ಕುವೈತ್ನಿಂದ 15 ವರ್ಷಗಳ ಹೂಡಿಕೆದಾರರ ರೆಸಿಡೆನ್ಸಿ ವೀಸಾ: ಯಾರು ಅರ್ಹರು?
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಕುವೈತ್ ಸರ್ಕಾರ 15 ವರ್ಷದ 'ಇನ್ವೆಸ್ಟರ್ ರೆಸಿಡೆನ್ಸಿ ಪರ್ಮಿಟ್' (Investor Residency Permit) ಪಡೆಯಲು ಅರ್ಹತಾ ಮಾನದಂಡಗಳನ್ನು ಪ್ರಕಟಿಸಿದೆ. ಈ ಮೂಲಕ ದೀರ್ಘಾವಧಿಯ ರೆಸಿಡೆನ್ಸಿ ವೀಸಾ ಯೋಜನೆ ಅಧಿಕೃತವಾಗಿ ಜಾರಿಗೆ ಬಂದಿದೆ.ಈ ಯೋಜನೆಯು ಕುವೈತ್ನಲ್ಲಿ ಅರ್ಹ ಹೂಡಿಕೆ ಸ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಕುವೈತ್ ಸರ್ಕಾರ 15 ವರ್ಷದ 'ಇನ್ವೆಸ್ಟರ್ ರೆಸಿಡೆನ್ಸಿ ಪರ್ಮಿಟ್' (Investor Residency Permit) ಪಡೆಯಲು ಅರ್ಹತಾ ಮಾನದಂಡಗಳನ್ನು ಪ್ರಕಟಿಸಿದೆ. ಈ ಮೂಲಕ ದೀರ್ಘಾವಧಿಯ ರೆಸಿಡೆನ್ಸಿ ವೀಸಾ ಯೋಜನೆ ಅಧಿಕೃತವಾಗಿ ಜಾರಿಗೆ ಬಂದಿದೆ.ಈ ಯೋಜನೆಯು ಕುವೈತ್ನಲ್ಲಿ ಅರ್ಹ ಹೂಡಿಕೆ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ವಿದೇಶಿ ಹೂಡಿಕೆದಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಅನ್ವಯವಾಗಲಿದೆ.ಬುರ್ಜ್ ಖಲೀಫಾದಲ್ಲಿ ಕಲಾಕೃತಿ ಪ್ರದರ್ಶನಕ್ಕೆ ಜಾಗತಿಕ ಕಲಾವಿದರಿಗೆ ಮುಕ್ತ ಆಹ್ವಾನಯಾರು ಅರ್ಹರು?ಹೂಡಿಕೆ ಸಂಸ್ಥೆಗಳ ಮಾಲೀಕರುಪಾಲುದಾರರುನಿರ್ದೇಶಕರುಹಿರಿಯ ಆಡಳಿತಾಧಿಕಾರಿಗಳು ಇವರ ಪತಿ ಅಥವಾ ಪತ್ನಿ, ಮಕ್ಕಳು ಹಾಗೂ ಪೋಷಕರಿಗೂ ಈ ರೆಸಿಡೆನ್ಸಿ ಸೌಲಭ್ಯ ದೊರೆಯಲಿದೆ.ಅರ್ಜಿ ಸಲ್ಲಿಸುವವರು ಯಾವುದೇ ಅಪರಾಧ ಪ್ರಕರಣ ಹೊಂದಿರಬಾರದು. ಅಲ್ಲದೆ, ಕನಿಷ್ಠ 6 ತಿಂಗಳ ಮಾನ್ಯತೆ ಇರುವ ಪಾಸ್ಪೋರ್ಟ್ ಹೊಂದಿರಬೇಕು.ಚೀನಾ, ತೈವಾನ್ ಕರಾವಳಿಗೆ ಮತ್ತೊಂದು ಭೀಕರ ಚಂಡಮಾರುತ ಅಪ್ಪಳಿಸುವ ಭೀತಿಹೂಡಿಕೆ ಷರತ್ತುಗಳೇನು?ರೆಸಿಡೆನ್ಸಿ ಪರ್ಮಿಟ್ ಪಡೆಯಲು ಸಂಬಂಧಿಸಿದ ಕಂಪನಿಯು ಕೆಲವು ಷರತ್ತುಗಳನ್ನು ಪೂರೈಸಿರಬೇಕು.ಕುವೈತ್ನಲ್ಲಿ ನೇರ ವಿದೇಶಿ ಹೂಡಿಕೆಗಾಗಿ ಸ್ಥಾಪಿಸಲಾದ ಕಂಪನಿ ಅಥವಾ ವಿದೇಶಿ ಕಂಪನಿಯ ಶಾಖೆಯಾಗಿರಬೇಕು.Kuwait Direct Investment Promotion Authority (ಕೆಡಿಐಪಿಎ) ನೀಡಿರುವ ಮಾನ್ಯ ಹೂಡಿಕೆ ಪರವಾನಗಿ ಹೊಂದಿರಬೇಕು.ಕುವೈತ್ ನಾಗರಿಕರಿಗೆ ಉದ್ಯೋಗ ನೀಡುವ 'ಕುವೈತೀಕರಣ' (Kuwaitization) ನಿಯಮಗಳನ್ನು ಪಾಲಿಸಿರಬೇಕು.ಕಂಪನಿಯ ಒಟ್ಟು ಹೂಡಿಕೆ ಮೌಲ್ಯ ಕನಿಷ್ಠ 5 ಮಿಲಿಯನ್ ಕುವೈತ್ ದಿನಾರ್ (ಸುಮಾರು ₹143 ಕೋಟಿ) ಇರಬೇಕು.ಕುವೈತ್ನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 1 ಮಿಲಿಯನ್ ಕುವೈತ್ ದಿನಾರ್ (ಸುಮಾರು ₹28.6 ಕೋಟಿ) ಪಾವತಿಸಿದ ಬಂಡವಾಳ ಇರಬೇಕು.ಈ ಯೋಜನೆ ಏಕೆ ಮಹತ್ವದ್ದು?ಕುವೈತ್ ಅನ್ನು ಜಾಗತಿಕ ಹೂಡಿಕೆ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ದೀರ್ಘಾವಧಿಯ ರೆಸಿಡೆನ್ಸಿ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಅರ್ಹ ವಿದೇಶಿ ಹೂಡಿಕೆದಾರರು 15 ವರ್ಷಗಳವರೆಗೆ ಕುವೈತ್ನಲ್ಲಿ ವಾಸಿಸುವ ಅವಕಾಶ ಪಡೆಯಲಿದ್ದಾರೆ.ಈ ಯೋಜನೆಯನ್ನು ಮೊದಲ ಬಾರಿಗೆ 2013ರಲ್ಲಿ ಪರಿಚಯಿಸಲಾಗಿತ್ತು. ಆದರೆ, 2026ರ ಜನವರಿಯಲ್ಲಿ ರೆಸಿಡೆನ್ಸಿ ಅವಧಿಯನ್ನು 15 ವರ್ಷಗಳಿಗೆ ವಿಸ್ತರಿಸಲಾಗಿತ್ತು. ಅರ್ಹತಾ ಮಾನದಂಡಗಳು ಪ್ರಕಟವಾಗದ ಕಾರಣ ಯೋಜನೆ ಜಾರಿಯಾಗಿರಲಿಲ್ಲ. ಇದೀಗ ಹೊಸ ನಿಯಮಗಳು ಪ್ರಕಟವಾಗಿರುವುದರಿಂದ ಯೋಜನೆ ಕಾರ್ಯರೂಪಕ್ಕೆ ಬಂದಿದೆ.ಅಮೆರಿಕದಲ್ಲಿ H-1B, ಗ್ರೀನ್ ಕಾರ್ಡ್, ವಿದ್ಯಾರ್ಥಿ ವೀಸಾಗೆ ಹೊಸ ನಿಯಮ? ಜಿಸಿಸಿ ಏಕೀಕೃತ ಪ್ರವಾಸಿ ವೀಸಾ ಯೋಜನೆಯೂ ಶೀಘ್ರಇದೇ ವೇಳೆ, ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಸದಸ್ಯ ರಾಷ್ಟ್ರಗಳು ಪ್ರಸ್ತಾಪಿಸಿರುವ 'ಜಿಸಿಸಿ ಗ್ರ್ಯಾಂಡ್ ಟೂರ್ಸ್ ಯುನಿಫೈಡ್ ಟೂರಿಸ್ಟ್ ವೀಸಾ' ಯೋಜನೆಯ ಬಗ್ಗೆಯೂ ಕುವೈತ್ ಆಲೋಚಿಸುತ್ತಿದೆ. ಈ ವೀಸಾ ಜಾರಿಗೆ ಬಂದರೆ, ಒಂದೇ ವೀಸಾದ ಮೂಲಕ ಜಿಸಿಸಿ ಸದಸ್ಯ ರಾಷ್ಟ್ರಗಳಿಗೆ ಪ್ರವಾಸ ಮಾಡಲು ಅವಕಾಶ ದೊರೆಯಲಿದೆ. ಈ ಯೋಜನೆಯನ್ನು 2026ರಲ್ಲೇ ಜಾರಿಗೆ ತರಲು ಉದ್ದೇಶಿಸಲಾಗಿದೆ.ಆಧಾರ: ಕೆಡಿಐಪಿಎ ಹಾಗೂ ಕುವೈತ್ ಸರ್ಕಾರ.