ಫಿಫಾ ವಿಶ್ವಕಪ್ನಲ್ಲಿ ಯಾರೂ ನಿರ್ಮಿಸದ ವಿಶಿಷ್ಟ ದಾಖಲೆ ಬರೆದ ಮೆಸ್ಸಿ
ಅಟ್ಲಾಂಟಾ: ಅರ್ಜೆಂಟೀನಾ(Argentina) ತಂಡದ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಫುಟ್ಬಾಲ್ ಇತಿಹಾಸದಲ್ಲೇ ಹಿಂದೆಂದೂ ಯಾರೂ ಮಾಡದ ಜಾಗತಿಕ ದಾಖಲೆಯೊಂದನ್ನು (World Record) ಬರೆದಿದ್ದಾರೆ. ಕೊನೆಯ ಕ್ಷಣದವರೆಗೂ ಈಜಿಪ್ಟ್ನಿಂದ ಕಠಿಣ ಸವಾಲು ಎದುರಿಸಿದ ಅರ್ಜೆಂಟೀನಾವನ್ನು ಗೆಲುವಿನ ದಡ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೆಸ್ಸಿ, ವಿಶ್ವಕಪ್ ಇತಿಹಾಸದ ಮಹ

ಅಟ್ಲಾಂಟಾ: ಅರ್ಜೆಂಟೀನಾ(Argentina) ತಂಡದ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಫುಟ್ಬಾಲ್ ಇತಿಹಾಸದಲ್ಲೇ ಹಿಂದೆಂದೂ ಯಾರೂ ಮಾಡದ ಜಾಗತಿಕ ದಾಖಲೆಯೊಂದನ್ನು (World Record) ಬರೆದಿದ್ದಾರೆ. ಕೊನೆಯ ಕ್ಷಣದವರೆಗೂ ಈಜಿಪ್ಟ್ನಿಂದ ಕಠಿಣ ಸವಾಲು ಎದುರಿಸಿದ ಅರ್ಜೆಂಟೀನಾವನ್ನು ಗೆಲುವಿನ ದಡ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೆಸ್ಸಿ, ವಿಶ್ವಕಪ್ ಇತಿಹಾಸದ ಮಹಾನ್ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಪಂದ್ಯದಲ್ಲಿ ಒಂದು ಗೋಲು ಬಾರಿಸುವ ಮೂಲಕ ಲಿಯೋನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ ಇತಿಹಾಸದ ಸತತ 6 ನಾಕೌಟ್ ಪಂದ್ಯಗಳಲ್ಲಿ ಗೋಲು ಹೊಡೆದ ವಿಶ್ವದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ GOAL ARGENTINA! LIONEL MESSI EQUALIZES IN THE 83RD MINUTE! pic.twitter.com/U0jkSMkgsT — FIFA World Cup 2026 (@FIFAWC26Updates) July 7, 2026 ಈಜಿಪ್ಟ್ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಪೆನಾಲ್ಟಿ ಮಿಸ್ ಮಾಡಿದರೂ ದ್ವಿತೀಯಾರ್ಧದ 83ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಇದನ್ನೂ ಓದಿ: ನಮಗೆ ಅನ್ಯಾಯ, ವಿಶ್ವಕಪ್ ಫಿಕ್ಸ್ ಆಗಿದೆ: ಅರ್ಜೆಂಟೀನಾ ವಿರುದ್ಧದ ಸೋಲಿನ ಬಳಿಕ ಫಿಫಾ ವಿರುದ್ಧ ಮೋಸ್ತಫಾ ಜಿಕೊ ಆಕ್ರೋಶ ಪಂದ್ಯದ 67ನೇ ನಿಮಿಷದವರೆಗೂ ಈಜಿಪ್ಟ್ ತಂಡ 2-0 ಇಂದ ಮುನ್ನಡೆ ಸಾಧಿಸಿ ಅರ್ಜೆಂಟೀನಾಗೆ ಶಾಕ್ ನೀಡಿತ್ತು. ಆದರೆ ಕೇವಲ 13 ನಿಮಿಷಗಳ ಅಂತರದಲ್ಲಿ ರೊಮೆರೊ (79′), ಮೆಸ್ಸಿ (83′) ಮತ್ತು ಎಂಜೊ ಫೆರ್ನಾಂಡಿಸ್ (90′) ಬಾರಿಸಿದ ಸರಣಿ ಗೋಲುಗಳಿಂದ ಅರ್ಜೆಂಟೀನಾ ಪಂದ್ಯವನ್ನು 3-2 ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಅರ್ಜೆಂಟೀನಾ ತಂಡ ಕೂದಲೆಳೆಯ ಅಂತರದಲ್ಲಿ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದಾಗ, ಮೆಸ್ಸಿ ತಮ್ಮ ಎಂದಿನ ಮ್ಯಾಜಿಕ್ ಮೂಲಕ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿ ಈ ಇತಿಹಾಸ ಸೃಷ್ಟಿಸಿದ್ದಾರೆ. ಲಿಯೋನೆಲ್ ಮೆಸ್ಸಿ ಪ್ರಸ್ತುತ ವಿಶ್ವಕಪ್ ಗೋಲ್ಡನ್ ಬೂಟ್ ರೇಸ್ನಲ್ಲಿ 8 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಫ್ರಾನ್ಸಿನ ಕೈಲಿಯನ್ ಎಂಬಪ್ಪೆ ಮತ್ತು ನಾರ್ವೆಯ ಎರ್ಲಿಂಗ್ ಹಾಲೆಂಡ್ ಇದ್ದು ಇಬ್ಬರೂ 7 ಗೋಲುಗಳನ್ನು ಹೊಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.