ಮೋದಿ ಭೇಟಿ ನೀಡಿದ ಇಂಡೋನೇಷ್ಯಾದ ಸಾವಿರ ವರ್ಷ ಹಳೆಯ ಪ್ರಂಬನನ್ ದೇಗುಲದ ಇತಿಹಾಸವಿದು
ಇಂಡೋನೇಷ್ಯಾಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಯೋಗ್ಯಕರ್ತಾ ಪ್ರದೇಶಕ್ಕೆ ತೆರಳಿದ್ದಾರೆ. ಇಲ್ಲಿರುವ ಪ್ರಂಬನನ್ ದೇವಾಲಯಕ್ಕೂ ಭೇಟಿ ನೀಡಿರುವ ಅವರು, ಫೋಟೊ, ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇಂಡೋನೇಷ್ಯಾ ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಂ ಸಮುದಾಯದ ಜನರಿರುವ ದೇಶ. ಇಲ್ಲಿರುವ ಪ್ರಂಬನನ್ ದೇಗುಲ ಆಗ್ನೇಯ ಏ

ಇಂಡೋನೇಷ್ಯಾಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಯೋಗ್ಯಕರ್ತಾ ಪ್ರದೇಶಕ್ಕೆ ತೆರಳಿದ್ದಾರೆ. ಇಲ್ಲಿರುವ ಪ್ರಂಬನನ್ ದೇವಾಲಯಕ್ಕೂ ಭೇಟಿ ನೀಡಿರುವ ಅವರು, ಫೋಟೊ, ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇಂಡೋನೇಷ್ಯಾ ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಂ ಸಮುದಾಯದ ಜನರಿರುವ ದೇಶ. ಇಲ್ಲಿರುವ ಪ್ರಂಬನನ್ ದೇಗುಲ ಆಗ್ನೇಯ ಏಷ್ಯಾದ ಹಿಂದೂ ಶಿಲ್ಪಕಲೆಗೆ ಉದಾಹರಣೆಯಾಗಿ ನಿಂತಿದೆ. ಯೋಗ್ಯಕರ್ತಾದ ಹೊರವಲಯದಲ್ಲಿ, ಕೇಂದ್ರ ಜಾವಾದ ಬಯಲು ಪ್ರದೇಶದಲ್ಲಿ ನೆಲೆಗೊಂಡಿರುವ ಪ್ರಂಬನನ್, ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಇದು ಕಾಂಬೋಡಿಯಾದ ಅಂಕೋರ್ ವಾಟ್ ನಂತರ ಆಗ್ನೇಯ ಏಷ್ಯಾದಲ್ಲಿ ಎರಡನೇ ದೊಡ್ಡ ದೇವಾಲಯವಾಗಿದೆ.9 ಮತ್ತು 10ನೇ ಶತಮಾನದಲ್ಲಿ ಪ್ರಾಚೀನ ಮತರಂ ಸಾಮ್ರಾಜ್ಯದ ಸಂಜಯ ರಾಜವಂಶ ಈ ದೇಗುಲದ ಸಂಕೀರ್ಣವನ್ನು ನಿರ್ಮಿಸಿದೆ. ತ್ರಿಮೂರ್ತಿಗಳಾದ ಶಿವ, ವಿಷ್ಣು ಮತ್ತು ಬ್ರಹ್ಮರ ದೇವಾಲಯಗಳಿಲ್ಲಿವೆ. ಅಲ್ಲದೆ ಈ ದೇಗುಲದ ಸನಿಹವೇ ಇಂಡೋನೇಷ್ಯಾದ ಬೌದ್ಧ ಪರಂಪರೆಯನ್ನು ಪ್ರತಿನಿಧಿಸುವ ಬೊರೊಬುದೂರ್ ದೇವಾಲಯವಿದೆ. ಎರಡು ಸ್ಮಾರಕಗಳು ಸಾವಿರ ವರ್ಷಗಳ ಹಿಂದೆ ಜಾವಾದಲ್ಲಿ ಪ್ರವರ್ಧಮಾನಕ್ಕೆ ಬಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ.ಬೊರೊಬುದೂರ್ ದೇಗುಲಈ ದೇಗುಲದ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸವನ್ನು ಗುರುತಿಸಿ 1991ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದೆ. ವಾಸ್ತುಶಿಲ್ಪಕ್ಕೇ ಹೆಸರುಈ ದೇಗುಲಕ್ಕೆ ಬರುವವರನ್ನು ಆಕರ್ಷಿಸುವುದೇ ವಾಸ್ತುಶಿಲ್ಪ. ವಿಸ್ತಾರವಾದ ವಿನ್ಯಾಸಗಳನ್ನು ಹೊಂದಿರುವ ಅನೇಕ ದೇವಾಲಯಗಳಿಗಿಂತ ಭಿನ್ನವಾಗಿ, ಪ್ರಂಬನನ್ನ ಗೋಪುರಗಳು ಆಕಾಶವನ್ನೇ ತಲುಪುವಷ್ಟು ಎತ್ತರವಿದೆ.ದೇಗುಲದ ಹೃದಯಭಾಗದಲ್ಲಿ ಶಿವ, ವಿಷ್ಣು ಮತ್ತು ಬ್ರಹ್ಮನಿಗೆ ಮೀಸಲಾಗಿರುವ ಮೂರು ಎತ್ತರದ ದೇವಾಲಯಗಳಿವೆ. ಸುಮಾರು 47 ಮೀಟರ್ ಎತ್ತರವಿರುವ ಶಿವ ದೇವಾಲಯವು ಈ ಸ್ಥಳದ ಮಹತ್ವವನ್ನು ಇಮ್ಮಡಿಗೊಳಿಸುತ್ತದೆ. ಶಿವ, ದುರ್ಗಾ, ಗಣೇಶ ಮತ್ತು ಅಗಸ್ತ್ಯ ಋಷಿಗಳ ಪ್ರತಿಮೆಗಳನ್ನು ಹೊಂದಿರುವ ಹಲವಾರು ಗರ್ಭಗುಡಿಗಳೂ ಇಲ್ಲಿವೆ. ವಿಷಾದಕರ ಎಂದರೆ ಹಲವು ದೇಗುಲಗಳು ಈಗ ಹಾನಿಗೆ ಒಳಗಾಗಿವೆ.ಎಲ್ಲವೂ ಸೇರಿದರೆ ಈ ಪ್ರಂಬನನ್ ಸಂಕೀರ್ಣದಲ್ಲಿ 240 ದೇಗುಲಗಳಿವೆ. 40 ಹೆಕ್ಟೇರ್ ಪ್ರದೇಶದಲ್ಲಿರುವ ಈ ದೇಗುಲ ಪ್ರಾಚೀನ ಜಾವಾದಲ್ಲಿ ನಿರ್ಮಿಸಲಾದ ಅತ್ಯಂತ ಭವ್ಯವಾದ ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ.ಕಥೆ ಹೇಳುವ ಕಲ್ಲುಗಳುಪ್ರಂಬನನ್ನಲ್ಲಿ ವಾಸ್ತಿಶಿಲ್ಪ ಮಾತ್ರವಲ್ಲ, ಅಲ್ಲಿ ಜೋಡಿಸಿರುವ ಪ್ರತಿ ಕಲ್ಲುಗಳೂ ಒಂದೊಂದು ಕತೆ ಹೇಳುತ್ತವೆ. ದೇವಾಲಯಗಳನ್ನು ಸುತ್ತುವರಿದಿರುವ ಗ್ಯಾಲರಿಗಳು, ಸುಂದರವಾಗಿ ಸಂರಕ್ಷಿಸಲ್ಪಟ್ಟ ಶಿಲ್ಪಕಲೆಗಳಲ್ಲಿ ರಾಮಾಯಣದ ಕುರಿತಾದ ಕಥೆಗಳನ್ನು ಚಿತ್ರಿಸಲಾಗಿದೆ. ಇಂದಿಗೂ, ದೇವಾಲಯ ಸಂಕೀರ್ಣದಲ್ಲಿ ರಾಮಾಯಣದ ಬ್ಯಾಲೆ ಪ್ರದರ್ಶನಗಳು, ನೃತ್ಯ, ರಂಗಭೂಮಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ.ಇಂಡೋನೇಷ್ಯಾದಲ್ಲಿ ಇರುವವರು ಬಹುತೇಕ ಮುಸ್ಲಿಂ ಸಮುದಾಯದವರು. ಆದರೂ ಹಿಂದೂ ಸಂಸ್ಕೃತಿ ದೇಶದ ಹೆಗ್ಗುರುತಾಗಿ ಉಳಿದಿದೆ. View this post on Instagram A post shared by Narendra Modi (@narendramodi) View this post on Instagram A post shared by Narendra Modi (@narendramodi)