ನ್ಯಾಟೊ ನಾಯಕರಿಗೆ ರಿವಾಲ್ವರ್, ಗುಂಡುಗಳನ್ನು ಕೊಟ್ಟ ಟರ್ಕಿ ಅಧ್ಯಕ್ಷ: ಕಾರಣವೇನು?
ಅಂಕಾರಾದಲ್ಲಿ ನಡೆದ ಬಹುನಿರೀಕ್ಷಿತ ನ್ಯಾಟೊ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಶ್ವದ ವಿವಿಧ ದೇಶಗಳ ನಾಯಕರು ಟರ್ಕಿಯಿಂದ ಹೊರಡುವ ವೇಳೆ, ಅವರಿಗೆ ಆಶ್ಚರ್ಯಕರ ಉಡುಗೊರೆಯೊಂದು ಕಾಯುತ್ತಿತ್ತು. ಅದುವೇ ಒಂದು ‘ರಿವಾಲ್ವರ್’.ಹೌದು, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ತಮ್ಮ ದೇಶದ ಸದೃಢ ರಕ್ಷಣಾ ಉದ್ಯಮದ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ವಿನೂತನ ಮಾರ್ಗ

ಅಂಕಾರಾದಲ್ಲಿ ನಡೆದ ಬಹುನಿರೀಕ್ಷಿತ ನ್ಯಾಟೊ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಶ್ವದ ವಿವಿಧ ದೇಶಗಳ ನಾಯಕರು ಟರ್ಕಿಯಿಂದ ಹೊರಡುವ ವೇಳೆ, ಅವರಿಗೆ ಆಶ್ಚರ್ಯಕರ ಉಡುಗೊರೆಯೊಂದು ಕಾಯುತ್ತಿತ್ತು. ಅದುವೇ ಒಂದು ‘ರಿವಾಲ್ವರ್’.ಹೌದು, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ತಮ್ಮ ದೇಶದ ಸದೃಢ ರಕ್ಷಣಾ ಉದ್ಯಮದ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ. ಅಂಕಿ-ಅಂಶಗಳನ್ನು ವಿವರಿಸುವ ಬದಲು, ಪ್ರಾಯೋಗಿಕವಾಗಿ ತೋರಿಸುವ ಮಾರ್ಗ ಇದಾಗಿದೆ. ನ್ಯಾಟೊದ ಪ್ರತಿಯೊಬ್ಬ ನಾಯಕನಿಗೂ ಒಂದು ವಿಂಟೇಜ್ ರಿವಾಲ್ವರ್, ಸಜೀವ ಗುಂಡುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಕೇವಲ ಪ್ರದರ್ಶನಕ್ಕಾಗಿ ಅಲ್ಲ ಎಂಬುದನ್ನು ಇದು ಸೂಚಿಸುತ್ತಿತ್ತು.ಶೃಂಗಸಭೆ ಮುಗಿಸಿ ಸ್ವದೇಶಕ್ಕೆ ಮರಳಿದ ಬೆಲ್ಜಿಯಂ ಪ್ರಧಾನಿ ಬರ್ತ್ ದೆ ವೇವರ್ ಅವರು, ತಮ್ಮ ಬ್ಯಾಗ್ನಲ್ಲಿ ಗನ್ ಮತ್ತು ಮದ್ದುಗುಂಡುಗಳಿರುವುದನ್ನು ಕಂಡು ಕೊಂಚ ಆಶ್ಚರ್ಯಚಕಿತರಾಗಿದ್ದಾರೆ.1990ರ ದಶಕದಲ್ಲಿ ಟರ್ಕಿಯ ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ‘ಎಂಕೆಇ’ ತಯಾರಿಸಿದ ಅಪರೂಪದ ಆರು-ಸುತ್ತಿನ ರಿವಾಲ್ವರ್ ಆದ ‘ಗುಮುಸೇ .357 ಮ್ಯಾಗ್ನಮ್’ನಂತೆ ಕಂಡುಬಂದಿದೆ ಎಂದು ಲಿಥುವೇನಿಯಾದ ಅಧ್ಯಕ್ಷ ಗಿಟಾನಾಸ್ ನೌಸೆಡಾ ಅವರ ಕಚೇರಿ ತಿಳಿಸಿದೆ.ಉಡುಗೊರೆಯನ್ನು ಟರ್ಕಿಯ ಧ್ವಜ ಮತ್ತು ನ್ಯಾಟೊ ಲೋಗೊ ಹೊಂದಿರುವ ಮರದ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಜತೆಗೆ ಟರ್ಕಿಶ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ‘ನಮ್ಮ ದೇಶದಲ್ಲಿ ಉತ್ಪಾದಿಸಲಾದ ಮೊದಲ ರಿವಾಲ್ವರ್ ಮಾದರಿಯ ಬಂದೂಕು - ಗುಮುಸೇ’ ಎಂದು ಬರೆದಿರುವ ಫಲಕವೂ ಇತ್ತು.ಕೆತ್ತನೆ ವಿನ್ಯಾಸದ ಟರ್ಕಿಶ್ ರಿವಾಲ್ವರ್ಗಳು...ನ್ಯಾಟೊ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ನಾಯಕರಿಗೂ ಅವರದ್ದೇ ಹೆಸರುಗಳನ್ನು ಕೆತ್ತಲಾದ ಒಂದೇ ರೀತಿಯ ಮಾಡೆಲ್ನ ರಿವಾಲ್ವರ್ಗಳನ್ನು ನೀಡಲಾಗಿದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರ ವಕ್ತಾರರು ತಿಳಿಸಿದ್ದಾರೆ.ಬೆಲ್ಜಿಯಂ ಪ್ರಧಾನಿ ಬರ್ತ್ ದೆ ವೇವರ್ ಅವರು ಈ ಪಿಸ್ತೂಲನ್ನು ಸುರಕ್ಷಿತವಾಗಿಡಲು ಬ್ರಸೆಲ್ಸ್ ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.‘ನಮ್ಮ ರಿವಾಲ್ವರ್ ವಾರ್ಸಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮಂಜೂರಾತಿಗಾಗಿ ಕಾಯುತ್ತಿದೆ ಮತ್ತು ಅದನ್ನು ಸೂಕ್ತ ಸ್ಥಳದಲ್ಲಿ ಇರಿಸಲಾಗುವುದು. ಖಂಡಿತವಾಗಿಯೂ ಯಾರೂ ಇದರಿಂದ ಗುಂಡು ಹಾರಿಸುವುದಿಲ್ಲ’ ಎಂದು ಪೋಲೆಂಡ್ ಅಧ್ಯಕ್ಷ ಕಾರೊಲ್ ನವ್ರೊಸ್ಕಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.ಡಚ್ ಮತ್ತು ಸ್ವೀಡಿಷ್ ಪ್ರಧಾನ ಮಂತ್ರಿಗಳ ಕಚೇರಿಗಳು ತಮ್ಮ ರಿವಾಲ್ವರ್ಗಳನ್ನು ಅಂಕಾರಾದಲ್ಲಿರುವ ತಮ್ಮ ರಾಯಭಾರ ಕಚೇರಿಗಳಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿವೆ. ಡಚ್ ರಿವಾಲ್ವರ್ ಅನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಲಾಗಿದ್ದರೆ, ಸ್ವೀಡಿಷ್ ರಿವಾಲ್ವರ್ ಆಮದು ದಾಖಲೆಗಳ ಪ್ರಕ್ರಿಯೆಗಾಗಿ ಕಾಯುತ್ತಿದೆ.ಬ್ರಿಟನ್ನ ಕೀರ್ ಸ್ಟಾರ್ಮರ್ ಅವರಿಗೆ ನೀಡಲಾದ ರಿವಾಲ್ವರ್ನೊಂದಿಗೆ ಕ್ಲೀನಿಂಗ್ ಕಿಟ್ ಮತ್ತು 500 ಬುಲೆಟ್ಗಳನ್ನು ನೀಡಲಾಗಿತ್ತು ಎಂದು ಡೌನಿಂಗ್ ಸ್ಟ್ರೀಟ್ನ ಮೂಲವೊಂದು ತಿಳಿಸಿದೆ.ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ರಿವಾಲ್ವರ್ ಅನ್ನು ಈಗಾಗಲೇ ಇತರ ಸರ್ಕಾರಿ ಉಡುಗೊರೆಗಳೊಂದಿಗೆ ರೋಮ್ನ ಸರ್ಕಾರದ ಅಧಿಕೃತ ನಿವಾಸವಾದ ‘ಪಲಾಝೊ ಚಿಗಿ’ಯಲ್ಲಿ ಇರಿಸಲಾಗಿದೆ.ಐರೋಪ್ಯ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ಫಾಂಡರ್ ಲೇಯನ್ ಅವರು ತಮ್ಮ ರಿವಾಲ್ವರ್ ಅನ್ನು ಮಿಲಿಟರಿ ಮ್ಯೂಸಿಯಂಗೆ ದೇಣಿಗೆ ನೀಡಲು ಉದ್ದೇಶಿಸಿದ್ದರೆ, ಗ್ರೀಸ್ ನಾಯಕರು ಅದನ್ನು ಅಥೆನ್ಸ್ನಲ್ಲಿರುವ ಯುದ್ಧ ಮ್ಯೂಸಿಯಂಗೆ ನೀಡಲು ಯೋಜಿಸಿದ್ದಾರೆ.ಟರ್ಕಿಯ ಆಧುನಿಕ ಕೈಬಂದೂಕು ಉದ್ಯಮವು ಪ್ರಮುಖವಾಗಿ ಸೆಮಿ-ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳ ಮೇಲೆ ಗಮನ ಹರಿಸುತ್ತದೆ. ಟರ್ಕಿಯ ಬಂದೂಕು ತಯಾರಕರು ಕಡಿಮೆ ವೆಚ್ಚದ ಪಿಸ್ತೂಲ್ಗಳು ಮತ್ತು ಶಾಟ್ಗನ್ಗಳೊಂದಿಗೆ ಯುರೋಪ್ನ ನಾಗರಿಕ ಬಂದೂಕು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ. ಇದು ಹೆಚ್ಚಿನ ಬೆಲೆಯ ಕ್ರೀಡಾ ಮತ್ತು ಸೇವಾ ಶಸ್ತ್ರಾಸ್ತ್ರಗಳೊಂದಿಗೆ ದೀರ್ಘಕಾಲದ ನಂಟು ಹೊಂದಿರುವ ಇಟಾಲಿಯನ್ ಮತ್ತು ಬೆಲ್ಜಿಯನ್ ಬ್ರಾಂಡ್ಗಳಿಗೆ ಸವಾಲೊಡ್ಡುತ್ತಿದೆ.ಜಿನೀವಾ ಮೂಲದ ‘ಸ್ಮಾಲ್ ಆರ್ಮ್ಸ್ ಸರ್ವೆ’ ಪ್ರಕಾರ, 2019 ಮತ್ತು 2024ರ ನಡುವೆ ಸಣ್ಣ ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಟರ್ಕಿಯು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ಈ ಅವಧಿಯಲ್ಲಿ ಟರ್ಕಿಯು ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಮಾಡಿದೆ. ಅಮೆರಿಕ ಮತ್ತು ಇಟಲಿ ಮೊದಲೆರಡು ಸ್ಥಾನದಲ್ಲಿವೆ.