ಬರ ಅಧ್ಯಯನಕ್ಕೆ ತಂಡ ರಚಿಸಿದ ಜೆಡಿಎಸ್; ನಾಲ್ಕು ತಂಡಗಳಿಗೆ ಯಾರು ಮುಖ್ಯಸ್ಥರು?
ಬೆಂಗಳೂರು: ರಾಜ್ಯದಲ್ಲಿ 2026ರ ಮುಂಗಾರು ವೈಪಲ್ಯದಿಂದಾಗಿ ಒಂದೆಡೆ ಭಾರಿ ಮಳೆ-ಪ್ರವಾಹದ ಹಾನಿಯಾದರೆ, ಮತ್ತೊಂದೆಡೆ ಶೇ.40ರಿಂದ ಶೇ43 ಮಳೆ ಕೊರತೆಯಿಂದ ಬರಗಾಲದ ಛಾಯೆ ಆವರಿಸಿದೆ. ನಾಡಿನ ರೈತರ ನೆರವಿಗೆ ಧಾವಿಸಲು ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್ಡಿಕುಮಾರಸ್ವಾಮಿ ಅವರ ಆದೇಶದಂತೆ ಪಕ್ಷದ ವತಿಯಿಂದ ರಾಜ್ಯಮಟ್ಟದ ನಾಲ್ಕು ಅಧ್ಯಯನ ತಂಡಗಳನ್ನು ರಚಿಸಲಾಗಿದ

ಬೆಂಗಳೂರು: ರಾಜ್ಯದಲ್ಲಿ 2026ರ ಮುಂಗಾರು ವೈಪಲ್ಯದಿಂದಾಗಿ ಒಂದೆಡೆ ಭಾರಿ ಮಳೆ-ಪ್ರವಾಹದ ಹಾನಿಯಾದರೆ, ಮತ್ತೊಂದೆಡೆ ಶೇ.40ರಿಂದ ಶೇ43 ಮಳೆ ಕೊರತೆಯಿಂದ ಬರಗಾಲದ ಛಾಯೆ ಆವರಿಸಿದೆ. ನಾಡಿನ ರೈತರ ನೆರವಿಗೆ ಧಾವಿಸಲು ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್ಡಿಕುಮಾರಸ್ವಾಮಿ ಅವರ ಆದೇಶದಂತೆ ಪಕ್ಷದ ವತಿಯಿಂದ ರಾಜ್ಯಮಟ್ಟದ ನಾಲ್ಕು ಅಧ್ಯಯನ ತಂಡಗಳನ್ನು ರಚಿಸಲಾಗಿದೆ.ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಸಿ.ಬಿ., ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಅವರನ್ನೊಳಗೊಂಡಂತೆ ಅಧ್ಯಯನ ತಂಡಗಳು, ಆಯಾ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು / ಮಾಜಿ ಸಚಿವರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚಿಸಿ ತಳಮಟ್ಟದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿವೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಮೈಸೂರು ವಿಭಾಗ: ಮಾಜಿ ಸಚಿವ ಹೆಚ್.ಡಿ. ರೇವಣ್ಣ (ಅಧ್ಯಕ್ಷರು)ಕರಾವಳಿ-ಮಲೆನಾಡು ವಿಭಾಗ : ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ (ಅಧ್ಯಕ್ಷರು)ಬೆಂಗಳೂರು ವಿಭಾಗ: ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು (ಅಧ್ಯಕ್ಷರು)ಕಲ್ಯಾಣ ಕರ್ನಾಟಕ & ಕಿತ್ತೂರು ಕರ್ನಾಟಕ ವಿಭಾಗಗಳು : ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, (ಅಧ್ಯಕ್ಷರು)