ರಾಜ್ಯದಲ್ಲಿ ಮಲಿನ ನದಿಗಳ ಸಂಖ್ಯೆ 14ಕ್ಕೆ ಏರಿಕೆ – ಯಾವುದೆಲ್ಲ ಕಲುಷಿತ?
-ಜಲಮೂಲಕ್ಕೆ ವ್ಯಾಪಕವಾಗಿ ಸೇರುತ್ತಿದೆ ಕೊಳಚೆ ನೀರು ನವದೆಹಲಿ/ಬೆಂಗಳೂರು: ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ವ್ಯಾಪಕ ಪ್ರಮಾಣದಲ್ಲಿ ಜಲಮೂಲಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಕರ್ನಾಟಕದಲ್ಲಿ ಮಲಿನ ನದಿಗಳ ಸಂಖ್ಯೆ 14ಕ್ಕೆ ಏರಿದೆ. ಜಲಮೂಲಗಳ ಮಾಲಿನ್ಯದ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರು

-ಜಲಮೂಲಕ್ಕೆ ವ್ಯಾಪಕವಾಗಿ ಸೇರುತ್ತಿದೆ ಕೊಳಚೆ ನೀರು ನವದೆಹಲಿ/ಬೆಂಗಳೂರು: ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ವ್ಯಾಪಕ ಪ್ರಮಾಣದಲ್ಲಿ ಜಲಮೂಲಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಕರ್ನಾಟಕದಲ್ಲಿ ಮಲಿನ ನದಿಗಳ ಸಂಖ್ಯೆ 14ಕ್ಕೆ ಏರಿದೆ. ಜಲಮೂಲಗಳ ಮಾಲಿನ್ಯದ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ವರದಿ ಸಲ್ಲಿಸಿದೆ. ಇದರಲ್ಲಿ ಈ ಕುರಿತು ಮಾಹಿತಿಯಿದೆ. ಈ ಹಿಂದೆ ಕಲುಷಿತ ನದಿಗಳ ಸಂಖ್ಯೆ 12 ಇತ್ತು. ಇದನ್ನೂ ಓದಿ: ಬಿ ಟು ಎ ಖಾತಾದಾರರಿಗೆ ಗುಡ್ನ್ಯೂಸ್ ರಾಜ್ಯದ ನಗರ ಪ್ರದೇಶಗಳಲ್ಲಿ ಪ್ರತಿದಿನ 3,356 ದಶಲಕ್ಷ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಈ ಪೈಕಿ, ಅಂದಾಜು 817 ದಶಲಕ್ಷ ಕೊಳಚೆ ನೀರು ಜಲಮೂಲಗಳಿಗೆ ಈ ಹಿಂದೆ ಸೇರುತ್ತಿತ್ತು. ಈಗ 43 ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಮೂಲಕ (ಎಸ್ಟಿಪಿ) 621 ದಶಲಕ್ಷ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದೆ. ಉಳಿದ ಕೊಳಚೆ ನೀರು ಸಂಸ್ಕರಣೆಯಾಗದೇ ಜಲಮೂಲಗಳಿಗೆ ಸೇರುತ್ತಿದೆ. ಕಲುಷಿತ ನದಿಗಳ ಪಟ್ಟಿ: ಅರ್ಕಾವತಿ ನದಿ: ಇದು ಇಡೀ ಕರ್ನಾಟಕದಲ್ಲೇ ಹೆಚ್ಚು ಕಲುಷಿತಗೊಂಡ ನದಿ. ಹೆಸರಘಟ್ಟದಿಂದ ಕನಕಪುರದವರೆಗಿನ ಇದರ ಹರಿವಿನ ಜಾಗ ಸಂಪೂರ್ಣ ಮಲಿನವಾಗಿದೆ. ತುಂಗಭದ್ರಾ: ಹೊನ್ನಾಳಿಯಿಂದ ಧಡೇಸುಗೂರು ಸೇತುವೆಯವರೆಗೆ. ಭದ್ರಾ: ಭದ್ರಾವತಿಯಿಂದ ಎಂ.ಪಿ.ಎಂ (MPM) ವರೆಗೆ. ಶಿಂಶಾ: ಯಡಿಯೂರಿನಿಂದ ಹಲಗೂರಿನವರೆಗೆ. ಲಕ್ಷ್ಮಣತೀರ್ಥ: ಹುಣಸೂರು ನಗರದ ವ್ಯಾಪ್ತಿ. ಕಾವೇರಿ: ಕೆ.ಆರ್.ನಗರದಿಂದ ಸಂಗಮದವರೆಗೆ. ಕಬಿನಿ: ಸರಗೂರು ವ್ಯಾಪ್ತಿ. ಕಾಗಿಣಾ: ಸೇಡಂ ವ್ಯಾಪ್ತಿ. ಕೃಷ್ಣಾ: ಅಂಕಲಿ ಸೇತುವೆಯಿಂದ ದೇವಸಾಗರ ಸೇತುವೆಯವರೆಗೆ. ಭೀಮಾ: ಗಾಣಗಾಪುರದಿಂದ ಯಾದಗಿರಿಯವರೆಗೆ. ತುಂಗಾ: ಶಿವಮೊಗ್ಗ ನಗರದ ವ್ಯಾಪ್ತಿ. ದಕ್ಷಿಣ ಪಿನಾಕಿನಿ: ಮುಗಳೂರು ಸೇತುವೆಯಿಂದ ಚಿಕ್ಕರಸನಹಳ್ಳಿಯವರೆಗೆ. ಮಲಪ್ರಭಾ: ಬಾದಾಮಿಯಿಂದ ಐಹೊಳೆಯವರೆಗೆ. ಘಟಪ್ರಭಾ: ಮುಧೋಳ ನಗರದ ವ್ಯಾಪ್ತಿ.