ಶೀಘ್ರವೇ ಬಿಜೆಪಿ-ಜೆಡಿಎಸ್ ಮಧ್ಯೆ ಸಮನ್ವಯ ಸಮಿತಿ ರಚನೆ: ಹೆಚ್ಡಿಕೆ
– ಸಿಎಂ ಜಿಲ್ಲಾ ಪ್ರವಾಸ ಮಾಡ್ತಿರೋದು SIR ದುರುಪಯೋಗ ಮಾಡಲು ಅಂತ ಕೇಂದ್ರ ಸಚಿವರ ಆರೋಪ ಬೆಂಗಳೂರು: ಶೀಘ್ರವೇ ಬಿಜೆಪಿ-ಜೆಡಿಎಸ್ (BJP-JDS) ಮಧ್ಯೆ ಸಮನ್ವಯ ಸಮಿತಿ ಸಭೆ ಆಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ಜೊತೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ

– ಸಿಎಂ ಜಿಲ್ಲಾ ಪ್ರವಾಸ ಮಾಡ್ತಿರೋದು SIR ದುರುಪಯೋಗ ಮಾಡಲು ಅಂತ ಕೇಂದ್ರ ಸಚಿವರ ಆರೋಪ ಬೆಂಗಳೂರು: ಶೀಘ್ರವೇ ಬಿಜೆಪಿ-ಜೆಡಿಎಸ್ (BJP-JDS) ಮಧ್ಯೆ ಸಮನ್ವಯ ಸಮಿತಿ ಸಭೆ ಆಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ಜೊತೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಆಗಾಗ ಭೇಟಿ ಆಗ್ತಾ ಇದ್ದೇವೆ. ರಾಜ್ಯದ ರಾಜಕೀಯದ ಬಗ್ಗೆ ವಿಜಯೇಂದ್ರ ಜೊತೆ ಚರ್ಚೆ ಆಗಿದೆ. ಸಮನ್ವಯ ಸಮಿತಿ ಬಗ್ಗೆ ಈಗಾಗಲೇ ಅಂತಿಮ ಆಗಿದೆ. ಶೀಘ್ರವೇ ಅಂತಿಮ ಆಗುತ್ತದೆ ಎಂದರು. ಹಿರಿಯೂರು ಉಪಚುನಾವಣೆಗೆ ಟಿಕೆಟ್ ಕೊಡಿ ಅಂತ ಮನವಿ ಮಾಡಿದ್ದೇವೆ ಅಂತ ಇದೇ ವೇಳೆ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್ಡಿಕೆ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಾಸಗಿ ಹೋಟೆಲ್ನಲ್ಲಿ ಇಬ್ಬರು ನಾಯಕರು 30 ನಿಮಿಷಗಳ ಕಾಲ ಚರ್ಚೆ ಮಾಡಿದರು. ಸಭೆಯಲ್ಲಿ ಹಿರಿಯೂರು-ಧಾರವಾಡ ಗ್ರಾಮೀಣ ಭಾಗದ ಉಪಚುನಾವಣೆ ಕುರಿತು ಚರ್ಚೆ ಆಯ್ತು. ಬಿಜೆಪಿ-ಜೆಡಿಎಸ್ಗೆ ಒಂದೊಂದು ಕ್ಷೇತ್ರದ ಬಗ್ಗೆ ಜೆಡಿಎಸ್ನಿಂದ ಪ್ರಸ್ತಾಪ ಮಾಡಲಾಗಿದೆ. 1+1 ಸೂತ್ರದ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನು ಎರಡು ಕ್ಷೇತ್ರದಲ್ಲಿ ನಮ್ಮ ಸಂಘಟನೆ ಪ್ರಬಲವಾಗಿದೆ ಎಂದು ವಿಜಯೇಂದ್ರ ಪ್ರಸ್ತಾಪ ಮಾಡಿದ್ದು, ದೆಹಲಿಯಲ್ಲಿ ಹೈಕಮಾಂಡ್ ಬಳಿ ಜೊತೆ ಚರ್ಚೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ರಾಜ್ಯ ಸರ್ಕಾರ ಶಾಶ್ವತ ನಿವಾಸ ಪ್ರಮಾಣ ಪತ್ರ ನಿಡ್ತಿರೋದು ಅಕ್ರಮ ವಲಸಿಗರನ್ನು ಸಕ್ರಮ ಮಾಡಲು ಎಂಬ ಬಿಜೆಪಿ ಆರೋಪಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಧ್ವನಿಗೂಡಿಸಿದ್ದಾರೆ. ಜೆಪಿ ಭವನದಲ್ಲಿ ಮಾತನಾಡಿದ ಅವರು, ಬಿಜೆಪಿ ಹೇಳಿಕೆಗೆ ನಮ್ಮ ಸಹಮತ ಇದೆ. ನಿಜವಾದ ಮತದಾರರ ಉಳಿಸೋಕೆ SIR ಮಾಡ್ತಿರೋದು. ಚುನಾವಣಾ ಆಯೋಗ ಗೊಂದಲಗಳನ್ನ ಸರಿ ಮಾಡಬೇಕು ಅನ್ನೋದು ನಮ್ಮ ಒತ್ತಾಯ ಎಂದರು. ಇದನ್ನೂ ಓದಿ: ಮುಚ್ಚೋ ಸ್ಥಿತಿಗೆ ಸರ್ಕಾರಿ ಶಾಲೆ – ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ ಜೋಶಿ ಕಿಡಿ ರಾಜ್ಯದ ಸಿಎಂ ಪ್ರವಾಸ ಮಾಡ್ತಿರೋದೇ SIR ದುರುಪಯೋಗ ಮಾಡಿಕೊಳ್ಳೋಕೆ. ವಿಭಾಗವಾರು ಸಭೆ ಮಾಡ್ತಾ ಇರೋದು ಬರ, ಅಭಿವೃದ್ಧಿಗಾಗಿ ಅಲ್ಲ. SIR ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಡೋಕೆ ಸಿಎಂ ಜಿಲ್ಲಾ ಪ್ರವಾಸ ಮಾಡ್ತಾ ಇದ್ದಾರೆ. SIR ದುರುಪಯೋಗ ಮಾಡಿಕೊಳ್ಳೋಕೆ ಸಿಎಂ ಪ್ರವಾಸ ಮಾಡ್ತಾ ಇದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.