ಫಿಫಾ ವಿಶ್ವಕಪ್: ಕ್ವಾರ್ಟರ್ ಫೈನಲ್ ಪಂದ್ಯಗಳ ಸಂಪೂರ್ಣ ಚಿತ್ರಣ ಇಲ್ಲಿದೆ
ವ್ಯಾಂಕೋವರ್: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮತ್ತಷ್ಟು ರೋಚಕ ಹಂತವನ್ನು ತಲುಪಿದೆ. ಪ್ರಿ-ಕ್ವಾರ್ಟರ್ಫೈನಲ್ನ ಅಂತಿಮ ಪಂದ್ಯಗಳಲ್ಲಿ ಅರ್ಜೆಂಟೀನಾ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳು ಭರ್ಜರಿ ಜಯ ದಾಖಲಿಸುವುದರೊಂದಿಗೆ ಅಂತಿಮ ಎಂಟರ ಘಟ್ಟದ (ಕ್ವಾರ್ಟರ್ಫೈನಲ್) ಸಂಪೂರ್ಣ ಚಿತ್ರಣ ಸಿಕ್ಕಿದೆ. ಲಯೊನೆಲ್ ಮೆಸ್ಸಿ ಅವರ 'ಮ್ಯಾಜಿಕ್' ನೆರವಿನಿಂದ ಈಜಿಪ್ಟ್ ವಿರುದ್ಧ

ವ್ಯಾಂಕೋವರ್: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮತ್ತಷ್ಟು ರೋಚಕ ಹಂತವನ್ನು ತಲುಪಿದೆ. ಪ್ರಿ-ಕ್ವಾರ್ಟರ್ಫೈನಲ್ನ ಅಂತಿಮ ಪಂದ್ಯಗಳಲ್ಲಿ ಅರ್ಜೆಂಟೀನಾ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳು ಭರ್ಜರಿ ಜಯ ದಾಖಲಿಸುವುದರೊಂದಿಗೆ ಅಂತಿಮ ಎಂಟರ ಘಟ್ಟದ (ಕ್ವಾರ್ಟರ್ಫೈನಲ್) ಸಂಪೂರ್ಣ ಚಿತ್ರಣ ಸಿಕ್ಕಿದೆ. ಲಯೊನೆಲ್ ಮೆಸ್ಸಿ ಅವರ 'ಮ್ಯಾಜಿಕ್' ನೆರವಿನಿಂದ ಈಜಿಪ್ಟ್ ವಿರುದ್ಧ ಅರ್ಜೆಂಟೀನಾ ರೋಚಕ ಜಯ ಸಾಧಿಸಿದರೆ, ಅತ್ತ ಕೊಲಂಬಿಯಾ ವಿರುದ್ಧದ ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೋಲುಗಳ ಅಂತರದಿಂದ ಸ್ವಿಟ್ಜರ್ಲೆಂಡ್ ಜಯ ಸಾಧಿಸಿತು. ಹಾಲಿ ಚಾಂಪಿಯನ್ ಅರ್ಜೆಂಟೀನಾ, ರನ್ನರ್ ಅಪ್ ಫ್ರಾನ್ಸ್ ಜೊತೆಗೆ ಮೊರಾಕ್ಕೊ, ಸ್ಪೇನ್, ಬೆಲ್ಜಿಯಂ, ನಾರ್ವೆ, ಇಂಗ್ಲೆಂಡ್ ಹಾಗೂ ಸ್ವಿಟ್ಜರ್ಲೆಂಡ್ ತಂಡಗಳು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿವೆ. 2022ರಲ್ಲಿ ಮೊರಾಕ್ಕೊ ಸೆಮಿಫೈನಲ್ ಸಾಧನೆ ಮಾಡಿದ್ದರೆ, 2018ರಲ್ಲಿ ಬೆಲ್ಜಿಯಂ ಕಂಚಿನ ಪದಕ ಗೆದ್ದಿತ್ತು. ಇನ್ನು ಎರ್ಲಿಂಗ್ ಹಾಲಂಡ್ ಅವರ ನಾರ್ವೆ 1998ರ ಬಳಿಕ ಮತ್ತು ಸ್ವಿಟ್ಜರ್ಲೆಂಡ್ ಬರೋಬ್ಬರಿ 72 ವರ್ಷಗಳ ಬಳಿಕ ಅಂತಿಮ ಎಂಟರ ಘಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳ ವಿವರ:ಫ್ರಾನ್ಸ್ vs ಮೊರಾಕ್ಕೊ (ಜುಲೈ 9, ಗುರುವಾರ ತಡರಾತ್ರಿ 1.30ಕ್ಕೆ, ಬೋಸ್ಟನ್ ಸ್ಟೇಡಿಯಂ)ಸ್ಪೇನ್ vs ಬೆಲ್ಜಿಯಂ (ಜುಲೈ 10, ಶುಕ್ರವಾರ ಮಧ್ಯರಾತ್ರಿ 12.30ಕ್ಕೆ, ಲಾಸ್ ಏಂಜಲೀಸ್)ನಾರ್ವೆ vs ಇಂಗ್ಲೆಂಡ್ (ಜುಲೈ 11, ಶನಿವಾರ ತಡರಾತ್ರಿ 2.30ಕ್ಕೆ, ಮಯಾಮಿ ಸ್ಟೇಡಿಯಂ)ಅರ್ಜೇಂಟೀನಾ vs ಸ್ವಿಟ್ಜರ್ಲೆಂಡ್ (ಜುಲೈ 12, ಭಾನುವಾರ ಮುಂಜಾನೆ 6.30ಕ್ಕೆ, ಕಾನ್ಹಾಸ್ ಸಿಟಿ)ಸೂಚನೆ: ಭಾರತೀಯ ಕಾಲಮಾನದಂತೆ ಸಮಯ ನೀಡಲಾಗಿದೆ. Next: Quarter-finals#FIFAWorldCup pic.twitter.com/To50MPa0Ye— FIFA World Cup (@FIFAWorldCup) July 8, 2026 ಫ್ರಾನ್ಸ್ vs ಮೊರಕ್ಕೊಕೈಲಿಯನ್ ಎಂಬಾಪೆ ನೇತೃತ್ವದ ಬಲಿಷ್ಠ ಫ್ರಾನ್ಸ್ ತಂಡವು 'ಬ್ಲ್ಯಾಕ್ ಹಾರ್ಸ್' ಎನಿಸಿಕೊಂಡಿರುವ ಮೊರಾಕ್ಕೊ ತಂಡವನ್ನು ಎದುರಿಸಲಿದೆ. ಆಫ್ರಿಕಾ ಖಂಡದ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿ (2022ರಲ್ಲಿ) ಇತಿಹಾಸ ಬರೆದಿದ್ದ ಅಶ್ರಫ್ ಹಕೀಮಿ ಸಾರಥ್ಯದ ಮೊರಾಕ್ಕೊ ಈ ಬಾರಿ ಮತ್ತೆ ಚಮತ್ಕಾರ ಮಾಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ವಿಶ್ವಕಪ್ನಲ್ಲಿ ಈಗಾಗಲೇ 19 ಗೋಲು ಗಳಿಸಿರುವ ಎಂಬಾಪೆ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಸಾರ್ವಕಾಲಿಕ ದಾಖಲೆಯಾದ 21 ಗೋಲುಗಳ ದಾಖಲೆಯನ್ನು ಮುರಿಯುವ ಗುರಿ ಹೊಂದಿದ್ದಾರೆ.ಸ್ಪೇನ್ vs ಬೆಲ್ಜಿಯಂ2010ರ ಚಾಂಪಿಯನ್ ಸ್ಪೇನ್, 2014, 2018, 2022ರಲ್ಲಿ ನಿರಾಸೆ ಅನುಭವಿಸಿತ್ತು. ಆದರೆ ಈ ಬಾರಿ ಲಮಿನ್ ಯಮಾಲ್ ಅವರಂತಹ ಯುವ ಆಟಗಾರರ ಬಲದೊಂದಿಗೆ ಕಣಕ್ಕಿಳಿದಿರುವ ಸ್ಪೇನ್ ಪ್ರಶಸ್ತಿ ಬೇಟೆಯಾಡಲು ಮುಂದಾಗಿದೆ. ಇತ್ತ ಬೆಲ್ಜಿಯಂ ತಂಡದ ಅನುಭವಿ ಆಟಗಾರರಾದ ರೊಮೆಲು ಲುಕಾಕು ಮತ್ತು ಕೆವಿನ್ ಡಿ ಬ್ರುಯ್ನೆ ಚೊಚ್ಚಲ ಟ್ರೋಫಿ ಗೆಲ್ಲುವ ತವಕದಲ್ಲಿದ್ದಾರೆ. ಸ್ಪೇನ್ ಗೋಲ್ಕೀಪರ್ ಉನೈ ಸಿಮೋನ್ ಈ ಟೂರ್ನಿಯ 5 ಪಂದ್ಯಗಳಲ್ಲಿ ಒಂದೇ ಒಂದು ಗೋಲು ಬಿಟ್ಟುಕೊಡದೇ ಅದ್ಭುತ ಲಯದಲ್ಲಿದ್ದಾರೆ. ನಾರ್ವೆ vs ಇಂಗ್ಲೆಂಡ್ಈ ಪಂದ್ಯದಲ್ಲಿ ಸ್ಟಾರ್ ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಟೂರ್ನಿಯಲ್ಲಿ ಸದ್ಯ 7 ಗೋಲು ಗಳಿಸಿ 'ಗೋಲ್ಡನ್ ಬೂಟ್' ರೇಸ್ನಲ್ಲಿರುವ ನಾರ್ವೆಯ ಎರ್ಲಿಂಗ್ ಹಾಲಂಡ್ ಮತ್ತು 6 ಗೋಲು ಹೊಡೆದಿರುವ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಆಂಗ್ಲರ ಪಡೆಗೆ ಯುವ ತಾರೆ ಜೂಡ್ ಬೆಲ್ಲಿಂಗ್ಹ್ಯಾಮ್ (4 ಗೋಲು) ಬಲ ತುಂಬಲಿದ್ದಾರೆ. ಅರ್ಜೇಂಟೀನಾ vs ಸ್ವಿಟ್ಜರ್ಲೆಂಡ್ಈಗಾಗಲೇ ಜರ್ಮನಿ ಹಾಗೂ ನೆದರ್ಲೆಂಡ್ಸ್ ತಂಡಗಳು ಪರಗ್ವೆ ಮತ್ತು ಮೊರಾಕ್ಕೊ ಕೈಯಲ್ಲಿ ಸೋತಿರುವುದು ಈ ವಿಶ್ವಕಪ್ನ ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಪ್ರಿ-ಕ್ವಾರ್ಟರ್ನಲ್ಲಿ 0-2 ಗೋಲುಗಳ ಹಿನ್ನೆಡೆಯಲ್ಲಿದ್ದರೂ ಕೊನೆಯಲ್ಲಿ 13 ನಿಮಿಷಗಳ ಅಂತರದಲ್ಲಿ ಮೂರು ಗೋಲು ಗಳಿಸುವ ಮೂಲಕ ಈಜಿಪ್ಟ್ ಸವಾಲನ್ನು ಮೆಟ್ಟಿ ನಿಂತಿರುವ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತಷ್ಟು ಬಲಿಷ್ಠ ಎನಿಸಿಕೊಂಡಿದೆ. ನಾಯಕ ಲಯೊನೆಲ್ ಮೆಸ್ಸಿ ಅದ್ಭುತ ಲಯದಲ್ಲಿದ್ದಾರೆ. ಗೋಲು ಬೇಟೆಯಲ್ಲೂ (8 ಗೋಲು) ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಲು ಬಲಾಢ್ಯ ಅರ್ಜೆಂಟೀನಾ ಸವಾಲನ್ನು ಸ್ವಿಟ್ಜರ್ಲೆಂಡ್ ಮೆಟ್ಟಿ ನಿಲ್ಲಬೇಕಿದೆ. (ಕೃಪೆ: ಫಿಫಾ) 16ರ ಹಂತದ ಪಂದ್ಯಗಳ ಫಲಿತಾಂಶ:Round of 16 results #FIFAWorldCup— FIFA World Cup (@FIFAWorldCup) July 7, 2026 48 nations dared to dream, but only 8 remain. The Quarter-finals are locked in. #FIFAWorldCup #Qualified @mcdonalds pic.twitter.com/7C3WGlps0Q— FIFA World Cup (@FIFAWorldCup) July 7, 2026 ಈಜಿಪ್ಟ್ ಸವಾಲು ಮೆಟ್ಟಿನಿಂತ ಮೆಸ್ಸಿ ಪಡೆ: ಎಂಟರ ಘಟ್ಟಕ್ಕೆ ಅರ್ಜೆಂಟೀನಾ 1954ರ ಬಳಿಕ ಕ್ವಾರ್ಟರ್ಗೆ ಲಗ್ಗೆ ಇಟ್ಟ ಸ್ವಿಟ್ಜರ್ಲೆಂಡ್, ಕೊಲಂಬಿಯಾ ಹೊರಕ್ಕೆ