ಚುರುಮುರಿ: ಟ್ರಂಪಾಯಣ!
‘ಹಲೋ... ಟ್ರಂಪ್ ಜೀ, ನಾನು ತೆಪರೇಸಿ ಫ್ರಂ ಇಂಡಿಯಾ... ನಮ್ ಟೀವಿಗೆ ನಿಮ್ ಇಂಟ್ರೂ ಬೇಕಿತ್ತು...’‘ವಾಟ್ ಟೆಪ್ರೇಶಿ? ನೈಸ್ ನೇಮ್, ಕನ್ನಡ ನಂಗೆ ಅರ್ಥ ಆಗುತ್ತೆ, ಇಂಟ್ರೂ ಬೇಕಾ? ಕೇಳಿ, ಪ್ರಶ್ನೆ ಕೇಳಿ...’‘ಹೌ ಆರ್ ಯೂ ಟ್ರಂಪ್ ಜೀ...’‘ಆ್ಯಮ್ ವಂಡರ್ಫುಲ್... ಜಗತ್ತಿನಲ್ಲಿ ನನ್ನಷ್ಟು ಯಾರೂ ಚೆನ್ನಾಗಿ ಇರೋಕೆ ಸಾಧ್ಯ ಇಲ್ಲ...’ನೀನು ಚೆನ್ನಾಗಿರ್ತಿ ಬಿಡಪ, ನಿನ್ನಿಂ

‘ಹಲೋ... ಟ್ರಂಪ್ ಜೀ, ನಾನು ತೆಪರೇಸಿ ಫ್ರಂ ಇಂಡಿಯಾ... ನಮ್ ಟೀವಿಗೆ ನಿಮ್ ಇಂಟ್ರೂ ಬೇಕಿತ್ತು...’‘ವಾಟ್ ಟೆಪ್ರೇಶಿ? ನೈಸ್ ನೇಮ್, ಕನ್ನಡ ನಂಗೆ ಅರ್ಥ ಆಗುತ್ತೆ, ಇಂಟ್ರೂ ಬೇಕಾ? ಕೇಳಿ, ಪ್ರಶ್ನೆ ಕೇಳಿ...’‘ಹೌ ಆರ್ ಯೂ ಟ್ರಂಪ್ ಜೀ...’‘ಆ್ಯಮ್ ವಂಡರ್ಫುಲ್... ಜಗತ್ತಿನಲ್ಲಿ ನನ್ನಷ್ಟು ಯಾರೂ ಚೆನ್ನಾಗಿ ಇರೋಕೆ ಸಾಧ್ಯ ಇಲ್ಲ...’ನೀನು ಚೆನ್ನಾಗಿರ್ತಿ ಬಿಡಪ, ನಿನ್ನಿಂದ ಯಾರಿಗೂ ನೆಮ್ದಿ ಇಲ್ಲ ಅಂತ ಒಳಗೇ ಗೊಣಗಿದ ತೆಪರೇಸಿ, ‘ಅಲ್ಲ, ಮತ್ತೆ ಯುದ್ಧ ಶುರು ಮಾಡ್ತೀರಂತೆ?’ ಎಂದ.‘ಎಸ್, ಶುರು ಮಾಡ್ತೀನಿ, ಬಿಡಲ್ಲ...’‘ನಮ್ಗೆ ಬಾಳ ತೊಂದ್ರೆ ಟ್ರಂಪ್ ಜೀ... ನೋಡಿ ಸೆನ್ಸೆಕ್ಸ್ ಇಳಿದೋಗಿದೆ, ಆಯಿಲ್ ಏರಿ ಕುಂತದೆ... ಮತ್ತೆ ಗ್ಯಾಸ್ ಪ್ರಾಬ್ಲಂ ಆಗುತ್ತಾ ಅಂತ...’‘ನೋ ನೋ... ನಿಮಗೇನೂ ತೊಂದ್ರೆ ಆಗಲ್ಲ...’‘ಹಂಗಲ್ಲ, ಹೋದ್ಸಲ ಗ್ಯಾಸ್ ಖಾಲಿಯಾದಾಗ ತವರು ಮನಿಗೆ ಹೋದ ನನ್ನೆಂಡ್ತಿ ಇನ್ನೂ ಬಂದಿಲ್ಲ...’‘ಓ ಐಸೀ... ನಿಮ್ಮನಿ ಸಿಲಿಂಡರ್ ಹಿಡ್ಕಂಡು ನೀವೂ ಅಲ್ಲಿಗೇ ಹೋಗ್ಬಿಡಿ, ಪ್ರಾಬ್ಲಂ ಸಾಲ್ವ್!’‘ವಾವ್, ವಾಟ್ ಎ ಗ್ರೇಟ್ ಸಲ್ಯೂಶನ್..!’‘ನಾನು ಎಷ್ಟು ದೇಶಗಳ ಪ್ರಾಬ್ಲಂ ಸಾಲ್ವ್ ಮಾಡಿದೀನಿ, ಆದ್ರೂ ನಂಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡ್ಲಿಲ್ಲ...’‘ಡೋಂಟ್ ವರಿ ಟ್ರಂಪ್ ಜೀ, ನಿಮ್ ಫ್ರೆಂಡು ನಮೋ ಸಾಹೇಬ್ರತ್ರ ಬಾಳ ಪ್ರಶಸ್ತಿ ಅದಾವು, ಅದ್ರಲ್ಲಿ ನಿಮಗೊಂದು ಕೊಡ್ಸಿದ್ರಾತು... ಅದಿರ್ಲಿ ನಿಮ್ ದೇಶದೋರು ಫುಟ್ಬಾಲ್ ಸೋತೋದ್ರಲ್ಲ?’‘ಸೋತ್ರೂ ಕಪ್ ನಮ್ದೇ...’‘ಕಪ್ ನಿಮ್ದಾ? ಹೆಂಗೆ?’‘ಫಿಫಾಗೆ ಹೇಳಿ ನಮ್ ಟೀಂಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಿಸ್ತೀನಿ...’ವಾವ್! ಗುಡ್ ಐಡಿಯಾ... ನೀವು ಏನೆಲ್ಲ ಮಾಡ್ತೀರಿ, ನಮ್ ಬಾಸ್ಗೆ ಹೇಳಿ ನನ್ ಸ್ಯಾಲರಿ ಜಾಸ್ತಿ ಮಾಡಿಸ್ತೀರಾ?’ಟ್ರಂಪ್ ‘ಮಾಡಿಸ್ತೀನಿ’ ಅನ್ನೋದ್ರೊಳಗೆ ಯಾರೋ ಕರೆದಂತಾಗಿ ಆಫೀಸಲ್ಲಿ ತೂಕಡಿಸುತ್ತಿದ್ದ ತೆಪರೇಸಿಗೆ ಎಚ್ಚರ ವಾಯಿತು. ನೋಡಿದರೆ ಎದುರಿಗೆ ಕೆಂಗಣ್ಣಿನ ಸಂಪಾದಕರು!