ಸಾವಿನ 4 ತಿಂಗಳ ಬಳಿಕ ನೆರವೇರಿದ ಇರಾನ್ನ ಸರ್ವೋಚ್ಛ ನಾಯಕ ಖಮೇನಿ ಅಂತ್ಯಕ್ರಿಯೆ
ಟೆಹ್ರಾನ್: ಸಾವಿನ 4 ತಿಂಗಳ ಬಳಿಕ ಇರಾನ್ ಸರ್ವೋಚ್ಛ ನಾಯಕ, ಧರ್ಮಗುರು ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei ) ಅಂತ್ಯಕ್ರಿಯೆ ನಡೆದಿದೆ. ಹುಟ್ಟೂರು ಮಶ್ಹಾದ್ನ ಪೂಜಾ ಸ್ಥಳವಾದ ಇಮಾಮ್ ರೆಜಾ ದರ್ಗಾದಲ್ಲಿ ಸಮಾಧಿ ಮಾಡಲಾಗಿದೆ. ಇರಾನ್ನಲ್ಲಿ (Iran) ಸಮಾಧಿ ಮಾಡಲಾದ 12 ಶಿಯಾ ಇಮಾಮ್ಗಳಲ್ಲಿ ಇಮಾಮ್ ರೆಜಾ ಅವರು ಏಕಮಾತ್ರರಾಗಿದ್ದಾರೆ. ಮಶ್ಹಾದ್ನಲ್ಲೇ ಸ

ಟೆಹ್ರಾನ್: ಸಾವಿನ 4 ತಿಂಗಳ ಬಳಿಕ ಇರಾನ್ ಸರ್ವೋಚ್ಛ ನಾಯಕ, ಧರ್ಮಗುರು ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei ) ಅಂತ್ಯಕ್ರಿಯೆ ನಡೆದಿದೆ. ಹುಟ್ಟೂರು ಮಶ್ಹಾದ್ನ ಪೂಜಾ ಸ್ಥಳವಾದ ಇಮಾಮ್ ರೆಜಾ ದರ್ಗಾದಲ್ಲಿ ಸಮಾಧಿ ಮಾಡಲಾಗಿದೆ. ಇರಾನ್ನಲ್ಲಿ (Iran) ಸಮಾಧಿ ಮಾಡಲಾದ 12 ಶಿಯಾ ಇಮಾಮ್ಗಳಲ್ಲಿ ಇಮಾಮ್ ರೆಜಾ ಅವರು ಏಕಮಾತ್ರರಾಗಿದ್ದಾರೆ. ಮಶ್ಹಾದ್ನಲ್ಲೇ ಸಮಾಧಿ ಮಾಡುವಂತೆ ಸ್ವತಃ ಖಮೇನಿ ಅವರೇ ಬಯಸಿದ್ದರು. ಇಂದು ಬೆಳಗ್ಗೆ 6 ಗಂಟೆಗೆ ಅಂತ್ಯಕ್ರಿಯೆ ನೆರವೇರಬೇಕಿತ್ತು. ಆದರೆ, ಟೆಹ್ರಾನ್, ಕೋಮ್ ನಗರಗಳಲ್ಲಿ ಅಂತಿಮ ಯಾತ್ರೆ ಬಳಿಕ ಇರಾಕ್ನ (Iraq) ಶಿಯಾ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಿಂದ ಖಮೇನಿ ಪಾರ್ಥಿವ ಶರೀರ ಹೊರಡುವುದು ತಡವಾಗಿತ್ತು. ಇದನ್ನೂ ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಧ್ವಂಸಗೊಂಡ ಖಮೇನಿ ನಿವಾಸದ ಫಸ್ಟ್ ವಿಡಿಯೋ ರಿಲೀಸ್ ಇನ್ನು, ಖಮೇನಿ ಅಂತ್ಯಕ್ರಿಯೆ ದಿನವೇ ಇರಾನ್ ಸರ್ಕಾರವು, ಫೆ.28ರಂದು ಖಮೇನಿ ಅರಮನೆ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ವಿಡಿಯೋವನ್ನು ರಿಲೀಸ್ ಮಾಡಿದೆ. ಸುಮಾರು 35 ಸೆಕೆಂಡ್ಗಳ ವಿಡಿಯೋದಲ್ಲಿ ಟೆಹ್ರಾನ್ನಲ್ಲಿರುವ ಖಮೇನಿ ನಿವಾಸದಲ್ಲಿರುವ ಇಮಾಮ್ ಖೊಮೇನಿ ಹುಸೈನಿಯಾ ಸಭಾಂಗಣ ಸಂಪೂರ್ಣ ಹಾನಿಗೊಳಗಾಗಿದೆ. ಕಟ್ಟಡದ ಭಾಗಗಳು ಕುಸಿದಿರುವುದು, ಕಬ್ಬಿಣದ ಕಂಬಗಳು ಬಾಗಿರುವುದು ಹಾಗೂ ಅವಶೇಷಗಳು ಎಲ್ಲೆಡೆ ಬಿದ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇದೇ ಸಭಾಂಗಣದಲ್ಲಿ ಖಮೇನಿ ಮಹತ್ವದ ಸಭೆಗಳನ್ನು ನಡೆಸುತ್ತಿದ್ದರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು ಎನ್ನಲಾಗುತ್ತಿದೆ. 1989ರಿಂದ ಇರಾನ್ ಅನ್ನು ಆಳುತ್ತಿದ್ದ ಖಮೇನಿ, ಫೆ.28ರಂದು ಸಾವನ್ನಪ್ಪಿದ 4 ತಿಂಗಳ ಬಳಿಕ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು, ಅಮೆರಿಕ ಜೊತೆ ಮಾತುಕತೆಗೆ ವಿರೋಧಿಸಿ ಖಮೇನಿ ಅಂತ್ಯಕ್ರಿಯೆ ವೇಳೆ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಹಾಗೂ ವಿದೇಶಾಂಗ ಸಚಿವ ಅರಾಘ್ಚಿ ಮೇಲೆ ಮೂಲಭೂತವಾದಿಗಳು ಹಲ್ಲೆ ಮಾಡಿದ್ದಾರೆ. ಈ ಮಧ್ಯೆ, ಖಮೇನಿ ಅಂತ್ಯಕ್ರಿಯೆಗೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಶಿಯಾ ಸಮುದಾಯದವರೇ ಹೆಚ್ಚಿರುವ ಅಲೀಪುರದಿಂದ 20-25 ಗ್ರಾಮಸ್ಥರು ಮಶಾದ್ಗೆ ಪ್ರಯಾಣಿಸಿದ್ದಾರೆ. ಅಲ್ಲದೆ, ಖಮೇನಿ ಅಂತ್ಯಕ್ರಿಯೆ ನೇರ ಪ್ರಸಾರ ವೀಕ್ಷಣೆಗೆ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಅಣಕು ಅಂತ್ಯಕ್ರಿಯೆಯನ್ನೂ ನಡೆಸಲಾಯಿತು.ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಗೂ ಮುನ್ನವೇ ಇರಾನ್ ಮೇಲೆ ವಿನಾಶಕಾರಿ ದಾಳಿ – ಪರಿಸ್ಥಿತಿ ಇನ್ನೂ ಕೆಟ್ಟದಾಗಿರಲಿದೆ ಎಂದ ಟ್ರಂಪ್