ಜನ ನಾಯಗನ್ ಚಿತ್ರಕ್ಕೆ ಎ ಪ್ರಮಾಣಪತ್ರ: 12 ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ
ನಟ, ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜನವರಿ 9ರಂದೇ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಚಿತ್ರಕ್ಕೆ ‘ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ಯು ‘ಎ’ ಪ್ರಮಾಣಪತ್ರವನ್ನು ನೀಡಿದೆ.ಸುಮಾರು 3 ಗಂಟೆ 3 ನಿಮಿಷಗಳ ಈ ಚಿತ್ರವನ್ನು ಗುರುವಾರ (ಜುಲೈ 9) ಸೆನ್ಸ

ನಟ, ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜನವರಿ 9ರಂದೇ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಚಿತ್ರಕ್ಕೆ ‘ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ಯು ‘ಎ’ ಪ್ರಮಾಣಪತ್ರವನ್ನು ನೀಡಿದೆ.ಸುಮಾರು 3 ಗಂಟೆ 3 ನಿಮಿಷಗಳ ಈ ಚಿತ್ರವನ್ನು ಗುರುವಾರ (ಜುಲೈ 9) ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು, ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವ ಮುನ್ನ ಒಟ್ಟು 12 ಪ್ರಮುಖ ಬದಲಾವಣೆಗಳನ್ನು ಮಾಡುವಂತೆ ನಿರ್ದೇಶಿಸಿದೆ. ಜನ ನಾಯಗನ್ Vs ಸಿಗ್ಮಾ: ಒಂದೇ ದಿನ ಬಿಡುಗಡೆಯಾಗುತ್ತಾ ತಂದೆ-ಮಗನ ಸಿನಿಮಾ?ವಿಜಯ್ ನಟನೆಯ ‘ಜನ ನಾಯಗನ್’ ವಿಳಂಬ: ವಿತರಕರಿಗೆ ಮುಂಗಡ ಹಣ ಪಾವತಿಗೆ ಮುಂದಾದ KVNಸೆನ್ಸಾರ್ ಮಂಡಳಿಯಿಂದ 12 ದೃಶ್ಯಗಳಿಗೆ ಕತ್ತರಿಅಂಬೇಡ್ಕರ್ ಪುಸ್ತಕದ ಮುಖಪುಟ ಹಾಗೂ ಟಿವಿಕೆ: ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ಪುಸ್ತಕದ ಮುಖಪುಟದ ದೃಶ್ಯವನ್ನು ಬದಲಾಯಿಸಲು ಸೂಚಿಸಲಾಗಿದೆ. ಹಾಗೆಯೇ, ‘ಅಂಬೇಡ್ಕರ್... ರಿಂದ... ಟಿವಿಕೆ ಸತ್ತಂ’ ಎಂಬ ಸಂಭಾಷಣೆಯನ್ನು ಬದಲಾಯಿಸಲಾಗಿದ್ದು, ಆಡಿಯೊ ಮತ್ತು ವಿಡಿಯೊ ಎರಡರಲ್ಲೂ ಬರುವ ಟಿವಿಕೆ ಪಕ್ಷದ ಹೆಸರು ಹೇಳುವುದನ್ನು ಮ್ಯೂಟ್ ಮಾಡಲು ಆದೇಶಿಸಲಾಗಿದೆ.ರಾಷ್ಟ್ರಧ್ವಜದ ದೃಶ್ಯಕ್ಕೆ ಕತ್ತರಿ: ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಭಾರತದ ರಾಷ್ಟ್ರಧ್ವಜವನ್ನು ತೋರಿಸುವ ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ.ಧಾರ್ಮಿಕ ಹಾಗೂ ಅವಾಚ್ಯ ಶಬ್ದಗಳು: ಸಿನಿಮಾದಲ್ಲಿ ಬರುವ ‘ಭಾಗವತನ್’ ಮತ್ತು ‘ರಂಗನಾಥರ್’ ಎಂಬ ಪದಗಳ ಜೊತೆಗೆ ‘ದೇವಡಿಯಾ ಪೈಯಾ’ ಮತ್ತು ‘ಒತ್ತಾ’ ಎಂಬ ಅವಾಚ್ಯ ಶಬ್ದಗಳನ್ನು ತೆಗೆಯಲು ಆದೇಶಿಸಿದ್ದಾರೆ.ಓಂ ಮತ್ತು ಸದ್ದಾಂ ಹುಸೇನ್ ಪ್ರಸ್ತಾಪ: ‘ಆಪರೇಷನ್ ಮೇಲುಹಾ’ ಕುರಿತು ವಿವರಿಸುವ ಸಂಭಾಷಣೆಯಲ್ಲಿ ಬರುವ ‘ಓಂ’ ಎಂಬ ಪದವನ್ನು ತೆಗೆದುಹಾಕಲು ಸೂಚಿಸಲಾಗಿದೆ. ಇದೇ ದೃಶ್ಯದಲ್ಲಿ ಇರಾನ್ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ನನ್ನು ನೇಣಿಗೇರಿಸಿದ ಘಟನೆಯನ್ನು ಪ್ರಸ್ತಾಪಿಸುವ ಸಂಭಾಷಣೆಯನ್ನು ಮ್ಯೂಟ್ ಮಾಡಿ ಅಥವಾ ಬದಲಾಯಿಸಿ ಎಂದು ಹೇಳಿದೆ.ಜಿಲ್ಲಾಧಿಕಾರಿ ಕಚೇರಿಯ ಲಾಂಛನ: ಜಿಲ್ಲಾಧಿಕಾರಿಗಳ ಕಚೇರಿಯ ಲಾಂಛನವನ್ನು ಗೌರವವಿಲ್ಲದ ರೀತಿಯಲ್ಲಿ ಕೆಳಗೆ ಉರುಳಿಸುವ ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಅದರ ಜಾಗದಲ್ಲಿ ಬೇರೆ ದೃಶ್ಯವನ್ನು ಬಳಸಲು ನಿರ್ದೇಶನ ನೀಡಿದೆ.ಮಹಿಳಾ ವಿರೋಧಿ ಮತ್ತು ದೇಶವಿರೋಧಿ ಸಂಭಾಷಣೆ: ‘ಪೊನ್ನೋಡ... ಕುಡುತು ವಚಿರುಕ್ಕಾನು, ಉಡಂಬು ಇರುಕ್ಕೂನು’ ಎಂದು ಪ್ರಾರಂಭವಾಗುವ ಇಡೀ ಸಂಭಾಷಣೆ, ಸಿಲುವೈಲ್ಲಾ ಎಂಬ ಪದವನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆ. ಇದರೊಂದಿಗೆ ಇಂಡಿಯಾ ಎನ್ ಕಲ್ಲ ಬಿಲ್ಲ ವೈಕಾರೇನ್ (ಭಾರತವನ್ನು ನನ್ನ ಕಾಲಿಗೆ ಬೀಳುವಂತೆ ಮಾಡುತ್ತೇನೆ) ಎಂಬ ವಿವಾದಾತ್ಮಕ ಸಂಭಾಷಣೆಯನ್ನೂ ತೆಗೆಯಿರಿ ಎಂದಿದೆ.ಮಗುವನ್ನು ದಹನ ಮಾಡುವ ದೃಶ್ಯ: ಮಗುವನ್ನು ಜೀವಂತವಾಗಿ ಸುಡುವ ದೃಶ್ಯವನ್ನು ಸೆನ್ಸಾರ್ ಮಂಡಳಿ ಅಳಿಸಿ ಹಾಕಿದ್ದು, ಅದರ ಜಾಗಕ್ಕೆ ಬೇರೆ ದೃಶ್ಯವನ್ನು ಬಳಸಲು ತಿಳಿಸಿದೆ.ಹೆಸರು ಬದಲಾವಣೆ: ಚಿತ್ರದಲ್ಲಿ ಬರುವ ‘ಶೀಲಾ ರಾಣಿ’ ಎಂಬ ಹೆಸರನ್ನು ಸಿನಿಮಾದುದ್ದಕ್ಕೂ ಎಲ್ಲೆಲ್ಲಿ ಬಳಸಲಾಗಿದೆಯೋ, ಅಲ್ಲೆಲ್ಲಾ ಬದಲಾಯಿಸಲು ಮಂಡಳಿ ಸೂಚಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ 'ಜನ ನಾಯಗನ್' ಚಿತ್ರವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಮುಖ್ಯಮಂತ್ರಿ ವಿಜಯ್ ಜೊತೆಗೆ ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್ ನಟಿಸಿದ್ದಾರೆ.ವರದಿ: ಇಂಡಿಯಾ ಟುಡೇ