ವಿಜಯ್ ನಟನೆಯ 'ಜನ ನಾಯಗನ್’ ಚಿತ್ರಕ್ಕೆ 'A' ಪ್ರಮಾಣಪತ್ರ: ಬಿಡುಗಡೆ ಯಾವಾಗ?
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.ಎಚ್.ವಿನೋತ್ ನಿರ್ದೇಶಿಸಿ, ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಸಿನಿಮಾ, ಬರೋಬ್ಬರಿ ಏಳು ತಿಂಗಳ ಸುದೀರ್ಘ ಹೋರಾಟದ ಬಳಿಕ ಪ್ರಮಾಣಪತ್ರ ಪಡೆದುಕೊಂಡಿದೆ. ಜುಲೈ 24 ರಿಂದ ತ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.ಎಚ್.ವಿನೋತ್ ನಿರ್ದೇಶಿಸಿ, ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಸಿನಿಮಾ, ಬರೋಬ್ಬರಿ ಏಳು ತಿಂಗಳ ಸುದೀರ್ಘ ಹೋರಾಟದ ಬಳಿಕ ಪ್ರಮಾಣಪತ್ರ ಪಡೆದುಕೊಂಡಿದೆ. ಜುಲೈ 24 ರಿಂದ ತಮಿಳುನಾಡಿನ ಸುಮಾರು 1,000 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎಂದು ತಮಿಳುನಾಡು ಚಲನಚಿತ್ರ ವಿತರಕರ ಸಂಘದ ಮೂಲಗಳು ಹೇಳಿವೆ.ನಟ ವಿಜಯ್ ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸಿರುವ ಕೊನೆಯ ಸಿನಿಮಾ ಇದಾಗಿದೆ ಎನ್ನಲಾಗಿದೆ. ಬೆಂಗಳೂರು ಮೂಲದ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.Jana Nayagan Movie: ‘ಜನ ನಾಯಗನ್’ ಸೆನ್ಸಾರ್ ಮತ್ತಷ್ಟು ವಿಳಂಬ ಕಾನೂನು ಹೋರಾಟ:‘ಜನ ನಾಯಗನ್’ ಚಿತ್ರಕ್ಕೆ ಒಂದರ ಹಿಂದೊಂದು ಸಂಕಷ್ಟ ಎದುರಾಗುತ್ತಲೇ ಇದ್ದವು. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಸೇರಿದಂತೆ, ಸುಮಾರು ಐದು ನಿಮಿಷಗಳ ತುಣುಕು ಸೋರಿಕೆಯಾಗಿತ್ತು. ಕಾಣದ ಕೈಗಳ ಈ ಕೃತ್ಯಕ್ಕೆ ವಿಜಯ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ 2026ರ ಜನವರಿ 9 ರಂದು ಪೊಂಗಲ್ ಹಬ್ಬದ ಮುನ್ನ ದಿನವೇ ತೆರೆ ಕಾಣಬೇಕಿತ್ತು. ಇದಕ್ಕಾಗಿ 2025ರ ಡಿಸೆಂಬರ್ 19ರಂದು ಕೆವಿಎನ್ ಪ್ರೊಡಕ್ಷನ್ಸ್ ಚಿತ್ರದ ಸೆನ್ಸಾರ್ಗೆ ಅರ್ಜಿ ಸಲ್ಲಿಸಿತ್ತು. ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿತ್ತು. ವರದಿಗಳ ಪ್ರಕಾರ, ಸೆನ್ಸಾರ್ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಮಾಡಿದ ನಂತರ ಚಿತ್ರಕ್ಕೆ ಮೊದಲು 'U/A' ಸರ್ಟಿಫಿಕೇಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಸಮಿತಿಯ ಒಬ್ಬ ಸದಸ್ಯರು ಆಕ್ಷೇಪಣೆ ಎತ್ತಿ, ಚಿತ್ರದ ಕೆಲವು ಭಾಗಗಳು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ಹೇಳಿದ್ದರಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು.‘ಜನ ನಾಯಗನ್’ಗೆ ತಕ್ಷಣ ಸೆನ್ಸಾರ್ ಪ್ರಮಾಣಪತ್ರ ನೀಡಬೇಕು ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್ಸಿ) ಏಕಸದಸ್ಯ ಪೀಠ ನಿರ್ದೇಶನ ನೀಡಿತ್ತು. ಈ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ಜ. 9ರಂದು ತಡೆ ನೀಡಿತ್ತು.ಮದ್ರಾಸ್ ಹೈಕೋರ್ಟ್ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕೆವಿಎನ್ ಪ್ರೊಡಕ್ಷನ್ಸ್, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನಿರಾಕರಣೆ ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ಗೇ ಮರಳುವಂತೆ ಚಿತ್ರದ ನಿರ್ಮಾಪಕರಿಗೆ ಸೂಚಿಸಿತ್ತು.ಬಿಡುಗಡೆಗೂ ಮೊದಲೇ ಸೋರಿಕೆ ‘ಜನ ನಾಯಗನ್’ ಬಿಡುಗಡೆಗೂ ಮೊದಲೇ ಸೋರಿಕೆಯಾಗಿತ್ತು. ಕೊಯಂಬತ್ತೂರಿನ ಸ್ಥಳೀಯ ಕೇಬಲ್ ವಾಹಿನಿಯೊಂದು ಚಿತ್ರವನ್ನು ಬಿತ್ತರಿಸಿ ರಾದ್ದಾಂತವನ್ನೇ ಸೃಷ್ಟಿಸಿತ್ತು. ಸೋರಿಕೆಯಾಗಿದ್ದ ಈ ಚಿತ್ರವನ್ನು ಬರೋಬ್ಬರಿ 1.2 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್ಗೆ ತಿಳಿಸಿದ್ದರು. ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿತ್ತು.ದಳಪತಿ ವಿಜಯ್ ‘ಜನ ನಾಯಗನ್’ ಸಿನಿಮಾ ಲೀಕ್: 6 ಆರೋಪಿಗಳ ಬಂಧನ