T20 ಕ್ರಿಕೆಟ್: ಇಂಗ್ಲೆಂಡ್ ತಂಡಕ್ಕೆ ಸರಣಿ
ಬ್ರಿಸ್ಟಲ್ (ಪಿಟಿಐ): ಹ್ಯಾರಿ ಬ್ರೂಕ್ (ಔಟಾಗದೇ 79;35ಎ) ಮತ್ತು ಫಿಲ್ ಸಾಲ್ಟ್ (ಔಟಾಗದೇ 59;42ಎ) ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ಗುರುವಾರ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಒಂಬತ್ತು ವಿಕೆಟ್ಗಳಿಂದ ಭಾರತವನ್ನು ಮಣಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 3–0ಯಿಂದ ವಶಮಾಡಿಕೊಂಡಿತು.ಮೊದಲ ಪಂದ್ಯ ಮಳೆಯಿಂದ ರದ್ದಾದ

ಬ್ರಿಸ್ಟಲ್ (ಪಿಟಿಐ): ಹ್ಯಾರಿ ಬ್ರೂಕ್ (ಔಟಾಗದೇ 79;35ಎ) ಮತ್ತು ಫಿಲ್ ಸಾಲ್ಟ್ (ಔಟಾಗದೇ 59;42ಎ) ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ಗುರುವಾರ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಒಂಬತ್ತು ವಿಕೆಟ್ಗಳಿಂದ ಭಾರತವನ್ನು ಮಣಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 3–0ಯಿಂದ ವಶಮಾಡಿಕೊಂಡಿತು.ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ನಂತರದ ಮೂರೂ ಪಂದ್ಯಗಳಲ್ಲಿ ಆತಿಥೇಯ ತಂಡವು ಹ್ಯಾಟ್ರಿಕ್ ಜಯ ದಾಖಲಿಸಿತು. ಸರಣಿಯ ಕೊನೆಯ ಪಂದ್ಯ ಇದೇ 11ರಂದು ನಡೆಯಲಿದೆ.ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ (ಔಟಾಗದೇ 80;49ಎ) ಅವರ ಬ್ಯಾಟಿಂಗ್ ನೆರವಿನಿಂದ ತಂಡವು 7 ವಿಕೆಟ್ಗೆ 158 ರನ್ಗಳ ಸವಾಲಿನ ಮೊತ್ತ ಗಳಿಸಿತು. 15ರ ಪೋರ ವೈಭವ್ ಸೂರ್ಯವಂಶಿ (15) ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಅವರು ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಸ್ಯಾಮ್ ಕರನ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅವರ ಬೆನ್ನಲ್ಲೇ ಇಶಾನ್ ಕಿಶನ್ (4) ಮತ್ತು ಅಭಿಷೇಕ್ ಶರ್ಮಾ (16) ಡಗೌಟ್ ಸೇರಿಕೊಂಡರು.48 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಶ್ರೇಯಸ್ ಮತ್ತು ಶಿವಂ ದುಬೆ (22;23ಎ) ಆಸರೆಯಾದರು. ಅವರು ನಾಲ್ಕನೇ ವಿಕೆಟ್ಗೆ 53 ರನ್ ಸೇರಿಸಿದರು. ಶ್ರೇಯಸ್ ಅವರ ಇನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ಒಳಗೊಂಡಿತ್ತು. 100ನೇ ಅಂತರ ರಾಷ್ಟ್ರೀಯ ಟಿ20 ಪಂದ್ಯ ಆಡಿದ ಆಲ್ರೌಂಡರ್ ಅಕ್ಷರ್ ಪಟೇಲ್ (1) ಅವರು ಇನಿಂಗ್ಸ್ನ ಕೊನೆಯ ಎಸೆತದಲ್ಲಿ ರನೌಟ್ಗೆ ಬಲಿಯಾದರು. ಇಂಗ್ಲೆಂಡ್ನ ಅನುಭವಿ ವೇಗಿ ಆರ್ಚರ್ (4–0–20–2) ಪರಿಣಾಮಕಾರಿ ದಾಳಿ ಸಂಘಟಿಸಿದರು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 37 ಎಸೆತಗಳು ಬಾಕಿ ಇರುವಂತೆ 1 ವಿಕೆಟ್ಗೆ 159 ರನ್ ಗಳಿಸಿ ಸಂಭ್ರಮಿಸಿತು. ಆರಂಭಿಕ ಆಟಗಾರ ಜೋಸ್ ಬಟ್ಲರ್ (8) ಬೇಗನೆ ಔಟಾದರು. ಆದರೆ, ಸಾಲ್ಟ್ ಮತ್ತು ಬ್ರೂಕ್ ಅವರು ಎರಡನೇ ವಿಕೆಟ್ಗೆ ಮುರಿಯದ 146 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 7 ವಿಕೆಟ್ಗೆ 158 (ಶ್ರೇಯಸ್ ಅಯ್ಯರ್ ಔಟಾಗದೇ 80, ಶಿವಂ ದುಬೆ 22; ಜೋಫ್ರಾ ಆರ್ಚರ್ 20ಕ್ಕೆ 2, ಜೋಶ್ ಟಂಗ್ 36ಕ್ಕೆ 2). ಇಂಗ್ಲೆಂಡ್: 13.5 ಓವರ್ಗಳಲ್ಲಿ 1 ವಿಕೆಟ್ಗೆ 159 (ಫಿಲ್ ಸಾಲ್ಟ್ ಔಟಾಗದೇ 59, ಹ್ಯಾರಿ ಬ್ರೂಕ್ ಔಟಾಗದೇ 79).