ಸೇಪಿಯಂಟ್ ಕಾಲೇಜಿನಲ್ಲಿ ಬ್ಯುಸಿನೆಸ್ ಇನ್ಕ್ಯುಬೇಷನ್ ಕೇಂದ್ರ: ಸುಜಾತಾ ಬೋಪಣ್ಣ
ಮೈಸೂರು: ಇಲ್ಲಿನ ಮೇಟಗಳ್ಳಿಯಲ್ಲಿರುವ ಸೇಪಿಯಂಟ್ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ ಆರಂಭಿಸಿರುವ ‘ಬ್ಯುಸಿನೆಸ್ ಇನ್ಕ್ಯುಬೇಷನ್ ಕೇಂದ್ರ’ದ ಅಧಿಕೃತ ಉದ್ಘಾಟನೆ ಕಾರ್ಯಕ್ರಮವನ್ನು ಜುಲೈ 13ರಂದು ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಡೀನ್ ಸುಜಾತಾ ಬೋಪಣ್ಣ ತಿಳಿಸಿದರು.‘ಅಮೋಸಿಸ್ ಅಂಡ್ ವಿಲಿಂಕಿನ್’ ಎಂಬ ವಿದೇಶಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊ

ಮೈಸೂರು: ಇಲ್ಲಿನ ಮೇಟಗಳ್ಳಿಯಲ್ಲಿರುವ ಸೇಪಿಯಂಟ್ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ ಆರಂಭಿಸಿರುವ ‘ಬ್ಯುಸಿನೆಸ್ ಇನ್ಕ್ಯುಬೇಷನ್ ಕೇಂದ್ರ’ದ ಅಧಿಕೃತ ಉದ್ಘಾಟನೆ ಕಾರ್ಯಕ್ರಮವನ್ನು ಜುಲೈ 13ರಂದು ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಡೀನ್ ಸುಜಾತಾ ಬೋಪಣ್ಣ ತಿಳಿಸಿದರು.‘ಅಮೋಸಿಸ್ ಅಂಡ್ ವಿಲಿಂಕಿನ್’ ಎಂಬ ವಿದೇಶಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಈ ಕೇಂದ್ರ ತೆರೆಯಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ ಅಭಿವೃದ್ಧಿಗೆ ಪೂರಕವಾಗಿ ರೂಪಿಸಿರುವ ಕಾರ್ಯಕ್ರಮ ಇದಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.‘ಈ ಕೇಂದ್ರವು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿಗಳಿಂದ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಭವಿಷ್ಯದ ವ್ಯವಹಾರಗಳಿಗೆ ನೆರವಾಗುವ ಮಾಹಿತಿಯನ್ನು ಸಮರ್ಪಕವಾಗಿ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಬ್ಯಾಂಕ್ಗಳಿಂದ ಆರ್ಥಿಕ ನೆರವನ್ನು ಪಡೆಯಲು ಬೇಕಾದ ಮಾರ್ಗದರ್ಶನ ನೀಡಲಾಗುವುದು. ಉದ್ಯಮಿಗಳ ಜೊತೆಗೆ, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸಂಪರ್ಕ ಸಾಧಿಸಿ, ಸಲಹೆ ಕೊಡಿಸಲಾಗುವುದು’ ಎಂದು ಹೇಳಿದರು.ಪ್ರಾಚಾರ್ಯ ಕೆ. ಗಣೇಶ್, ಆಡಳಿತಾಧಿಕಾರಿ ಸುಜಿತ್ ಪಡಿವಾಲ್, ವಿದ್ಯಾರ್ಥಿಗಳಾದ ದೀಪಾ ಜೈನ್ ಹಾಗೂ ಕಿಯಾ ಇದ್ದರು.