ಕನ್ನಡ ನಾಡಿನ ಸಂಗೀತ ಪರಂಪರೆಯನ್ನು ದಾಖಲಿಸುವ ವಿಶ್ವಕೋಶ ಶೀಘ್ರದಲ್ಲೇ ಪ್ರಕಟ
ಹೊಸಪೇಟೆ (ವಿಜಯನಗರ): ಕನ್ನಡ ನಾಡಿನ ಸಂಗೀತ ಪರಂಪರೆಯನ್ನು ದಾಖಲಿಸುವ, ದೇಶದ ಪ್ರಥಮ ಕನ್ನಡ ಸಂಗೀತ ವಿಶ್ವಕೋಶ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಹೇಳಿದರು.ವಿಶ್ವವಿದ್ಯಾಲಯದ ಬೆಂಗಳೂರಿನ ಪ್ರಾದೇಶಿಕ ಕಚೇರಿ ಹಾಗೂ ಪುಸ್ತಕ ಮಾರಾಟ ಮಳಿಗೆಯಲ್ಲಿ ಗುರುವಾರ ನಡೆದ ಕನ್ನಡ ಸಂಗೀತ ವಿಶ್ವಕೋಶದ ಕರಡು ಪರ
ಹೊಸಪೇಟೆ (ವಿಜಯನಗರ): ಕನ್ನಡ ನಾಡಿನ ಸಂಗೀತ ಪರಂಪರೆಯನ್ನು ದಾಖಲಿಸುವ, ದೇಶದ ಪ್ರಥಮ ಕನ್ನಡ ಸಂಗೀತ ವಿಶ್ವಕೋಶ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಹೇಳಿದರು.ವಿಶ್ವವಿದ್ಯಾಲಯದ ಬೆಂಗಳೂರಿನ ಪ್ರಾದೇಶಿಕ ಕಚೇರಿ ಹಾಗೂ ಪುಸ್ತಕ ಮಾರಾಟ ಮಳಿಗೆಯಲ್ಲಿ ಗುರುವಾರ ನಡೆದ ಕನ್ನಡ ಸಂಗೀತ ವಿಶ್ವಕೋಶದ ಕರಡು ಪರಿಶೀಲನಾ ಮತ್ತು ಸಂಪಾದನ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.ಕನ್ನಡದ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಗೀತ ಪರಂಪರೆಯ ಮಾಹಿತಿಯನ್ನು ಸಮಗ್ರವಾಗಿ ಸಂಗ್ರಹಿಸಿ, ಪರಿಷ್ಕರಿಸಿ ವಿಶ್ವಕೋಶ ರೂಪದಲ್ಲಿ ಸಿದ್ಧಪಡಿಸಲಾಗಿದೆ. ಸಂಗೀತಕ್ಕೆ ಮೀಸಲಾದ ಇಂತಹ ವಿಶ್ವಕೋಶವು ಭಾರತದಲ್ಲೇ ಮೊದಲ ಬಾರಿಗೆ ಪ್ರಕಟವಾಗುತ್ತಿರುವುದು ಕನ್ನಡ ಭಾಷೆ ಹಾಗೂ ಸಂಗೀತ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.ಸಂಗೀತ ವಿಶ್ವಕೋಶದ ಮುಖ್ಯ ಸಂಪಾದಕರಾದ ಆರ್.ಎಸ್. ನಂದಕುಮಾರ್ ಅವರು ವಿಶ್ವಕೋಶದ ಕರಡು ಪ್ರತಿಯನ್ನು ಕುಲಪತಿ ಅವರಿಗೆ ನೀಡಿದರು.ಸಭೆಯಲ್ಲಿ ಸಂಪಾದನಾ ಮಂಡಳಿ ಸದಸ್ಯರಾದ ಎಸ್.ವಿ. ಮಠಪತಿ, ರೋಹಿಣಿ ಸುಬ್ಬರತ್ನ, ನಾಗರಾಜ್ರಾವ್ ಹವಾಲ್ದಾರ್, ಕೃಷ್ಣಮೂರ್ತಿ ಭಟ್ಟ, ಸಂಗೀತ ಮತ್ತು ನೃತ್ಯಕಲಾ ವಿಭಾಗದ ಮುಖ್ಯಸ್ಥ ಪ್ರೊ.ವೀರೇಶ ಬಡಿಗೇರ, ಪ್ರಸಾರಾಂಗದ ಪ್ರಕಟಣಾ ಸಹಾಯಕರಾದ ಎಸ್. ಮೋಹನ್ ಇದ್ದರು.