ಉಚಿತ ಬಸ ಪ್ರಯಾಣಕ್ಕೆ 'ಪಿಂಕ್ ಸಹೇಲಿ'ಸ್ಮಾರ್ಟ್ ಕಾರ್ಡ್ ಕಡ್ಡಾಯ: ದೆಹಲಿ ಸರ್ಕಾರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರು ಇನ್ಮುಂದೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು 'ಪಿಂಕ್ ಸಹೇಲಿ' ಸ್ಮಾರ್ಟ್ ಕಾರ್ಡ್ ಹೊಂದಿರುವುದು ಕಡ್ಡಾಯ. ಆಗಸ್ಟ್ 1ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತಿದ್ದು, ಕಾರ್ಡ್ ಇಲ್ಲದ ಮಹಿಳೆಯರು ಈ ಸೌಲಭ್ಯ (ಉಚಿತ ಬಸ್ ಪ್ರಯಾಣ) ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.ಮಹಿಳಾ ಪ್ರಯಾಣಿಕ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರು ಇನ್ಮುಂದೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು 'ಪಿಂಕ್ ಸಹೇಲಿ' ಸ್ಮಾರ್ಟ್ ಕಾರ್ಡ್ ಹೊಂದಿರುವುದು ಕಡ್ಡಾಯ. ಆಗಸ್ಟ್ 1ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತಿದ್ದು, ಕಾರ್ಡ್ ಇಲ್ಲದ ಮಹಿಳೆಯರು ಈ ಸೌಲಭ್ಯ (ಉಚಿತ ಬಸ್ ಪ್ರಯಾಣ) ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.ಮಹಿಳಾ ಪ್ರಯಾಣಿಕರು ಈ 'ಪಿಂಕ್ ಸಹೇಲಿ' ಕಾರ್ಡ್ ಅನ್ನು ಪಡೆದುಕೊಳ್ಳಲು ವಿಳಂಬ ಮಾಡುತ್ತಿರುವುದನ್ನು ಗಮನಿಸಿದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ಗಳಲ್ಲಿ ಕಾರ್ಡ್ ಪಡೆಯುವಂತೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಪ್ರಾರಂಭಿಸಿದೆ.ಆಗಸ್ಟ್ 1ರಿಂದ ಜಾರಿಗೆ ಬರುವಂತೆ, ಪಿಂಕ್ ಸಹೇಲಿ ಸ್ಮಾರ್ಟ್ ಕಾರ್ಡ್ ಹೊಂದಿರುವ ಮಹಿಳಾ ಪ್ರಯಾಣಿಕರಿಗೆ ಮಾತ್ರ ಪಿಂಕ್ ಟಿಕೆಟ್ಗಳನ್ನು ನೀಡಲಾಗುತ್ತದೆ. ಅವರು ಬಸ್ ಹತ್ತುವಾಗ ಈ ಕಾರ್ಡ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಈ ಪ್ರಯಾಣಿಕರು ಯೋಜನೆಯ ನಿಯಮಗಳ ಪ್ರಕಾರ ಉಚಿತ ಬಸ್ ಪ್ರಯಾಣ ಸೇವೆ ಪಡೆಯಲಿದ್ದಾರೆ ಎಂದು ಡಿಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.ಉಚಿತ ಬಸ್ ಪ್ರಯಾಣದ ಪ್ರಯೋಜನವನ್ನು ಪಡೆಯಲು ಪ್ರಸ್ತುತ ಇರುವ ಕಾಗದ ಆಧಾರಿತ ಗುಲಾಬಿ ಟಿಕೆಟ್ ಅನ್ನು ಕ್ರಮೇಣ ರದ್ದುಗೊಳಿಸಿ ಸ್ಮಾರ್ಟ್ ಕಾರ್ಡ್ ಆಧಾರಿತ ವ್ಯವಸ್ಥೆಗೆ ಬದಲಾಯಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.2019ರಲ್ಲಿ ಗುಲಾಬಿ ಟಿಕೆಟ್ ಅನ್ನು ದೆಹಲಿಯಲ್ಲಿದ್ದ ಎಎಪಿ ಸರ್ಕಾರ ಪರಿಚಯಿಸಿತ್ತು. ಈ ಯೋಜನೆ ಮೂಲಕ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ₹10 ನೀಡಿದರೆ ಗುಲಾಬಿ ಬಣ್ಣದ ಟಿಕೆಟ್ ರೂಪದಲ್ಲಿ ಬಸ್ ಪಾಸ್ ವಿತರಿಸಲಾಗುತ್ತಿತ್ತು. ಆಗಸ್ಟ್ 1ರಿಂದ, ಪಿಂಕ್ ಸಹೇಲಿ ಕಾರ್ಡ್ ಇಲ್ಲದ ಮಹಿಳಾ ಪ್ರಯಾಣಿಕರಿಗೆ ಪಿಂಕ್ ಟಿಕೆಟ್ ನೀಡುವುದಿಲ್ಲ. ಅವರು ಡಿಟಿಸಿ ಮತ್ತು ಡಿಒಟಿ (ಕ್ಲಸ್ಟರ್) ಬಸ್ಗಳಲ್ಲಿ ಪ್ರಯಾಣಿಸಲು ನಿಗದಿಪಡಿಸಿದ ದರವನ್ನು ಪಾವತಿಸಿ ಟಿಕೆಟ್ ಖರೀದಿಸಬೇಕಾಗುತ್ತದೆ ಎಂದೂ ಡಿಟಿಸಿ ಹೇಳಿದೆ.'ಪಿಂಕ್ ಸಹೇಲಿ' ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲು ದೆಹಲಿ ಸರ್ಕಾರವು ನಗರದಾದ್ಯಂತ 50 ಅಧಿಕೃತ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಯೋಜನೆಗೆ ಅರ್ಹರಾಗಿರುವ ಎಲ್ಲಾ ಮಹಿಳೆಯರು ಸಾರಿಗೆ ಇಲಾಖೆ ಮತ್ತು ಡಿಟಿಸಿ ಕಾಲಕಾಲಕ್ಕೆ ನೀಡುವ ಸೂಚನೆಗಳ ಪ್ರಕಾರ ನೋಟಿಫೈಡ್ ಕೇಂದ್ರಗಳು ಮತ್ತು ಕೌಂಟರ್ಗಳಿಂದ ಸ್ಮಾರ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.ಇಲ್ಲಿಯವರೆಗೆ ನಗರದಾದ್ಯಂತ ಸುಮಾರು 11 ಲಕ್ಷ ಕಾರ್ಡ್ಗಳನ್ನು ವಿತರಿಸಲಾಗಿದೆ. ಜುಲೈ ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು 13 ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪಿಂಕ್ ಕಾರ್ಡ್ ಬಳಸಿ ಸಾರಿಗೆ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಇದಲ್ಲದೆ ದೆಹಲಿ ಮೆಟ್ರೊ ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲೂ (ಆರ್ಆರ್ಟಿಎಸ್) ಹಣ ಪಾವತಿ ಮಾಡುವ ಮೂಲಕ ಇದೇ ಕಾರ್ಡ್ ಬಳಸಿ ಪ್ರಯಾಣಿಸಬಹುದು ಎಂದು ಸರ್ಕಾರ ತಿಳಿಸಿತ್ತು.ದೆಹಲಿ ಮಹಿಳೆರಿಗೆ ಉಚಿತ ಬಸ್ ಪ್ರಯಾಣಕ್ಕೆ ಪಿಂಕ್ ಕಾರ್ಡ್: ಏನಿದರ ವಿಶೇಷತೆ?