ಇಂಗ್ಲೆಂಡ್ ವಿರುದ್ಧ ಹೀನಾಯ ಸೋತು 3 ಕೆಟ್ಟ ಸಾಧನೆ ಬರೆದ ಭಾರತ
ಬಿಸ್ಟಲ್: ಭಾರತದ (Team India) ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ (England) ಟಿ20 ಸರಣಿಯನ್ನು ಜಯಗಳಿಸಿದೆ. 4ನೇ ಟಿ20 (T20) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 158 ರನ್ ಹೊಡೆಯಿತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಇನ್ನು 37 ಎಸೆತ ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂ

ಬಿಸ್ಟಲ್: ಭಾರತದ (Team India) ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ (England) ಟಿ20 ಸರಣಿಯನ್ನು ಜಯಗಳಿಸಿದೆ. 4ನೇ ಟಿ20 (T20) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 158 ರನ್ ಹೊಡೆಯಿತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಇನ್ನು 37 ಎಸೆತ ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು 159 ರನ್ ಹೊಡೆಯಿತು. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 3 ಪಂದ್ಯಗಳನ್ನು ಗೆದ್ದು ಟ್ರೋಫಿ ಗೆದ್ದುಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. Captain in full flow! Shreyas Iyer makes his intentions clear, smashing Adil Rashid for a towering six. #ENGvIND 4th T20I Streaming LIVE on JioHotstar! pic.twitter.com/2MfRMTCmpG — Star Sports (@StarSportsIndia) July 9, 2026 ಭಾರತದ ಪರ ಶ್ರೇಯಸ್ ಅಯ್ಯರ್ ಔಟಾಗದೇ 80 ರನ್(49 ಎಸೆತ, 4 ಬೌಂಡರಿ, 5 ಸಿಕ್ಸ್), ಶಿವಂ ದುಬೆ 22 ರನ್(23 ಎಸೆತ, 2 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಇದನ್ನೂ ಓದಿ: We Want Sanju – ಟೀಂ ಇಂಡಿಯಾ ಆಟಗಾರರ ಮುಂದೆ ತೀವ್ರ ಆಕ್ರೋಶ ಹೊರಹಾಕಿದ ಅಭಿಮಾನಿಗಳು ಇಂಗ್ಲೆಂಡ್ ಪರ ಫಿಲ್ ಸಾಲ್ಟ್ ಔಟಾಗದೇ 59 ರನ್(42 ಎಸೆತ, 9 ಬೌಂಡರಿ, 1 ಸಿಕ್ಸ್), ನಾಯಕ ಹ್ಯಾರಿ ಬ್ರೂಕ್ 79 ರನ್(35 ಎಸೆತ, 8 ಬೌಂಡರಿ, 4 ಸಿಕ್ಸ್) ಹೊಡೆದರು. ಈ ಪಂದ್ಯವನ್ನು ಸೋಲುವ ಮೂಲಕ ಭಾರತ 3 ಕೆಟ್ಟ ಇತಿಹಾಸ ಬರೆದಿದೆ. ಕೆಟ್ಟ ಸಾಧನೆ – ಭಾರತ ತಂಡವು ಇಂಗ್ಲೆಂಡ್ ವಿರುದ್ಧ 2+ ಪಂದ್ಯಗಳ ಟಿ20 ಸರಣಿಯನ್ನು ಸೋತಿದ್ದು ಇದೇ ಮೊದಲು. – 2019 ರ ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಮೊದಲ ದ್ವಿಪಕ್ಷೀಯ ಸರಣಿಯನ್ನು ಸೋತಿದೆ. – 2019 ರ ನಂತರ ಭಾರತ ತಂಡವು ಸತತವಾಗಿ 2 ಟಿ20 ಸರಣಿಯನ್ನು ಸೋತಿದೆ. ಈ ಮೊದಲು ಐರ್ಲೆಂಡ್ ವಿರುದ್ಧ ಭಾರತ ಸೋತಿತ್ತು.