ವಿಡಿಯೊ| ಎಸ್ಐಆರ್ಗೆ ಮೊದಲು ಬೆಂಬಲ, ಈಗ ವಿರೋಧ: ಬಿಜೆಪಿ ನಿಲುವು ಬದಲಾಗಿದ್ದೇಕೆ?
ಕರ್ನಾಟಕದಲ್ಲಿ ಎಸ್ಐಆರ್ ಶುರುವಾಗುವವರೆಗೂ ಅದರ ಪರವಾಗಿ ವಕಾಲತ್ತು ವಹಿಸಿದ್ದ ಬಿಜೆಪಿಯ ರಾಜ್ಯ ನಾಯಕರು, ಕೇಂದ್ರ ಸಚಿವರು ಏಕಾಏಕಿ ಬೆಚ್ಚಿ ಬಿದ್ದಿದ್ದಾರೆ. ದೇಶದ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಎಸ್ಐಆರ್ ಅನ್ನು ಹಬ್ಬದಂತೆ ಸಂಭ್ರಮಿಸಿದ್ದ ಬಿಜೆಪಿ ನಾಯಕರು, ಈಗ ತಕರಾರು ತೆಗೆದಿರುವುದು ಏಕೆ? ಎಸ್ಐಆರ್ ನಡೆದರೆ 2028ರಲ್ಲಿ ಬಿಜೆಪಿ ಅಧಿಕಾರಕ

ಕರ್ನಾಟಕದಲ್ಲಿ ಎಸ್ಐಆರ್ ಶುರುವಾಗುವವರೆಗೂ ಅದರ ಪರವಾಗಿ ವಕಾಲತ್ತು ವಹಿಸಿದ್ದ ಬಿಜೆಪಿಯ ರಾಜ್ಯ ನಾಯಕರು, ಕೇಂದ್ರ ಸಚಿವರು ಏಕಾಏಕಿ ಬೆಚ್ಚಿ ಬಿದ್ದಿದ್ದಾರೆ. ದೇಶದ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಎಸ್ಐಆರ್ ಅನ್ನು ಹಬ್ಬದಂತೆ ಸಂಭ್ರಮಿಸಿದ್ದ ಬಿಜೆಪಿ ನಾಯಕರು, ಈಗ ತಕರಾರು ತೆಗೆದಿರುವುದು ಏಕೆ? ಎಸ್ಐಆರ್ ನಡೆದರೆ 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ಹೇಳಿದ್ದರು. ಆದರೀಗ. ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ಎಂದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಎಸ್ಐಆರ್ ಗಮನಿಸಿದ್ದ ಕೆಪಿಸಿಸಿ ಹಿಂದಿನ ಅಧ್ಯಕ್ಷ, ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದಲ್ಲಿ ಇದಕ್ಕೆ ಪ್ರತ್ಯೇಕ ತಂತ್ರಗಾರಿಕೆ ಹೆಣೆದರು. ಬಿಜೆಪಿ–ಜೆಡಿಎಸ್ ಭಯ ಬೀಳಲು ಇದೇ ಕಾರಣವೇ? ಏನಿದರ ಮರ್ಮ?
Read the complete story at Prajavani