹೊರೆಯ ಮಹಿಳೆ, ಪೋಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮಗುವಿಗೆ ಈ ರೀತಿ ಹಿಂಸೆ ಕೊಡುತ್ತಾರಾ? ಎಂದು ಹೇಳುತ್ತಿದ್ದಂತೆ, ತಾಯಿ ‘ಇಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಿದೆಯೇ? ಇದು ನಮ್ಮ ವೈಯಕ್ತಿಕ ವಿಷಯ, ನಮ್ಮ ಮನೆಯ ವಿಚಾರದಲ್ಲಿ ತಲೆಹಾಕಬೇಡಿ’ ಎಂದು ತಾಯಿ ಜಗಳಕ್ಕೆ ಇಳಿದಿದ್ದಾರೆ.WTF …. pic.twitter.com/Bj2QebTYg0— Indrajit (@Lotus_indrajit) July 6, 2026 ಈ ವೇಳೆ ಮಹಿಳೆ ಮತ್ತೆ ಪ್ರಶ್ನಿಸಿದಾಗ ಆ ತಂದೆ ಕೊಟ್ಟ ಬೇಜವಾಬ್ದಾರಿ ಉತ್ತರ ಕೇಳಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ‘ಮಗನ ಎತ್ತರ ಹೆಚ್ಚಾಗಲಿ ಎಂದು ನಾವು ಈ ರೀತಿ ಕಟ್ಟಿದ್ದೇವೆ’ ಎಂದು ಉತ್ತರಿಸಿದ್ದಾರೆ. ಜೊತೆಗೆ, ತಮ್ಮ ಅನುಮತಿಯಿಲ್ಲದೆ ವಿಡಿಯೊ ಚಿತ್ರೀಕರಿಸಿದ್ದಕ್ಕೆ ಮಹಿಳೆ ಮೇಲೆ ರೇಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ:ಈ ಘಟನೆ ನಡೆದಿರುವ ಸ್ಥಳದ ಬಗ್ಗೆ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲವಾದರೂ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ‘ಇದು ಶಿಸ್ತು ಕಲಿಸುವ ಹೆಸರಿನಲ್ಲಿ ಮಾಡುತ್ತಿರುವ ಅಪ್ಪಟ ಹಿಂಸೆ ಮತ್ತು ಬಾಲಾಪರಾಧ’ ಎಂದು ಕಿಡಿಕಾರಿದ್ದಾರೆ. ಮಕ್ಕಳ ರಕ್ಷಣಾ ಕಾಯ್ದೆಯಡಿ ಈ ಪೋಷಕರನ್ನು ತಕ್ಷಣವೇ ಬಂಧಿಸಬೇಕು ಮತ್ತು ಮಗುವನ್ನು ಸುರಕ್ಷಿತವಾಗಿ ಇವರಿಂದ ರಕ್ಷಿಸಬೇಕು’ ಎಂದು ನೆಟ್ಟಿಗರು ಸೈಬರ್ ಪೊಲೀಸ್ಗೆ ಟ್ಯಾಗ್ ಮಾಡಿ ಒತ್ತಾಯಿಸುತ್ತಿದ್ದಾರೆ.