ವಿದ್ಯಾಸಾರಥಿ ಪೋರ್ಟಲ್: ವಿದ್ಯಾರ್ಥಿಗಳ ಶೈಕ್ಷಣಿಕ ಕನಸುಗಳಿಗೆ ಆಸರೆ
ಭಾರತದಲ್ಲಿ ಶಿಕ್ಷಣವು ಸಾಮಾಜಿಕ ಬದಲಾವಣೆಯ ಪ್ರಬಲ ಸಾಧನವಾಗಿದೆ. ಆದಾಗ್ಯೂ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಉನ್ನತ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪರಿಸ್ಥಿತಿ ಇದೆ. ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ, ಅವರ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು 'ವಿದ್ಯಾರ್ಥಿ ಸಾರಥಿ' (Vidyasaarathi) ಎಂಬ ಡಿಜಿಟಲ್ ವೇದಿಕೆ

ಭಾರತದಲ್ಲಿ ಶಿಕ್ಷಣವು ಸಾಮಾಜಿಕ ಬದಲಾವಣೆಯ ಪ್ರಬಲ ಸಾಧನವಾಗಿದೆ. ಆದಾಗ್ಯೂ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಉನ್ನತ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪರಿಸ್ಥಿತಿ ಇದೆ. ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ, ಅವರ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು 'ವಿದ್ಯಾರ್ಥಿ ಸಾರಥಿ' (Vidyasaarathi) ಎಂಬ ಡಿಜಿಟಲ್ ವೇದಿಕೆಯು ಒಂದು ವರದಾನವಾಗಿ ಪರಿಣಮಿಸಿದೆ.ವಿದ್ಯಾರ್ಥಿ ಸಾರಥಿ ಎಂದರೇನು?ವಿದ್ಯಾರ್ಥಿ ಸಾರಥಿ ಎನ್ನುವುದು ಪ್ರೋಟೀನ್ ಟೆಕ್ನಾಲಜೀಸ್ (Protean eGov Technologies Limited) ಅವರ ಉಪಕ್ರಮವಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ವೇತನ ನೀಡುವ ಕಾರ್ಪೊರೇಟ್ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುತ್ತದೆ. ಇದು ಸಂಪೂರ್ಣವಾಗಿ ಆನ್ಲೈನ್ ಮತ್ತು ಪಾರದರ್ಶಕವಾದ ವ್ಯವಸ್ಥೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅರ್ಹತೆಗೆ ತಕ್ಕಂತೆ ಸ್ಕಾಲರ್ಶಿಪ್ ಹುಡುಕಲು ಮತ್ತು ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತದೆ.ವಿದ್ಯಾರ್ಥಿ ಸಾರಥಿ ಪೋರ್ಟಲ್ನ ಪ್ರಮುಖ ಹಂತಗಳುವಿದ್ಯಾರ್ಥಿಗಳು ಈ ಪೋರ್ಟಲ್ ಮೂಲಕ ಸುಲಭವಾಗಿ ಸ್ಕಾಲರ್ಶಿಪ್ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಬೇಕು:ನೋಂದಣಿ (Sign Up): ಮೊದಲಿಗೆ www.vidyasaarathi.co.in ವೆಬ್ಸೈಟ್ಗೆ ಭೇಟಿ ನೀಡಿ, 'Sign Up' ಬಟನ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಮೂಲ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಿ. ನಿಮ್ಮ ಇಮೇಲ್ ಐಡಿಗೆ ಬರುವ ಆಕ್ಟಿವೇಶನ್ ಲಿಂಕ್ ಮೂಲಕ ಖಾತೆಯನ್ನು ಸಕ್ರಿಯಗೊಳಿಸಿ.ಪ್ರೊಫೈಲ್ ಪೂರ್ಣಗೊಳಿಸುವುದು: ಲಾಗಿನ್ ಆದ ನಂತರ, ನಿಮ್ಮ ಶೈಕ್ಷಣಿಕ ಮಾಹಿತಿ ಮತ್ತು ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ನಿಖರವಾದ ಮಾಹಿತಿ ನೀಡಿದರೆ ಮಾತ್ರ ಸರಿಯಾದ ಸ್ಕಾಲರ್ಶಿಪ್ಗಳನ್ನು ಪೋರ್ಟಲ್ ತೋರಿಸುತ್ತದೆ.ಹುಡುಕಾಟ ಮತ್ತು ಅರ್ಜಿ: 'Search ಅಂಡ್ Apply Schemes' ಟ್ಯಾಬ್ ಬಳಸಿ ನಿಮ್ಮ ಕೋರ್ಸ್ಗೆ ಲಭ್ಯವಿರುವ ವಿದ್ಯಾರ್ಥಿ ವೇತನಗಳನ್ನು ಪಟ್ಟಿ ಮಾಡಿ. ಅರ್ಹತೆಗಳನ್ನು ಓದಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.ಅಗತ್ಯ ದಾಖಲೆಗಳು ಮತ್ತು ಎಚ್ಚರಿಕೆಅರ್ಜಿ ಸಲ್ಲಿಸುವಾಗ ಶೈಕ್ಷಣಿಕ ಅಂಕಪಟ್ಟಿಗಳು, ಆದಾಯ ಪ್ರಮಾಣಪತ್ರ, ಪ್ರವೇಶಾತಿ ಪತ್ರ ಮತ್ತು ಬ್ಯಾಂಕ್ ಪಾಸ್ಬುಕ್ನಂತಹ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ. ಗಮನಿಸಿ, ಈ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ವಂಚನೆಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಅಧಿಕೃತ ವೆಬ್ಸೈಟ್ ಅನ್ನು ಮಾತ್ರ ಬಳಸಿ.ಶಿಕ್ಷಣ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು. ವಿದ್ಯಾರ್ಥಿ ಸಾರಥಿಯಂತಹ ಪೋರ್ಟಲ್ಗಳು ಆರ್ಥಿಕವಾಗಿ ಹಿಂದುಳಿದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿವೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ.ಲೇಖಕ: ಪ್ರೊ. ಆರ್. ರವೀಂದ್ರ, ವಿಭಾಗದ ಮುಖ್ಯಸ್ಥರು, ಔಷಧೀಯ ರಸಾಯನಶಾಸ್ತ್ರ ವಿಭಾಗ, ಎಂಐಟಿ ಫಾರ್ಮಸಿ ಕಾಲೇಜು, ಎಂಐಟಿ ಕ್ಯಾಂಪಸ್, ಮೈಸೂರು.