ಕಾಫಿನಾಡಿನ ಮಲೆನಾಡು ಭಾಗದಲ್ಲಿವೆ 163 ಡೇಂಜರಸ್ ಸ್ಪಾಟ್
ಚಿಕ್ಕಮಗಳೂರು: ಮಳೆಗಾಲ (Mansoon) ಆರಂಭವಾದರೆ ಸಾಕು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಘಟ್ಟ ಪ್ರದೇಶದ ಜನ ಜೀವ ಕೈಯಲ್ಲಿ ಹಿಡಿದು ಬದುಕುತ್ತಾರೆ. ಯಾಕಂದ್ರೆ, ಯಾವಾಗ, ಎಲ್ಲಿ, ಹೇಗೆ ಗುಡ್ಡ ಜರಿಯುತ್ತೋ… ಧರೆ ಕುಸಿಯುತ್ತೋ ಹೇಳೋಕಾಗಲ್ಲ. ಅದರಲ್ಲೂ 2019 ಹಾಗೂ 2023ರಲ್ಲಿ ಆದ ಅನಾಹುತಗಳಿಂದ ಜನ ಇಂದಿಗೂ ಹೊರಬಂದಿಲ್ಲ. ಮನೆ-ಮಠ-ಬದುಕು ಕಟ್ಕೊಂಡಿಲ್ಲ. ಹಾಗಾಗಿ, ಜನ

ಚಿಕ್ಕಮಗಳೂರು: ಮಳೆಗಾಲ (Mansoon) ಆರಂಭವಾದರೆ ಸಾಕು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಘಟ್ಟ ಪ್ರದೇಶದ ಜನ ಜೀವ ಕೈಯಲ್ಲಿ ಹಿಡಿದು ಬದುಕುತ್ತಾರೆ. ಯಾಕಂದ್ರೆ, ಯಾವಾಗ, ಎಲ್ಲಿ, ಹೇಗೆ ಗುಡ್ಡ ಜರಿಯುತ್ತೋ… ಧರೆ ಕುಸಿಯುತ್ತೋ ಹೇಳೋಕಾಗಲ್ಲ. ಅದರಲ್ಲೂ 2019 ಹಾಗೂ 2023ರಲ್ಲಿ ಆದ ಅನಾಹುತಗಳಿಂದ ಜನ ಇಂದಿಗೂ ಹೊರಬಂದಿಲ್ಲ. ಮನೆ-ಮಠ-ಬದುಕು ಕಟ್ಕೊಂಡಿಲ್ಲ. ಹಾಗಾಗಿ, ಜನರ ಜೀವ ಹಾಗೂ ಬದುಕನ್ನ ಉಳಿಸಲು ಜಿಲ್ಲಾಡಳಿತವೇ ಮಲೆನಾಡು ಭಾಗದ 163 ಡೇಂಜರಸ್ ಸ್ಪಾಟ್ಗಳನ್ನ (Dangerous spot) ಗುರುತಿಸಿದೆ. ಮಳೆಗಾಲದಲ್ಲಿ ಕಾಫಿನಾಡು ಅಂತ ಕರೆಸಿಕೊಳ್ಳೋ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮಲೆನಾಡು (Malnad) ಭಾಗ ಅಕ್ಷರಶಃ ಮಳೆನಾಡಾಗಿ ಬದಲಾಗಿರುತ್ತೆ. ನಾಲ್ಕೈದು ತಿಂಗಳ ಮಳೆಗಾಲದಲ್ಲಿ ಎಷ್ಟು ಮನೆಗಳ ಮೇಲೆ ಮರ ಬೀಳುತ್ತೋ… ಎಷ್ಟು ಹಳ್ಳಿಗಳು ತಿಂಗಳುಗಟ್ಟಲೇ ಕತ್ತಲಲ್ಲಿ ಇರುತ್ತೋ… ಎಷ್ಟೋ ಗ್ರಾಮಗಳ ಜನ ಜಲ ದಿಗ್ಭಂದನಕ್ಕೆ ಒಳಗಾಗಿ ಮನೆಯಲ್ಲೇ ಕಾಲ ಕಳೆಯುತ್ತಾರೋ, ಎಲ್ಲೆಲ್ಲಿ ಬೆಟ್ಟ-ಗುಡ್ಡ ಜರಿದು ಜನ ಶತಮಾನಗಳ ಬದುಕನ್ನೇ ಕಳೆದುಕೊಳ್ತಾರೋ ಹೇಳೋಕಾಗಲ್ಲ.ಇದನ್ನೂ ಓದಿ: Wayanad Landslide | 48 ಗಂಟೆಗಳ ಕಾರ್ಯಾಚರಣೆ ಯಶಸ್ವಿ – ರಸ್ತೆ ಮೇಲೆ ಬಿದ್ದಿದ್ದ ಬೆಟ್ಟ, ಬಂಡೆಗಳ ತೆರವು 2019 ಹಾಗೂ 2023ರಲ್ಲಿ ಅಂತಹ ಹತ್ತಾರು ಘಟನೆಗಳು ನಡೆದಿವೆ. ಹಾಗಾಗಿ, 2024-25ನೇ ಇಸವಿಯಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (Geological Survey of India), ಎನ್.ಡಿ.ಆರ್.ಎಫ್. ಹಾಗೂ ಜಿಲ್ಲಾಡಳಿತವೇ ಮಲೆನಾಡಿನಾದ್ಯಂತ ಅಪಾಯದ ಸ್ಥಳಗಳನ್ನ ಪಟ್ಟಿ ಮಾಡಿದೆ. ಅದರಲ್ಲಿ ಬರೋಬ್ಬರಿ 163 ಸ್ಥಳಗಳನ್ನ ಜಿಲ್ಲಾಡಳಿತವೇ ಡೇಂಜರ್ ಸ್ಪಾಟ್ ಎಂದು ಗುರುತಿಸಿದೆ. ಅಲ್ಲಿನ ಹಳ್ಳಿಗಳು, ಜನಸಾಮಾನ್ಯರು ಮತ್ತದೇ ಆತಂಕದಲ್ಲೇ ಬದುಕು ದೂಡುತ್ತಿದ್ದಾರೆ. ಅಬ್ಬರದ ಮಳೆ ಜೊತೆ ರಣ ಗಾಳಿ ಆರಂಭವಾದರೆ ಘಟ್ಟಪ್ರದೇಶದ ಜನರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗುತ್ತೆ.ಇದನ್ನೂ ಓದಿ: ವಯನಾಡಿನ ಎರಡು ಮಹಾ ದುರಂತಗಳ ನಡುವೆ ನಿಂತ ಕನ್ನಡತಿ! ಇನ್ನು 163ರಲ್ಲಿ ಜಿಲ್ಲಾಡಳಿತ ಸುಮಾರು 77 ಸ್ಥಳಗಳನ್ನ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಎಂದು ಪಟ್ಟಿ ಮಾಡಿದೆ. ಅದರಲ್ಲಿ ಜಿಲ್ಲೆಯ ಕಳಸ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳ ಜೊತೆ ಕೆಲ ಪ್ರವಾಸಿ ತಾಣಗಳು ಇವೆ. ಅದರಲ್ಲಿ ಕಳಸ-ಮೂಡಿಗೆರೆ ತಾಲೂಕಿನ ಜಾಗಗಳೇ ಹೆಚ್ಚು. ಯಾಕಂದ್ರೆ ಈ ಎರಡು ತಾಲೂಕುಗಳು ಅಪ್ಪಟ ಮಲೆನಾಡು, ಕಾಡಿನ ಜೊತೆಯೇ ಊರನ್ನ ಹಂಚಿಕೊಂಡಿರೋ ದಾಖಲೆ ಮಳೆ ಬೀಳೋ ತಾಲೂಕುಗಳು. ಹಾಗಾಗಿ, ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಸದಾ ಸನ್ನದ್ಧರಾಗಿ ಇರುವಂತೆ ಸೂಚನೆ ನೀಡಿದೆ.ಇದನ್ನೂ ಓದಿ: ಮೂರನೇ ದಿನ.. ಭರವಸೆಯ ಕೊನೆಯ ಹೆಜ್ಜೆ! ಗಾಳಿ-ಮಳೆ ಹೆಚ್ಚಾಗಿ ಎಂತದ್ದೇ ಸಂದರ್ಭ ಬಂದರೂ ಫೇಸ್ ಮಾಡೋದಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಸದಾ ಕೇಂದ್ರ ಸ್ಥಾನದಲ್ಲೇ ಇದ್ದು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಹೇಗೆ ರಕ್ಷಣೆ ಮಾಡಬೇಕೆಂದು ಮಾಕ್ ಡ್ರಿಲ್ ಕೂಡ ನಡೆಸಿದೆ.ಇದನ್ನೂ ಓದಿ: Wayanad Landslide | ಇಂದು 3 ಮೃತದೇಹ ಪತ್ತೆ – ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆ ಮಲೆನಾಡ ಕೆಲ ಭಾಗದಲ್ಲಿ ಮಳೆಗಾಲ ಆರಂಭವಾದ ಬಳಿಕ ಮುಗಿಯುವವರೆಗೂ ಮಲೆನಾಡ ಘಟ್ಟ ಪ್ರದೇಶದ ಜನರ ಜೀವ-ಮನೆ-ಮಠ ಹಾಗೂ ಬದುಕಿಗೆ ಗ್ಯಾರಂಟಿ ಇಲ್ಲ ಅನ್ನೋದಂತು ಸತ್ಯ. 2019-2023ರಲ್ಲಿ ಶತಮಾನಗಳ ಬದುಕನ್ನೇ ಕಳೆದುಕೊಂಡ ಎಷ್ಟೋ ಕುಟುಂಬಗಳು ಇಂದಿಗೂ ಸರ್ಕಾರಗಳ ನಿರ್ಲಕ್ಷ್ಯಕ್ಕೊಳಗಾಗಿ ನಿರ್ಗತಿಕರಂತೆ ಬದುಕುತ್ತಿದ್ದಾರೆ. ಜಿಲ್ಲಾಡಳಿತವೇನು ಡೇಂಜರ್ ಸ್ಪಾಟ್ ಗುರುತಿಸಿ, ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಆದರೆ, ಪ್ರಕೃತಿ ಮುಂದೆ ಸರ್ಕಾರ-ನರ ಮನುಷ್ಯನ ಆಟ ಏನೂ ನಡೆಯಲ್ಲ. ಆದರೆ, ವರುಣದೇವ ಜನರ ಬದುಕು-ಜೀವವನ್ನ ಕಸಿಯದಿದ್ದರೆ ಸಾಕು.ಇದನ್ನೂ ಓದಿ: ಕೇದಾರನಾಥದಿಂದ ವಯನಾಡಿನವರೆಗೆ – ದುರಂತಗಳ ಪಟ್ಟಿಗೆ ವರ್ಷಕ್ಕೊಂದು ಭೂಕುಸಿತ!