ಚಾರುಕೇಶ ರಾಜ ಗಣೇಶ್
ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬಿ.ಧನಂಜಯ್ ಆ್ಯಕ್ಷನ್ ಕಟ್ ಹೇಳಿರುವ, ಗಣೇಶ್ ನಟನೆಯ ‘ಪಿನಾಕ’ ಸಿನಿಮಾ ಅ.2ರಂದು ಬಿಡುಗಡೆಯಾಗುತ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ನಿರ್ಮಿಸಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್, ‘ಇದೊಂದು ಫಿಕ್ಷನ್

ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬಿ.ಧನಂಜಯ್ ಆ್ಯಕ್ಷನ್ ಕಟ್ ಹೇಳಿರುವ, ಗಣೇಶ್ ನಟನೆಯ ‘ಪಿನಾಕ’ ಸಿನಿಮಾ ಅ.2ರಂದು ಬಿಡುಗಡೆಯಾಗುತ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ನಿರ್ಮಿಸಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್, ‘ಇದೊಂದು ಫಿಕ್ಷನ್ ಫ್ಯಾಂಟಸಿ ಜಾನರ್ನಲ್ಲಿರುವ ಸಿನಿಮಾ. ಸುಮಾರು 45 ನಿಮಿಷ ಭೂತಕಾಲದ ಕಥೆ ಇದರಲ್ಲಿದೆ. ‘ಕಾರ್ತಿಕೇಯ–2’ ಚಿತ್ರವನ್ನು ನೋಡಿದ ಮಕ್ಕಳು ನೀವು ಈ ರೀತಿಯ ಚಿತ್ರದಲ್ಲಿ ಅಭಿನಯಿಸಬೇಕೆಂದು ಹೇಳುತ್ತಿದ್ದರು. ನಾನು ಶಿವ ಭಕ್ತ. ‘ಪಿನಾಕ’ವೂ ಶಿವನ ಕುರಿತಾದ ಚಿತ್ರ. ಈ ಕಥೆ ಬಹಳ ಬಜೆಟ್ ಕೇಳುತ್ತದೆ. ನಿಮಗೆ ಹೊರೆಯಾಗಬಾರದು ಎಂದು ನಿರ್ಮಾಪಕರಿಗೆ ಹೇಳಿದ್ದೆ. ಅವರು ಕಥೆ ಕೇಳುವ ಬಜೆಟ್ ಹಾಕಲು ಸಿದ್ಧರಿದ್ದರು. ಕ್ಲೈಮ್ಯಾಕ್ಸ್ ಅಂತೂ ನಾನು ಈವರೆಗೂ ಯಾವ ಚಿತ್ರದಲ್ಲೂ ನೋಡಿಲ್ಲ. 12 ನಿಮಿಷಗಳ ಕ್ಲೈಮ್ಯಾಕ್ಸ್ಗೆ 22 ದಿನಗಳ ಚಿತ್ರೀಕರಣ ಮಾಡಿದ್ದೇವೆ. ‘ಪಿನಾಕ’ ಚಾರುಕೇಶ ರಾಜನ ಕಥೆ’ ಎಂದರು. ‘ನಾನು ಹಲವು ವರ್ಷಗಳಿಂದ ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿದ್ದೇನೆ. ಈ ಸಿನಿಮಾ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದೇನೆ. ಟೀಸರ್ನಲ್ಲಿ ಹೆಚ್ಚು ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಇನ್ನೂ ಬಹಳ ಕಥೆ ಇದೆ. ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ’ ಎಂದರು ಧನಂಜಯ್. ಚಿತ್ರದಲ್ಲಿ ನಾಯಕಿಯಾಗಿ ಅರ್ಚನಾ ಅಯ್ಯರ್ ನಟಿಸಿದ್ದು, ರಂಗಾಯಣ ರಘು, ಸಾಧು ಕೋಕಿಲ, ರೋಬೊ ಗಣೇಶ್ ಹಾಗೂ ರವೀಂದ್ರನಾಥ್ ತಾರಾಬಳಗದಲ್ಲಿದ್ದಾರೆ. ಗೌರಾ ಹರಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ರಂಗಾಯಣ ರಘು, ನಟಗಣಪನ ದಾಖಲೆಯನ್ನು ಗಣಪನೇ ಮುರಿಯಬೇಕು. ಗಣೇಶ್ ಪುರಾಣದ ಪಾತ್ರಗಳಿಗೆ ಹೆಜ್ಜೆ ಇಟ್ಟಿರುವುದು ಒಳ್ಳೆಯದು. ನಿರ್ಮಾಪಕರು ಕನ್ನಡದಲ್ಲೇ ಇದ್ದುಕೊಂಡು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿ.ಗಣೇಶ್, ನಟ‘ಪಿನಾಕ’ ಹಾಗೂ ‘ಬೃಂದಾವಿಹಾರಿ’ ಸಿನಿಮಾಗಳು ಅಕ್ಟೋಬರ್ನಲ್ಲೇ ಬರುತ್ತಿವೆ. ಯಾವ ಪ್ಯಾನ್ ಇಂಡಿಯಾ ಬಂದರೂ, ನಾನು ಕನ್ನಡದ ನಟ. ಕನ್ನಡದಲ್ಲೇ ‘ಪಿನಾಕ’ ಬಿಡುಗಡೆಯಾಗಲಿದ್ದು, ನಂತರ ಬೇರೆ ಭಾಷೆಗಳಿಗೆ ಸಿನಿಮಾ ಹೋಗಲಿದೆ.