ಟ್ರಂಪ್ ಒಂದು ಹೇಳಿಕೆ, ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಕರಗಿತು ಹೂಡಿಕೆದಾರರ 8 ಲಕ್ಷ ಕೋಟಿ ಸಂಪತ್ತು
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ (Iran) ಜೊತೆಗಿನ ಕದನ ವಿರಾಮವನ್ನು ಅಂತ್ಯಗೊಳಿಸಿದ ಘೋಷಣೆಯ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು, ಹೂಡಿಕೆದಾರರ (Investors) ಸಂಪತ್ತು ಇಂದು ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಕರಗಿದೆ. ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆ

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ (Iran) ಜೊತೆಗಿನ ಕದನ ವಿರಾಮವನ್ನು ಅಂತ್ಯಗೊಳಿಸಿದ ಘೋಷಣೆಯ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು, ಹೂಡಿಕೆದಾರರ (Investors) ಸಂಪತ್ತು ಇಂದು ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಕರಗಿದೆ. ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty), ಬ್ಯಾಂಕ್ ನಿಫ್ಟಿ ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 8 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಯಾವುದು ಎಷ್ಟು ಇಳಿಕೆ? ಸೆನ್ಸೆಕ್ಸ್ 1,677(-2.15%) ಅಂಕ ಕುಸಿದು 76,503.60 ರಲ್ಲಿ ಕೊನೆಯಾದರೆ ನಿಫ್ಟಿ 516.65 (-2.1%) ಅಂಕ ಇಳಿಕೆಯಾಗಿ 23,882.05ರಲ್ಲಿ ಕೊನೆಯಾಯಿತು. ಬ್ಯಾಂಕ್ ನಿಫ್ಟಿ 1,458.10(-2.51%) ಅಂಕ ಕುಸಿದು 56,742.60 ರಲ್ಲಿ ವ್ಯವಹಾರ ಮುಗಿಸಿದೆ. ಟ್ರಂಪ್ ಅವರು ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮ ಒಪ್ಪಂದವು ಮುಕ್ತಾಯಗೊಂಡಿದೆ ಎಂದು ಘೋಷಿಸಿದ ನಂತರ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ತೀವ್ರಗೊಂಡಿತು. ಮಧ್ಯಾಹ್ನ 1:40 ರ ವೇಳೆಗೆ ಈ ಘೋಷಣೆ ಪ್ರಕಟವಾದ ಬೆನ್ನಲ್ಲೇ ಮಾರುಕಟ್ಟೆ ಕಸಿಯಲು ಆರಂಭವಾಯಿತು. ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 471 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಎಫ್ಎಮ್ಸಿಜಿ ಮತ್ತು ನಿಫ್ಟಿ ಆಯಿಲ್ ಅಂಡ್ ಗ್ಯಾಸ್ ಸೂಚ್ಯಂಕಗಳು ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿವೆ. BREAKING: President Trump declares the U.S.-Iran ceasefire agreement is effectively “OVER” following a violent new round of overnight military strikes. Speaking from the NATO summit in Ankara, Turkey, Trump blasted Iranian leadership and stated he has no interest in continuing… pic.twitter.com/8kHDmriTrO — Fox News (@FoxNews) July 8, 2026 ಮಾರುಕಟ್ಟೆ ಕುಸಿದಿದ್ದು ಯಾಕೆ? ಟ್ರಂಪ್ ಘೋಷಣೆ: ಇರಾನ್ ಜೊತೆಗಿನ ಶಾಂತಿ ಒಪ್ಪಂದ ಮುಗಿದ ಅಧ್ಯಾಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸುತ್ತಿದ್ದಂತೆ ಹೂಡಿಕೆದಾರರ ನಂಬಿಕೆ ಹುಸಿಯಾಯಿತು. ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಹೊಸ ಸಂಘರ್ಷಗಳು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗಬಹುದು ಎಂಬ ಭೀತಿ ಮೂಡಿಸಿದೆ. ಇದನ್ನೂ ಓದಿ: ಇರಾನ್ ಜೊತೆಗಿನ ಕದನ ವಿರಾಮ ಅಂತ್ಯ – ಇರಾನ್ನವರು ನಾಲಾಯಕ್, ವಿಕೃತ ಮನಸ್ಸಿನವರು ಎಂದ ಟ್ರಂಪ್ ಕಚ್ಚಾ ತೈಲ ಬೆಲೆ ಏರಿಕೆ: ಜಾಗತಿಕವಾಗಿ ಉಂಟಾಗಿರುವ ರಾಜಕೀಯ ಸಂಘರ್ಷಗಳಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಪೂರೈಕೆಗೆ ಅಡ್ಡಿಯಾಗಬಹುದು ಎಂಬ ಆತಂಕ ಶುರುವಾಗಿದೆ. ಇದರ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ 5% ರಷ್ಟು ಜಿಗಿದು ಪ್ರತಿ ಬ್ಯಾರೆಲ್ಗೆ 78.09 ಡಾಲರ್ಗೆ ಏರಕೆಯಾಗಿದೆ ಜಾಗತಿಕ ಮಾರುಕಟ್ಟೆಗಳ ದುರ್ಬಲ ನಡೆ: ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಂಕಾದ ವಾತಾವರಣ ಭಾರತೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತು. ಟ್ರಂಪ್ ಹೇಳಿಕೆಯ ನಂತರ ಯುರೋಪ್ನ ಪ್ರಮುಖ ಸೂಚ್ಯಂಕಗಳಾದ ಬ್ರಿಟನ್ನ FTSE 100, ಫ್ರಾನ್ಸ್ನ CAC 40 ಮತ್ತು ಜರ್ಮನಿಯ DAX 2% ರಷ್ಟು ಕುಸಿದವು. ಏಷ್ಯಾದಲ್ಲಿ ಜಪಾನ್ನ ನಿಕಿ 1.5% ಕುಸಿದರೆ, ದಕ್ಷಿಣ ಕೊರಿಯಾದ ಕೋಸ್ಪಿ 6% ರಷ್ಟು ಭಾRi ಕುಸಿತ ಕಂಡಿತು. ಅಮೆರಿಕದ ಬಾಂಡ್ ಯೀಲ್ಡ್ ಏರಿಕೆ: ಅಮೆರಿಕದ 10 ವರ್ಷಗಳ ಟ್ರೆಜರಿ ಬಾಂಡ್ ಯೀಲ್ಡ್ 4.56% ಕ್ಕೆ ಮತ್ತು 30 ವರ್ಷಗಳ ಬಾಂಡ್ ಯೀಲ್ಡ್ 5.06% ಕ್ಕೆ ಏರಿಕೆಯಾಗಿದೆ. ಬಾಂಡ್ ಯೀಲ್ಡ್ ಹೆಚ್ಚಾದಾಗ ಹೂಡಿಕೆದಾರರು ಷೇರು ಮಾರುಕಟ್ಟೆಯಂತಹ ಅಪಾಯಕಾರಿ ಹೂಡಿಕೆಗಳಿಗಿಂತ ಸ್ಥಿರ ಆದಾಯ ಕೊಡುವ ಬಾಂಡ್ಗಳ ಕಡೆಗೆ ಮುಖ ಮಾಡುತ್ತಾರೆ. ಇದು ಷೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗುತ್ತದೆ ರೂಪಾಯಿ ಮೌಲ್ಯ ಕುಸಿತ: ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಅಮೆರಿಕನ್ ಡಾಲರ್ ಬಲಗೊಂಡ ಹಿನ್ನೆಲೆಯಲ್ಲಿ ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು 95.50 ರ ಗಡಿ ದಾಟಿ ಕುಸಿತ ಕಂಡಿದೆ. ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಶೇಕಡಾ 0.6% ರಷ್ಟು ಕುಸಿತವಾಗಿದೆ.