ಫಿಫಾ ವಿಶ್ವಕಪ್ನಲ್ಲಿ ಮೊರಾಕ್ಕೋ ಸೋಲಿನ ಬೆನ್ನಲ್ಲೇ ಹಿಂಸಾಚಾರ; ಪ್ಯಾರಿಸ್, ಲಂಡನ್ನಲ್ಲಿ ಮುಸ್ಲಿಂ ವಲಸಿಗರ ಹುಚ್ಚಾಟ
– ಪೊಲೀಸರ ಮೇಲೆಯೇ ಕಲ್ಲು, ಬಾಟಲಿ, ಪಟಾಕಿ ಎಸೆತ – ಯುರೋಪಿನ ಹಲವು ನಗರಗಳಲ್ಲಿ ಉದ್ವಿಗ್ನ ವಾತಾವರಣ ಲಂಡನ್: ಫಿಫಾ ವಿಶ್ವಕಪ್ (FIFA World cup) ಪಂದ್ಯದಲ್ಲಿ ಮೊರಾಕ್ಕೋ (Morocco Fans) ತಂಡ ಸೋತ ಬೆನ್ನಲ್ಲೇ ಯುರೋಪಿನ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಲಂಡನ್, (London Violence) ಪ್ಯಾರಿಸ್ ಹಾಗೂ ನೆದರ್ಲ್ಯಾಂಡ್ಸ್ನ ಹಲವು ನಗರಗಳಲ್ಲಿ ಮೊರಾಕ್ಕೋ

– ಪೊಲೀಸರ ಮೇಲೆಯೇ ಕಲ್ಲು, ಬಾಟಲಿ, ಪಟಾಕಿ ಎಸೆತ – ಯುರೋಪಿನ ಹಲವು ನಗರಗಳಲ್ಲಿ ಉದ್ವಿಗ್ನ ವಾತಾವರಣ ಲಂಡನ್: ಫಿಫಾ ವಿಶ್ವಕಪ್ (FIFA World cup) ಪಂದ್ಯದಲ್ಲಿ ಮೊರಾಕ್ಕೋ (Morocco Fans) ತಂಡ ಸೋತ ಬೆನ್ನಲ್ಲೇ ಯುರೋಪಿನ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಲಂಡನ್, (London Violence) ಪ್ಯಾರಿಸ್ ಹಾಗೂ ನೆದರ್ಲ್ಯಾಂಡ್ಸ್ನ ಹಲವು ನಗರಗಳಲ್ಲಿ ಮೊರಾಕ್ಕೋ ಮೂಲದ ವಲಸಿಗರು ರಸ್ತೆಗಿಳಿದು ಗಲಾಟೆ ನಡೆಸಿದ ಘಟನೆ ನಡೆದಿದೆ. ಲಂಡನ್ನ ವೆಸ್ಟ್ ಎಂಡ್ ಪ್ರದೇಶದ ಎಡ್ಜ್ವೇರ್ ರೋಡ್ನಲ್ಲಿ ನೂರಾರು ಮಂದಿ ಜಮಾಯಿಸಿ ರಸ್ತೆ ತಡೆ ನಡೆಸಿದ್ದಾರೆ. ಇದರಿಂದ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಗಲಭೆಕೋರರು ಕಲ್ಲು, ಬಾಟಲಿ ಹಾಗೂ ಪಟಾಕಿಗಳನ್ನು ಎಸೆದಿದ್ದಾರೆ. ಈ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ಚೀನಾ ಪ್ರವಾಹದ ಮಧ್ಯೆ 900ಕ್ಕೂ ಹೆಚ್ಚು ವಿಷ ಹಾವುಗಳು ನಾಪತ್ತೆ – ನೀರಿಗೆ ಇಳಿಯಬೇಡಿ, ಜನರಿಗೆ ಸೂಚನೆ ಗಲಭೆಕೋರರು ಬಸ್ಗಳು ಮತ್ತು ಇತರ ವಾಹನಗಳ ಮೇಲೆ ಹತ್ತಿ ದಾಂಧಲೆ ನಡೆಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲೂ ಪಂದ್ಯ ಮುಗಿದ ತಕ್ಷಣ ಕೆಲ ಗುಂಪುಗಳು ರಸ್ತೆಗಿಳಿದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲು ಯತ್ನಿಸಿವೆ. ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದ್ದ ಕಾರಣ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ 20 ಸಾವಿರಕ್ಕೂ ಹೆಚ್ಚು ಸಶಸ್ತ್ರ ಪೊಲೀಸರನ್ನು ನಿಯೋಜಿಸಿತ್ತು. ಹಲವು ಕಡೆ ಪೊಲೀಸರು ಮತ್ತು ಗಲಭೆಕೋರರ ನಡುವೆ ಘರ್ಷಣೆ ನಡೆದಿದೆ. ಇದೇ ರೀತಿಯ ಘಟನೆಗಳು ನೆದರ್ಲ್ಯಾಂಡ್ಸ್ನ ಆಮ್ಸ್ಟರ್ಡ್ಯಾಮ್, ರೋಟರ್ಡ್ಯಾಮ್ ಮತ್ತು ದಿ ಹೇಗ್ ನಗರಗಳಲ್ಲೂ ವರದಿಯಾಗಿವೆ. ಇದನ್ನೂ ಓದಿ: ಯುಎಸ್ ಫೆಡ್ನ ಪ್ರಮುಖ ನೀತಿ ಪರಿಶೀಲನಾ ಕಾರ್ಯಪಡೆಗೆ ರಘುರಾಮ್ ರಾಜನ್, ರಾಜ್ ಚೆಟ್ಟಿ, ಆಶಾ ಶರ್ಮಾ ನೇಮಕ