ಪ್ರಧಾನಿ ಮೋದಿ ಆಸ್ಟ್ರೇಲಿಯಾ ಭೇಟಿ
ಜಕಾರ್ತ/ಮೆಲ್ಬರ್ನ್ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಇಂಡೊನೇಷ್ಯಾ ಭೇಟಿ ಬಳಿಕ ಬುಧವಾರ ರಾತ್ರಿ ವೇಳೆಗೆ ಆಸ್ಟ್ರೇಲಿಯಾ ತಲುಪಿದರು. ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಅವರು ಜುಲೈ 10ರವರೆಗೆ ಇರಲಿದ್ದಾರೆ.ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಮೆಲ್ಬರ್ನ್ನಲ್ಲಿಬಂದಿಳಿದಿದ್ದೇನೆ. ಈ ಪ್ರವಾಸವು ಭಾರತ–ಆಸ್ಟ್ರೇಲಿಯಾದ ಸಂಬಂಧಕ್ಕ

ಜಕಾರ್ತ/ಮೆಲ್ಬರ್ನ್ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಇಂಡೊನೇಷ್ಯಾ ಭೇಟಿ ಬಳಿಕ ಬುಧವಾರ ರಾತ್ರಿ ವೇಳೆಗೆ ಆಸ್ಟ್ರೇಲಿಯಾ ತಲುಪಿದರು. ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಅವರು ಜುಲೈ 10ರವರೆಗೆ ಇರಲಿದ್ದಾರೆ.ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಮೆಲ್ಬರ್ನ್ನಲ್ಲಿಬಂದಿಳಿದಿದ್ದೇನೆ. ಈ ಪ್ರವಾಸವು ಭಾರತ–ಆಸ್ಟ್ರೇಲಿಯಾದ ಸಂಬಂಧಕ್ಕೆ ಚೈತನ್ಯ ತುಂಬಲಿದೆ. ಪ್ರಧಾನಿ ಆಂಥೊನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕನಾಗಿದ್ದೇನೆ. ಇಲ್ಲಿರುವ ಭಾರತೀಯರೊಂದಿಗೂ ಸಂವಾದ ನಡೆಸಲಿದ್ದೇನೆ’ ಎಂದಿದ್ದಾರೆ.ದೇವಾಲಯ ಜೀರ್ಣೋದ್ಧಾರಕ್ಕೆ ಒಪ್ಪಂದ: ಇಂಡೊನೇಷ್ಯಾದಿಂದ ಹೊರಡುವ ಮೊದಲು ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರು ಜಕಾರ್ತ ದಲ್ಲಿರುವ ಶಿವನ ಅತಿದೊಡ್ಡ ದೇವಾ ಲಯ ‘ಪ್ರಂಬಾನನ್ ದೇವಾಲಯ’ಕ್ಕೆ ಭೇಟಿ ನೀಡಿದರು. ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಈ ದೇವಾಲಯದ ಸಂರಕ್ಷಣೆ ಗಾಗಿ ‘ಪ್ರಂಬಾನನ್ ದೇವಾಲಯ ಜೀರ್ಣೋದ್ಧಾರ ಯೋಜನೆ’ಗೆ ಇಬ್ಬರೂ ನಾಯಕರು ಸಹಿ ಹಾಕಿದರು.ದೇವಾಲಯದ ಆವರಣದಲ್ಲಿಯೇ ಏರ್ಪಡಿಸಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ನಾನು ಇಲ್ಲಿ ಮಾತನಾಡುತ್ತಿರುವ ವೇಳೆಯೇ ಇಲ್ಲಿನ ಗಾಳಿಯಲ್ಲಿ ಸಾಂಸ್ಕೃತಿಕವಾಗಿರುವ ಸುವಾಸನೆ ತೇಲಿ ಬರುತ್ತಿದೆ. ಇದೇ ರೀತಿಯ ಸುವಾಸನೆಯನ್ನು ಪ್ರತಿ ಕ್ಷಣವೂ ನಾನು ಭಾರತದ ನೆಲದಲ್ಲಿಯೂ ಅನುಭವಿಸುತ್ತೇನೆ. ಇದು ನಮ್ಮ ಎರಡೂ ದೇಶಗಳನ್ನು ಒಗ್ಗೂಡಿಸಿದೆ’ ಎಂದರು.‘ಮೃತ್ಯುಂಜಯ ಮಂತ್ರಘೋಷಗಳು ಮತ್ತು ಓಂ ನಮಃ ಶಿವಾಯ ಉಚ್ಚಾರಣೆಯು ಇಲ್ಲಿ ಕೇಳಿಸುತ್ತಿದೆ. ಇದು ನನ್ನ ಹೃದಯವನ್ನು ತಟ್ಟಿತು. ಒಮ್ಮೆ ಇಲ್ಲಿ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡರೆ, ಭಾರತದ ಪ್ರವಾಸಿಗರು ಇಲ್ಲಿಗೆ ಖಂಡಿತ ಬರುತ್ತಾರೆ’ ಎಂದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260709-51-1135140940