ಯೂಸರ್ನೇಮ್ ಸೌಲಭ್ಯ ನೋಟಿಸ್ಗೆ ಉತ್ತರಿಸಿದ ವಾಟ್ಸ್ಆ್ಯಪ್:ಕೇಂದ್ರದಿಂದ ಪರಿಶೀಲನೆ
ನವದೆಹಲಿ: ತಂತ್ರಜ್ಞಾನ ದೈತ್ಯ ಮೆಟಾ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್, ತನ್ನ ನೂತನ 'ಯೂಸರ್ನೇಮ್' ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್ಗೆ ಗುರುವಾರ ಅಧಿಕೃತವಾಗಿ ಉತ್ತರಿಸಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ (ಐ.ಟಿ) ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಐ.ಟಿ ಸಚಿ

ನವದೆಹಲಿ: ತಂತ್ರಜ್ಞಾನ ದೈತ್ಯ ಮೆಟಾ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್, ತನ್ನ ನೂತನ 'ಯೂಸರ್ನೇಮ್' ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್ಗೆ ಗುರುವಾರ ಅಧಿಕೃತವಾಗಿ ಉತ್ತರಿಸಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ (ಐ.ಟಿ) ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಐ.ಟಿ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್, 'ವಾಟ್ಸ್ಆ್ಯಪ್ನಿಂದ ಉತ್ತರ ಬಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ. ಇದೇ ವಿಷಯವಾಗಿ ಟೆಲಿಗ್ರಾಮ್ ಮತ್ತು ಸಿಗ್ನಲ್ ಆ್ಯಪ್ಗಳಿಗೂ ನೋಟಿಸ್ ನೀಡಲಾಗಿದ್ದು, ಉತ್ತರಿಸಲು ಕಾಲಾವಕಾಶ ನೀಡಲಾಗಿದೆ' ಎಂದು ತಿಳಿಸಿದ್ದಾರೆ.ವಾಟ್ಸ್ಆ್ಯಪ್ ಪರಿಚಯಿಸಲು ಉದ್ದೇಶಿಸಿರುವ ಯೂಸರ್ನೇಮ್ ಸೌಲಭ್ಯವು ಆನ್ಲೈನ್ ವಂಚನೆ, ಡಿಜಿಟಲ್ ಬಂಧನ, ದುರ್ಬಳಕೆ ಸೇರಿದಂತೆ ಸೈಬರ್ ವಂಚನೆಯ ಕೃತ್ಯ ಗಣನೀಯವಾಗಿ ಹೆಚ್ಚಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರವು ಕಳೆದ ವಾರ ಮೆಟಾ ಸಂಸ್ಥೆಗೆ ನೋಟಿಸ್ ನೀಡಿತ್ತು. ಬಳಿಕ ಉತ್ತರ ಒದಗಿಸಲು ಮೆಟಾ ಕಂಪನಿಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಸಮಯವನ್ನು ನೀಡಿತ್ತು.ಯೂಸರ್ನೇಮ್ ಸೌಲಭ್ಯವು ಬಳಕೆದಾರರಿಗೆ ತಮ್ಮ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬಹಿರಂಗಪಡಿಸದೆಯೇ ಇತರರ ಜೊತೆ ಸಂವಹನ ನಡೆಸುವ ಅವಕಾಶ ಕಲ್ಪಿಸುತ್ತದೆ. ಸರ್ಕಾರದೊಂದಿಗೆ ನಡೆಸುವ ಸಮಾಲೋಚನೆಗಳು ತೃಪ್ತಿಕರವಾಗುವವರೆಗೂ ಈ ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆ ಮಾಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಈ ನಡುವೆ ಯೂಸರ್ನೇಮ್ ಸೌಲಭ್ಯಕ್ಕೆ ಸಂಬಂಧಿಸಿದಂತೆ ಬಳಕೆದಾರರಿಗೆ ವಿವರವಾದ ಪ್ರಶ್ನೋತ್ತರಗಳನ್ನು ವಾಟ್ಸ್ಆ್ಯಪ್ ಪ್ರಕಟಿಸಿತ್ತು. ಕಳೆದ ಶುಕ್ರವಾರ ಐ.ಟಿ ಸಚಿವಾಲಯದ ಅಧಿಕಾರಿಗಳನ್ನು ವಾಟ್ಸ್ಆ್ಯಪ್ನ ತಂಡ ಭೇಟಿ ಮಾಡಿತ್ತು. ಹೆಸರಾಂತ ವ್ಯಕ್ತಿಗಳ ಖಾತೆಗಳ ಸುರಕ್ಷತೆ, ದುರುಪಯೋಗ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿತ್ತು. ವಂಚನೆ ಆತಂಕ ನಡುವೆ 'ಯೂಸರ್ನೇಮ್' ಸೌಲಭ್ಯ ಕುರಿತು ವಾಟ್ಸ್ಆ್ಯಪ್ FAQ ಬಿಡುಗಡೆ‘ವಾಟ್ಸ್ ಆ್ಯಪ್ ಯೂನಿವರ್ಸಿಟಿ‘ ಬಿಟ್ಟು ಉಳಿದೆಲ್ಲ ಅಭಿಪ್ರಾಯಕ್ಕೆ ಗೌರವ:'ಸುಪ್ರೀಂ'