7 ಜಿಲ್ಲೆಯ 10 ಅಧಿಕಾರಿಗಳಿಗೆ ಸೇರಿದ 54 ಕಡೆ ಲೋಕಾ ದಾಳಿ – ಭ್ರಷ್ಟರ ಬಣ್ಣ ಬಯಲು
ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿ ಮುಕ್ತಾಯವಾಗಿದ್ದು, ದಾಳಿ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ, ಚಿನ್ನ, ನಗದು ಪತ್ತೆಯಾಗಿದೆ. 7 ಜಿಲ್ಲೆಯ 10 ಅಧಿಕಾರಿಗಳಿಗೆ ಸೇರಿದಂತೆ 54 ಕಡೆ ನಡೆದಿದ್ದ ದಾಳಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾದ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ. 1. ನರೇಂದ್ರ ಕುಮಾರ್ ಎಂ, ಸಹಾಯಕ ಅಭಿಯಂತರರು, ಲೋಕೋಪಯೋಗ

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿ ಮುಕ್ತಾಯವಾಗಿದ್ದು, ದಾಳಿ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ, ಚಿನ್ನ, ನಗದು ಪತ್ತೆಯಾಗಿದೆ. 7 ಜಿಲ್ಲೆಯ 10 ಅಧಿಕಾರಿಗಳಿಗೆ ಸೇರಿದಂತೆ 54 ಕಡೆ ನಡೆದಿದ್ದ ದಾಳಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾದ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ. 1. ನರೇಂದ್ರ ಕುಮಾರ್ ಎಂ, ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿಭಾಗ-1, ಕೆ.ಆರ್. ಸರ್ಕಲ್, ಬೆಂಗಳೂರು ಒಟ್ಟು ಆಸ್ತಿ: 8.51 ಕೋಟಿ ರೂ. (ಸ್ಥಿರ ಆಸ್ತಿ 5.95 ಕೋಟಿ ರೂ. + ಚರಾಸ್ತಿ ₹2.56 ಕೋಟಿ ರೂ.) ಅಸಮತೋಲನ ಆಸ್ತಿ: 5.75 ಕೋಟಿ ಚಿನ್ನ: 1.20 ಕೋಟಿ ರೂ. ನಗದು: 3.10 ಲಕ್ಷ ರೂ. ಕೃಷಿ ಜಮೀನು: 4 ಎಕರೆ ವಾಹನ ಮೌಲ್ಯ: 16.60 ಲಕ್ಷ ರೂ. ಮನೆಗಳು: 3 ಬ್ಯಾಂಕ್ ಠೇವಣಿ: 89.16 ಲಕ್ಷ ರೂ. ಇತರೆ ವಸ್ತುಗಳು: 27.46 ಲಕ್ಷ ರೂ. 2. ಪ್ರವೀಣ್ ಶ್ರೀಹರಿ ಬಿ, ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್., ಬೆಂಗಳೂರು. ಒಟ್ಟು ಆಸ್ತಿ: 5.88 ಕೋಟಿ ರೂ. (ಸ್ಥಿರ ಆಸ್ತಿ 60 ಕೋಟಿ ರೂ. + ಚರಾಸ್ತಿ 1.28 ಕೋಟಿ ರೂ.) ಅಸಮತೋಲನ ಆಸ್ತಿ: 4.33 ಕೋಟಿ ರೂ. ಚಿನ್ನ: 11.08 ಲಕ್ಷ ರೂ. ನಗದು: 2.35 ಲಕ್ಷ ರೂ. ಸೈಟ್: 2 ನಿವೇಶನಗಳು ವಾಣಿಜ್ಯ ಕಟ್ಟಡ: ಇಲ್ಲ ಕೃಷಿ ಜಮೀನು: 11.7 ಎಕರೆ ವಾಹನಗಳು: 1.15 ಕೋಟಿ ರೂ. ಮನೆಗಳು: 2 3. ಪುಷ್ಪಾ ಡಿ.ಆರ್, ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಮಾರಾಟ ಮಹಾಮಂಡಳಿ, ಕೇಂದ್ರ ಕಚೇರಿ, ಬೆಂಗಳೂರು. ಒಟ್ಟು ಆಸ್ತಿ: 8.16 ಕೋಟಿ ರೂ. (ಸ್ಥಿರ ಆಸ್ತಿ 7.38 ಕೋಟಿ ರೂ. + ಚರಾಸ್ತಿ 78.22 ಲಕ್ಷ ರೂ.) ಅಸಮತೋಲನ ಆಸ್ತಿ: 5.93 ಕೋಟಿ ರೂ. ಚಿನ್ನ: 35 ಲಕ್ಷ ರೂ. ನಗದು: 72,000 ರೂ. ಸೈಟ್: 1 ನಿವೇಶನ ವಾಣಿಜ್ಯ ಕಟ್ಟಡ: 1 ವಾಣಿಜ್ಯ ಸಂಕೀರ್ಣ ಕೃಷಿ ಜಮೀನು: 20 ಗುಂಟೆ ವಾಹನಗಳು: 42.50 ಲಕ್ಷ ರೂ. ಮನೆಗಳು: 3 4. ದುಗ್ಗಪ್ಪ ಬಿ.ಹೆಚ್, ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಒಟ್ಟು ಆಸ್ತಿ: 1.95 ಕೋಟಿ ರೂ. (ಸ್ಥಿರ ಆಸ್ತಿ 1.52 ಕೋಟಿ ರೂ. + ಚರಾಸ್ತಿ 43.51 ಲಕ್ಷ ರೂ.) ಅಸಮತೋಲನ ಆಸ್ತಿ: 1.95 ಕೋಟಿ ರೂ. ಚಿನ್ನ: 8.92 ಲಕ್ಷ ರೂ. ನಗದು: 1.84 ಲಕ್ಷ ರೂ. ಸೈಟ್: 3 ನಿವೇಶನಗಳು ವಾಣಿಜ್ಯ ಕಟ್ಟಡ: ಇಲ್ಲ ಕೃಷಿ ಜಮೀನು: 3 ಎಕರೆ 30 ಗುಂಟೆ ವಾಹನಗಳು: 22 ಲಕ್ಷ ರೂ. ಮನೆಗಳು: 1 5. ಶಂಕರ ಎಂ, ಸಹ ಪ್ರಾಧ್ಯಾಪಕರು ತೋಟಗಾರಿಕೆ ಇಲಾಖೆ, ಚಿತ್ರದುರ್ಗ ಒಟ್ಟು ಆಸ್ತಿ: 3.28 ಕೋಟಿ ರೂ. (ಸ್ಥಿರ ಆಸ್ತಿ 1.71 ಕೋಟಿ ರೂ. + ಚರಾಸ್ತಿ 1.56 ಕೋಟಿ ರೂ.) ಅಸಮತೋಲನ ಆಸ್ತಿ: ₹1.88 ಕೋಟಿ ರೂ. ಚಿನ್ನ: ₹.26 ಕೋಟಿ ರೂ. ನಗದು: 9,000 ರೂ. ಸೈಟ್: 1 ನಿವೇಶನ ವಾಣಿಜ್ಯ ಕಟ್ಟಡ: ಇಲ್ಲ ಕೃಷಿ ಜಮೀನು: 8 ಎಕರೆ 26 ಗುಂಟೆ ವಾಹನಗಳು: ₹27.80 ಲಕ್ಷ ರೂ. ಮನೆಗಳು: 2 6.ಅಮೃತರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿ), ಜೆಎಸ್ಎಲ್ಎಂ, ಕಲಬುರಗಿ ಒಟ್ಟು ಆಸ್ತಿ: 3.98 ಕೋಟಿ ರೂ. (ಸ್ಥಿರ ಆಸ್ತಿ 2.84 ಕೋಟಿ ರೂ. + ಚರಾಸ್ತಿ 1.15 ಕೋಟಿ ರೂ.) ಅಸಮತೋಲನ ಆಸ್ತಿ: 2.65 ಕೋಟಿ ರೂ. ಚಿನ್ನ: 38.53 ಲಕ್ಷ ರೂ. ನಗದು: 68,027 ರೂ. ಸೈಟ್: 3 ನಿವೇಶನಗಳು ವಾಣಿಜ್ಯ ಕಟ್ಟಡ: 12 ವಾಣಿಜ್ಯ ಮಳಿಗೆ ಕೃಷಿ ಜಮೀನು: 35.80 ಲಕ್ಷ ಮೌಲ್ಯದ ಕೃಷಿ ಜಮೀನು ವಾಹನಗಳು: 10.52 ಲಕ್ಷ ರೂ. ಮನೆಗಳು: 2 ಫ್ಲಾಟ್: 1 7. ತಿಮ್ಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಂಬಳಗೂಡು ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ ಒಟ್ಟು ಆಸ್ತಿ: 3.72 ಕೋಟಿ ರೂ. (ಸ್ಥಿರ ಆಸ್ತಿ ₹2.53 ಕೋಟಿ ರೂ. + ಚರಾಸ್ತಿ ₹1.19 ಕೋಟಿ ರೂ. ) ಅಸಮತೋಲನ ಆಸ್ತಿ: 3.51 ಕೋಟಿ ರೂ. ಚಿನ್ನ: 84 ಲಕ್ಷ ರೂ. ಸೈಟ್: 2 ನಿವೇಶನಗಳು ವಾಣಿಜ್ಯ ಕಟ್ಟಡ: ಇಲ್ಲ ಕೃಷಿ ಜಮೀನು: 2 ಎಕರೆ 15 ಗುಂಟೆ ವಾಹನಗಳು: 35.70 ಲಕ್ಷ ರೂ. ಮನೆಗಳು: 4 8. ಕಿರಣ್ ಅಂಗಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನಾ ಕೇಂದ್ರ, ಅರಣ್ಯ ಇಲಾಖೆ, ಅಂಕೋಲ, ಶಿವಮೊಗ್ಗ ಒಟ್ಟು ಆಸ್ತಿ: 1.95 ಕೋಟಿ ರೂ. (ಸ್ಥಿರ ಆಸ್ತಿ 1.53 ಕೋಟಿ ರೂ. + ಚರಾಸ್ತಿ 42.36 ಲಕ್ಷ ರೂ.) ಅಸಮತೋಲನ ಆಸ್ತಿ: 1.95 ಕೋಟಿ ರೂ. ಚಿನ್ನ: 15.45 ಲಕ್ಷ ರೂ. ನಗದು: 13,044 ರೂ. ಕೃಷಿ ಜಮೀನು: 1 ಎಕರೆ ವಾಹನಗಳು: 2.84 ಲಕ್ಷ ರೂ. ಮನೆಗಳು: 1 = 9.ಬಸನಗೌಡ ಪಾಟೀಲ್, ಕಾರ್ಯಪಾಲಕ ಅಭಿಯಂತರರು, ಕೆ.ಬಿ.ಜೆ.ಎನ್.ಎಲ್., ಎನ್.ಆರ್.ಬಿ.ಸಿ. ಉಪ ವಿಭಾಗ-4, ದೇವದುರ್ಗ, ರಾಯಚೂರು ಒಟ್ಟು ಆಸ್ತಿ: 9.44 ಕೋಟಿ ರೂ. (ಸ್ಥಿರ ಆಸ್ತಿ 8.28 ಕೋಟಿ ರೂ. + ಚರಾಸ್ತಿ 1.16 ಕೋಟಿ ರೂ. ) ಅಸಮತೋಲನ ಆಸ್ತಿ: 6.12 ಕೋಟಿ ರೂ. ಚಿನ್ನ: 1.29 ಕೋಟಿ ರೂ. ನಗದು: 1.15 ಲಕ್ಷ ರೂ. ಸೈಟ್: 5 ನಿವೇಶನಗಳು ಕೃಷಿ ಜಮೀನು: 1 ಎಕರೆ ವಾಹನಗಳು: 10.50 ಲಕ್ಷ ರೂ. ಮನೆಗಳು: 4 10. ಮಧುಸೂದನ್ ಎನ್., ಸಹಾಯಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ತಿಪಟೂರು ಉಪ ವಿಭಾಗ, ತುಮಕೂರು ಒಟ್ಟು ಆಸ್ತಿ: 2.95 ಕೋಟಿ ರೂ. (ಸ್ಥಿರ ಆಸ್ತಿ 1.63 ಕೋಟಿ ರೂ. + ಚರಾಸ್ತಿ 1.33 ಕೋಟಿ ರೂ. ) ಅಸಮತೋಲನ ಆಸ್ತಿ: 2.10 ಕೋಟಿ ರೂ. ಚಿನ್ನ: 1.94 ಕೋಟಿ ರೂ. ನಗದು: 11.94 ಲಕ್ಷ ರೂ. ಸೈಟ್: 3 ನಿವೇಶನಗಳು ವಾಹನಗಳು: 27 ಲಕ್ಷ ರೂ. ಮನೆಗಳು: 1