ಧುರಂಧರ್ ಸಿನಿಮಾ ನನ್ನ ದೃಷ್ಟಿಕೋನವನ್ನೇ ಬದಲಿಸಿತು: ನಟ ಸೈಫ್ ಅಲಿ ಖಾನ್
ಜಾಗತಿಕವಾಗಿ ದಾಖಲೆ ಸೃಷ್ಟಿಸಿದ್ದ, ರಣವೀರ್ ಸಿಂಗ್ ನಟನೆಯ ಧುರಂಧರ್ ಸರಣಿಯ ಎರಡು ಸಿನಿಮಾಗಳು ಚಿತ್ರರಂಗದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದವು. ರಣವೀರ್ ನಟನೆ, ಚಿತ್ರಕಥೆ ಸೇರಿದಂತೆ ತಾಂತ್ರಿಕವಾಗಿ ಚಿತ್ರವು ಮನ್ನಣೆ ಪಡೆದುಕೊಂಡಿದೆ.ಇತ್ತೀಚೆಗೆ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಜೊತೆ ಮಾತನಾಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್, ಆದಿತ್ಯ ಧರ್ ನಿರ್ದ

ಜಾಗತಿಕವಾಗಿ ದಾಖಲೆ ಸೃಷ್ಟಿಸಿದ್ದ, ರಣವೀರ್ ಸಿಂಗ್ ನಟನೆಯ ಧುರಂಧರ್ ಸರಣಿಯ ಎರಡು ಸಿನಿಮಾಗಳು ಚಿತ್ರರಂಗದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದವು. ರಣವೀರ್ ನಟನೆ, ಚಿತ್ರಕಥೆ ಸೇರಿದಂತೆ ತಾಂತ್ರಿಕವಾಗಿ ಚಿತ್ರವು ಮನ್ನಣೆ ಪಡೆದುಕೊಂಡಿದೆ.ಇತ್ತೀಚೆಗೆ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಜೊತೆ ಮಾತನಾಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್, ಆದಿತ್ಯ ಧರ್ ನಿರ್ದೇಶನದ ಧುರಂಧರ್, ಸಿನಿಮಾ ನೋಡುವ ದೃಷ್ಟಿಕೋನವನ್ನು ಹೇಗೆ ಬದಲಾಯಿಸಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.ಸಂವಾದದಲ್ಲಿ ನೀವು ಹೆಚ್ಚು ವೈವಿಧ್ಯಮಯವಾದ ಚಿತ್ರಕಥೆಗೆ ಆದ್ಯತೆ ನೀಡುತ್ತೀರಾ? ಎಂದು ಕೇಳಿದ ಪ್ರಶ್ನೆ ಉತ್ತರಿಸಿರುವ ಅಲಿ ಖಾನ್, ಧುರಂಧರ್ ಸಿನಿಮಾವನ್ನು ಉದಾಹರಣೆ ನೀಡಿದ್ದಾರೆ. ‘ಧುರಂಧರ್ಗಿಂತ ಮೊದಲು ಸಿನಿಮಾದ ದೃಷ್ಟಿಕೋನ ಬೇರೆಯೇ ಇತ್ತು. ಈ ಸಿನಿಮಾ ನೋಡಿದ ಮೇಲೆ ಅದು ಬದಲಾಗಿದೆ. ಪ್ರತಿ ಚಿತ್ರಕ್ಕೂ ಹೊಸ ಆಲ್ಬಮ್ ರಚಿಸುವ ಬದಲು ಅದ್ಭುತವಾದ ಸಂಗೀತವನ್ನು ರಚಿಸುವುದು ಉತ್ತಮ’ ಎಂದು ಹೇಳಿಕೊಂಡಿದ್ದಾರೆ.ಧುರಂಧರ್ ಸಿನಿಮಾದಲ್ಲಿರುವ ರೀಮಿಕ್ಸ್ ಮತ್ತು ಹಾಡುಗಳಿಗೆ ಸೈಫ್ ಅಲಿ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ನಾನು ಸಿನಿಮಾದ ಸಂಗೀತದ ಬಗ್ಗೆ ಮಾತನಾಡುತ್ತಿದ್ದೇನೆ. ಸಂಗೀತ ಅದ್ಭುತವಾಗಿತ್ತು. ಐಟಂ ಹಾಡುಗಳನ್ನು ಸುಂದರವಾದ ನಾಯಕಿ ಪಾತ್ರದೊಂದಿಗೆ ಚಿತ್ರೀಕರಿಸುವ ಬದಲು ಸರಳವಾಗಿಯೇ ಮಾಡಬಹುದು ಎಂದು ತಿಳಿಯಿತು’ ಎಂದಿದ್ದಾರೆ. ಸದ್ಯ ಸೈಫ್ ಅಲಿ ಖಾನ್ ಅವರು ಪ್ರಿಯದರ್ಶನ್ ನಿರ್ದೇಶನದ ‘ಹೈವಾನ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದು, ಮಲಯಾಳಂ ಚಿತ್ರ ‘ಒಪ್ಪಮ್’ನ ರಿಮೇಕ್ ಆಗಿದೆ. 2026ರ ಸೆಪ್ಟೆಂಬರ್ 11ರಂದು ಚಿತ್ರವು ಬಿಡುಗಡೆಯಾಗುವ ನಿರೀಕ್ಷೆ ಇದೆ.