ಉಡುಪಿ | ಮಳೆ ಕೊರತೆಯಿಂದ ಭತ್ತ ನಾಟಿ ವಿಳಂಬ
ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಪರಿಣಾಮ ಭತ್ತದ ಕೃಷಿ (Rice Cultivation) ಚಟುವಟಿಕೆಗಳು ಹಿನ್ನಡೆ ಕಂಡಿವೆ. ಈ ಬಾರಿ ಕರಾವಳಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಗದ್ದೆಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ರೈತರು ನಾಟಿ ಕಾರ್ಯ ಆರಂಭಿಸಲು ಪರದಾಡುವಂತಾಗಿದೆ. ಈ ಬಾರಿ ಬಯಲು ಗದ್ದೆಗಳಲ್ಲೂ ಕೃಷಿ ಸಿದ್ಧತೆ ಪೂರ್ಣವಾಗಿಲ್ಲ. ಮುಂಗಾರು

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಪರಿಣಾಮ ಭತ್ತದ ಕೃಷಿ (Rice Cultivation) ಚಟುವಟಿಕೆಗಳು ಹಿನ್ನಡೆ ಕಂಡಿವೆ. ಈ ಬಾರಿ ಕರಾವಳಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಗದ್ದೆಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ರೈತರು ನಾಟಿ ಕಾರ್ಯ ಆರಂಭಿಸಲು ಪರದಾಡುವಂತಾಗಿದೆ. ಈ ಬಾರಿ ಬಯಲು ಗದ್ದೆಗಳಲ್ಲೂ ಕೃಷಿ ಸಿದ್ಧತೆ ಪೂರ್ಣವಾಗಿಲ್ಲ. ಮುಂಗಾರು ಪೂರ್ವ ಮಳೆ ಕೈಕೊಟ್ಟ ಬಳಿಕ ಇದೀಗ ಮುಂಗಾರು ಮಳೆ ಕೊರತೆ ಉಡುಪಿ (Udupi) ಜಿಲ್ಲೆಯ ರೈತರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಮೇ-ಜೂನ್ ತಿಂಗಳಲ್ಲಿ ಭತ್ತದ ಕೃಷಿಗೆ ಸಿದ್ಧತೆ ಆರಂಭಿಸುವ ರೈತರು ಈ ಬಾರಿ ಮಳೆಯ ನಿರೀಕ್ಷೆಯಲ್ಲೇ ದಿನ ಕಳೆಯುವಂತಾಗಿದೆ. ಎಲ್ನಿನೋ ಪ್ರಭಾವದಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದರೂ, ಕರಾವಳಿಯ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಉಳುಮೆ, ಬೀಜ ಬಿತ್ತನೆ ಹಾಗೂ ನಾಟಿ ಕಾರ್ಯಗಳು ವಿಳಂಬಗೊಂಡಿವೆ. ಇದನ್ನೂ ಓದಿ: Wayanad Landslide | ಇಂದು 3 ಮೃತದೇಹ ಪತ್ತೆ – ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆ ಸಾಮಾನ್ಯವಾಗಿ ಈ ಅವಧಿಯಲ್ಲಿ ಸರಾಸರಿ 8ರಿಂದ 9 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ, ಪ್ರಸ್ತುತ 2ರಿಂದ 3 ಸೆಂ.ಮೀ. ಮಳೆಯಷ್ಟೇ ದಾಖಲಾಗುತ್ತಿದೆ. ಹೀಗಾಗಿ, ಗದ್ದೆಗಳಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಉಡುಪಿ ಜಿಲ್ಲೆಯ ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಕುಂದಾಪುರ, ಬೈಂದೂರು ಹಾಗೂ ಕಾಪು ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರು ಗದ್ದೆ ಸಿದ್ಧಪಡಿಸಿಕೊಂಡಿದ್ದರೂ, ನೀರಿನ ಕೊರತೆಯಿಂದ ನಾಟಿ ಆರಂಭಿಸಲು ಸಾಧ್ಯವಾಗಿಲ್ಲ. ಕೃಷಿ ಇಲಾಖೆ ಪ್ರಕಾರ, ಜಿಲ್ಲೆಯಲ್ಲಿ ಈ ಬಾರಿ 37,742 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿಯ ಗುರಿ ಹೊಂದಲಾಗಿದೆ. ಜುಲೈ ಮೊದಲ ವಾರದ ವೇಳೆಗೆ ಸುಮಾರು 12 ಸಾವಿರದಿಂದ 12,500 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಪೂರ್ಣಗೊಳ್ಳಬೇಕಿತ್ತು. ಆದರೆ, ಇದುವರೆಗೆ 9031 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಾಟಿ ಕಾರ್ಯ ನಡೆದಿದೆ. ಕಳೆದ ವರ್ಷ 35 ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿದ್ದರೂ, 25,596 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿತ್ತು. ಜಿಲ್ಲೆಯಲ್ಲಿ ಈಗಾಗಲೇ ಎಂ.ಓ-4 ಹಾಗೂ ಜ್ಯೋತಿ ತಳಿಯ ಭತ್ತದ ಬೀಜಗಳನ್ನು ವಿತರಿಸಲಾಗಿದೆ. ಇದನ್ನೂ ಓದಿ: ದೆಹಲಿ-ಎನ್ಸಿಆರ್ನಲ್ಲಿ ಮುಂಗಾರು ಮಳೆಯ ಅಬ್ಬರ; ಜನಜೀವನ ಅಸ್ತವ್ಯಸ್ತ ಮಳೆ ಕೊರತೆ ಮುಂದುವರಿದರೆ ಕಡಿಮೆ ಅವಧಿಯಲ್ಲಿ ಬೆಳೆಯುವ ಸಹ್ಯಾದ್ರಿ ಕೆಂಪುಮುಕ್ಕಿ, ಜಯ, ಜ್ಯೋತಿ, ಎಂ.ಓ-23 ಹಾಗೂ ವಿವಿಧ ತಳಿ ಬಿತ್ತನೆ ಮಾಡಬಹುದಾಗಿ ಕೃಷಿ ಇಲಾಖೆ ಸಲಹೆ ನೀಡಿದೆ. ಗದ್ದೆಗಳಲ್ಲಿ ತೇವಾಂಶ ಉಳಿಸಿಕೊಳ್ಳುವುದು, ಬದುಗಳನ್ನು ಬಲಪಡಿಸುವುದು ಹಾಗೂ ಹವಾಮಾನ ಮುನ್ಸೂಚನೆ ಆಧರಿಸಿ ಕೃಷಿ ಕ್ರಮಗಳನ್ನು ಕೈಗೊಳ್ಳುವುದು ರೈತರಿಗೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.