ಮರಣದಂಡನೆ ಎತ್ತಿಹಿಡಿದ ಹೈಕೋರ್ಟ್
ಅಹಮದಾಬಾದ್(ಪಿಟಿಐ): ನಗರದಲ್ಲಿ 2008ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್(ಐಎಂ) ಸಂಘಟನೆಯ 38 ಉಗ್ರರಿಗೆ ಮರಣ ದಂಡನೆ ಹಾಗೂ ಇತರ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಅಹಮದಾಬಾದ್ ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.ಸರಣಿ ಸ್ಫೋಟಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ

ಅಹಮದಾಬಾದ್(ಪಿಟಿಐ): ನಗರದಲ್ಲಿ 2008ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್(ಐಎಂ) ಸಂಘಟನೆಯ 38 ಉಗ್ರರಿಗೆ ಮರಣ ದಂಡನೆ ಹಾಗೂ ಇತರ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಅಹಮದಾಬಾದ್ ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.ಸರಣಿ ಸ್ಫೋಟಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹5 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.ವಿಶೇಷ ನ್ಯಾಯಾಲಯವು 2022ರ ಫೆಬ್ರುವರಿಯಲ್ಲಿ ಈ ಆದೇಶ ಹೊರಡಿಸಿತ್ತು. ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯವೊಂದು ಇಷ್ಟೊಂದು ಜನ ಅಪರಾಧಿಗಳಿಗೆ ಏಕಕಾಲಕ್ಕೆ ಮರಣ ದಂಡನೆ ವಿಧಿಸಿ ಆದೇಶಿಸಿರುವುದು ಇದೇ ಮೊದಲು.ಕೆಳ ನ್ಯಾಯಾಲಯವು ತಮಗೆ ನೀಡಿದ ಶಿಕ್ಷೆ ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಎಲ್ಲ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಎ.ವೈ.ಕೋಗ್ಜೆ ಹಾಗೂ ಸಮೀರ್ ದವೆ ಅವರು ಇದ್ದ ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿ, ಅವರಿಗೆ ನೀಡಲಾದ ಶಿಕ್ಷೆಯನ್ನು ದೃಢಪಡಿಸಿ ಆದೇಶಿಸಿತು.ಸಿಮಿ ಸಂಘಟನೆಯ ಮಾಜಿ ನಾಯಕ ಸಫ್ದರ್ ನಗೋರಿ ಹಾಗೂ ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಉತ್ತರ ಪ್ರದೇಶ ಸೇರಿ 11 ರಾಜ್ಯಗಳ ಆತನ ಸಹಚರರಿಗೆ ಶಿಕ್ಷೆ ವಿಧಿಸಲಾಗಿದೆ.‘ವಿಚಾರಣೆ ವೇಳೆ, ರಾಜ್ಯ ಸರ್ಕಾರವು ಅಪರಾಧಿಗಳ ವಿರುದ್ಧದ ಎಲ್ಲ ಸಾಕ್ಷ್ಯಾಧಾರಗಳನ್ನು ಹೈಕೋರ್ಟ್ ಮುಂದಿಟ್ಟಿತ್ತು’ ಎಂದು ವಿಶೇಷ ಸರ್ಕಾರಿ ವಕೀಲ ಅಮಿತ್ ಪಟೇಲ್ ಹೇಳಿದರು.‘ಒಂದೂವರೆ ವರ್ಷಗಳಷ್ಟು ಸುದೀರ್ಘ ಪ್ರಕರಣದ ವಿಚಾರಣೆ ನಡೆದಿತ್ತು. ಹೈಕೋರ್ಟ್, ಪ್ರತಿ ದಿನವೂ ವಿಚಾರಣೆ ನಡೆಸಿತ್ತು’ ಎಂದರು.21 ಬಾಂಬ್ ಸ್ಫೋಟ...56 ಮಂದಿ ಸಾವುಅಹಮದಾಬಾದ್ ನಗರದಲ್ಲಿ 2008ರ ಜುಲೈ 26ರಂದು ಈ ವಿಧ್ವಂಸಕ ಕೃತ್ಯ ಸಂಭವಿಸಿತ್ತು. ನಗರದ ವಿವಿಧ ಭಾಗಗಳಲ್ಲಿ 70 ನಿಮಿಷಗಳಲ್ಲಿ 21 ಬಾಂಬ್ಗಳನ್ನು ಸ್ಫೋಟಿಸಲಾಗಿತ್ತು.ಈ ಸ್ಫೋಟಗಳಿಂದಾಗಿ 56 ಜನರು ಮೃತಪಟ್ಟು, ಇತರ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಗಾಯಗೊಂಡವರನ್ನು ದಾಖಲಿಸಿದ್ದ ನಗರದಆಸ್ಪತ್ರೆಗಳನ್ನು ಗುರಿಯಾಗಿಸಿಯೂ ಬಾಂಬ್ಗಳನ್ನು ಸ್ಫೋಟಿಸಲಾಗಿತ್ತು. ವೈದ್ಯಕೀಯ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸಿದ ಮೊದಲ ದಾಳಿ ಅದಾಗಿತ್ತು. ಘಟನೆಗೆ ಸಂಬಂಧಿಸಿ 78 ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 49 ಜನರಿಗೆ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ 2022ರಫೆಬ್ರುವರಿಯಲ್ಲಿ ಆದೇಶಿಸಿತ್ತು.ಈ ಸರಣಿ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಮುಂದಿನ ಮಾರ್ಚ್ 30ರ ಒಳಗಾಗಿ ಪರಿಹಾರ ವಿತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ ಅಮಿತ್ ಪಟೇಲ್, ವಿಶೇಷ ಸರ್ಕಾರಿ ವಕೀಲ