ಭೀಮಾತೀರದ ರೌಡಿಶೀಟರ್ ತುಳಸಿರಾಮ ಚಾಮರಾಜನಗರಕ್ಕೆ ಗಡಿಪಾರು
ವಿಜಯಪುರ: ಭೀಮಾತೀರದ (Bhimateera) ರೌಡಿಶೀಟರ್ ತುಳಸಿರಾಮನನ್ನು ಗಡಿಪಾರು ಮಾಡಲಾಗಿದ್ದು, ಚಾಮರಾಜನಗರ (Chamarajanagar) ಜೈಲಿನಲ್ಲಿ ಇರಿಸಲು ಆದೇಶ ಹೊರಡಿಸಲಾಗಿದೆ. ಭೀಮಾತೀರದ ಹಂತಕ ಬಾಗಪ್ಪ ಹರಿಜನ ಶಿಷ್ಯ ಆಗಿದ್ದ ತುಳಸಿರಾಮನನ್ನು ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಗಡಿಪಾರು ಮಾಡಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯಕ್ಕೆ ವಲಸೆ ಬಂದ್ರಾ ಬಾಂಗ್ಲ

ವಿಜಯಪುರ: ಭೀಮಾತೀರದ (Bhimateera) ರೌಡಿಶೀಟರ್ ತುಳಸಿರಾಮನನ್ನು ಗಡಿಪಾರು ಮಾಡಲಾಗಿದ್ದು, ಚಾಮರಾಜನಗರ (Chamarajanagar) ಜೈಲಿನಲ್ಲಿ ಇರಿಸಲು ಆದೇಶ ಹೊರಡಿಸಲಾಗಿದೆ. ಭೀಮಾತೀರದ ಹಂತಕ ಬಾಗಪ್ಪ ಹರಿಜನ ಶಿಷ್ಯ ಆಗಿದ್ದ ತುಳಸಿರಾಮನನ್ನು ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಗಡಿಪಾರು ಮಾಡಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯಕ್ಕೆ ವಲಸೆ ಬಂದ್ರಾ ಬಾಂಗ್ಲಾ ಪ್ರಜೆಗಳು? – 50ಕ್ಕೂ ಹೆಚ್ಚು ವಲಸಿಗರ ದಾಖಲೆ ಪರಿಶೀಲಿಸಿದ ಬಿಜೆಪಿ ಕಾರ್ಯಕರ್ತರು ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾಗಿರುವ ತುಳಸಿರಾಮ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದ. ತುಳಸಿರಾಮ ಓರ್ವ ವೃತ್ತಿಪರ ಅಪರಾಧಿ, ಸಮಾಜ ದ್ರೋಹಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಕರ್ನಾಟಕ ಅಕ್ರಮ ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಮಾದಕ ದ್ರವ್ಯ ಅಪರಾಧಿಗಳು, ಜೂಜುಕೋರರು, ಗೂಂಡಾಗಳು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ 1985 (ಗೂಂಡಾ ಕಾಯ್ದೆ) ಅಡಿಯಲ್ಲಿ ಬಂಧಿಸಲು ಆದೇಶ ಮಾಡಲಾಗಿತ್ತು. ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ನ್ಯಾಯ ಸಂಹಿತೆ-2023ರ ಅಡಿಯಲ್ಲಿ ವಿವಿಧ ಅಪರಾಧ ಎಸಗಿರುವ ತುಳಸಿರಾಮನನ್ನ ಗಡಿಪಾರು ಮಾಡಿ, ಜಿಲ್ಲಾ ಕಾರಾಗೃಹ, ಚಾಮರಾಜನಗರದಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಲಾಗಿದೆ.ಇದನ್ನೂ ಓದಿ: ಮಗುವನ್ನ ನೆಲಕ್ಕೆ ಬಡಿದು ಕೊಂದಿದ್ದ ಆರೋಪಿಗೆ 40 ದಿನದಲ್ಲಿ ಗಲ್ಲು ಶಿಕ್ಷೆ ಪ್ರಕಟ ತುಳಸಿ ನಗರದಲ್ಲಿ ನಡೆದ ರವಿ ಮೇಲಿನಕೇರಿ, ಸುಶೀಲ್ ಕಾಳೆ ಹತ್ಯೆ ಪ್ರಕರಣದ ಕಿಂಗ್ ಪಿನ್ ಆಗಿದ್ದ. ಈ ಮುಖಾಂತರ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕ್ರೈಂನಲ್ಲಿ ಸಕ್ರಿಯನಾಗಿದ್ದ. ಇದೇ ಕಾರಣಕ್ಕೆ ಇದೀಗ ಬಂಧಿಸಿ, ಗಡಿಪಾರು ಮಾಡಲಾಗಿದೆ.ಇದನ್ನೂ ಓದಿ: ಮೈನಾ ವಿಶೇಷ ಸಂಚಿಕೆಯಲ್ಲಿ ಧೂಳೆಬ್ಬಿಸಿದ ಧನುಷ್